Thursday, October 1, 2026
Google search engine
Homeರಾಜ್ಯ25 ಕ್ವಿಂಟಲ್ ಕಡ್ಲೆ ಹಿಟ್ಟು, 22 ಕ್ವಿಂಟಲ್ ಮೆಣಸಿನಕಾಯಿ, 400 ಬಾಣಸಿಗರು: ಶ್ರೀ ಗವಿಸಿದ್ದೇಶ್ವರ ಜಾತ್ರೆಗೆ...

25 ಕ್ವಿಂಟಲ್ ಕಡ್ಲೆ ಹಿಟ್ಟು, 22 ಕ್ವಿಂಟಲ್ ಮೆಣಸಿನಕಾಯಿ, 400 ಬಾಣಸಿಗರು: ಶ್ರೀ ಗವಿಸಿದ್ದೇಶ್ವರ ಜಾತ್ರೆಗೆ ಪ್ರತಿದಿನ 8 ಲಕ್ಷ ಮಿರ್ಚಿ ಸಿದ್ಧತೆ

25 ಕ್ವಿಂಟಾಲ್ ಹಸಿಹಿಟ್ಟು, 22 ಕ್ವಿಂಟಾಲ್ ಹಸಿ ಮೆಣಸಿನಕಾಯಿ, 25 ಕೆಜಿ ಅಜವಾನ, 25 ಕೆಜಿ ಸೋಡಾಪುಡಿ, 60 ಕೆಜಿ ಉಪ್ಪು, 60 ಸಿಲಿಂಡರ್, 12 ಬ್ಯಾರೆಲ್ ಒಳ್ಳೆಎಣ್ಣೆ…

ಇದು 20 ದಿನಗಳ ಕಾಲ ನಡೆಯಲಿರುವ ಐತಿಹಾಸಿಕ ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಯಲ್ಲಿ ದಾಸೋಹದ ವೇಳೆ ಭಕ್ತರ ಹಸಿವು ತಣಿಸಲು ಸಿದ್ಧವಾಗುತ್ತಿರುವ ಬಿಸಿಬಿಸಿ ಮೆಣಸಿನಕಾಯಿ ಬಜ್ಜಿ!

ತನ್ನದೇ ಆದ ಇತಿಹಾಸ, ಪರಂಪರೆ ಇದೆ. ಜಾತ್ರೆಯ ಎರಡನೇ ದಿನವಾದ ಮಂಗಳವಾರ ಉತ್ತರ ಕರ್ನಾಟಕದ ಖ್ಯಾತ ಖಾದ್ಯವಾದ ಮಿರ್ಚಿ, ಜೋಳದ ರೊಟ್ಟಿ, ಮಾದಲಿ, ಜಿಲೆಬಿ, ಕರಚಿಕಾಯಿ ಸೇರಿದಂತೆ ನಾನಾ ಖಾದ್ಯಗಳನ್ನು ಪ್ರಸಾದದ ರೂಪದಲ್ಲಿ ಉಣ ಬಡಿಸಲಾಗುತ್ತದೆ.

ಜಾತ್ರೆಗೆ ಬರುವ ಲಕ್ಷಾಂತರ ಭಕ್ತರಿಗೆ ವಿಶೇಷವಾಗಿ ಭೋಜನ ವ್ಯವಸ್ಥೆ ಮಾಡಲಾಗಿದ್ದು, ಕೊಪ್ಪಳದ ಸಮಾನ ಮನಸ್ಕರ ಬಳಗ ಮಿರ್ಚಿ ಸಿದ್ದತೆ ಜವಾಬ್ದಾರಿ ಹೊತ್ತುಕೊಂಡಿದೆ. ಇವರೊಂದಿಗೆ ಜಾತ್ರೆಗೆ ಭಂದ ಭಕ್ತರು ಕೈಜೋಡಿಸಿದ್ದಾರೆ‌.

ಈ ಬಾರಿ ಮಿರ್ಚಿಗೆ ಸುಮಾರು 25 ಕ್ವಿಂಟಾಲ್ ಹಸಿಹಿಟ್ಟು, 22 ಕ್ವಿಂಟಾಲ್ ಹಸಿ ಮೆಣಸಿನಕಾಯಿ, 25 ಕೆಜಿ ಅಜವಾನ, 25 ಕೆಜಿ ಸೋಡಾಪುಡಿ, 60 ಕೆಜಿ ಉಪ್ಪು, 60 ಸಿಲಿಂಡರ್, 12 ಬ್ಯಾರೆಲ್ ಒಳ್ಳೆಎಣ್ಣೆ ಬಳಕೆ ಮಾಡಿಕೊಂಡು ಮಿರ್ಚಿ ತಯಾರಿಕೆ ಮಾಡುತ್ತಿದ್ದಾರೆ. ಸುಮಾರು 6 ರಿಂದ 8 ಲಕ್ಷ ಖರ್ಚು ಮಾಡಿ ಜಾತ್ರೆಗೆ ಬಂದ ಭಕ್ತರಿಗೆ ಮಿರ್ಚಿಯನ್ನ ಉಣ ಬಡಿಸುತ್ತಿದ್ದಾರೆ.

ಸಮಾನ ಮನಸ್ಕ ಗೆಳೆಯರ ಬಳಗದ ಸದಸ್ಯ ರಮೇಶ್ ತುಪ್ಪದ ಮಿರ್ಚಿ ಸಿದ್ದತೆಯ ಬಗ್ಗೆ ಮಾಹಿತಿ ನೀಡಿದ್ದು, ‘ಕಳೆದ 11 ವರ್ಷಗಳಿಂದ ಸಮಾನ ಮನಸ್ಕರ ಬಳಗದ ತಂಡದಿಂದ ಮಹಾ ದಾಸೋಹದಲ್ಲಿ ಮಿರ್ಚಿಯನ್ನು ಉಣಬಡಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಇಂದು ಸುಮಾರು 6 ಲಕ್ಷ ಮಿರ್ಚಿಯನ್ನು ದಾಸೋಹಕ್ಕೆ ಸಮರ್ಪಿಸುತ್ತಿದ್ದೇವೆ. ಸುಮಾರು 500 ರಿಂದ 600 ಜನರು ಬೆಳಗ್ಗೆ 5:30 ರಿಂದ ರಾತ್ರಿ 10:30 ರವರೆಗೆ ಮಿರ್ಚಿ ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿಸಿದರು.

ಕಳೆದ 11 ವರ್ಷದಿಂದ ಯಾರಿಂದಲೂ ಹಣ ಪಡೆಯದೇ, ಸಮಾನ ಮನಸ್ಕರ ತಂಡದ ಸದಸ್ಯರು ಸ್ವಂತ ಹಣ ಹಾಕಿ ಮಿರ್ಚಿಯನ್ನ ಉಣಬಡಿಸುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ಮಿರ್ಚಿ ಮಂಡಕ್ಕಿ ಅಂದರೆ ಬಲು ಇಷ್ಟ. ಊಟದಲ್ಲಿ ಮಿರ್ಚಿಯಿಲ್ಲದೇ ಊಟ ಮಾಡೋದು ಇಲ್ಲ. ನಾವು ಏಕೆ ಗವಿ ಮಠದ ಜಾತ್ರೆಯಲ್ಲಿ ಮಿರ್ಚಿ ಕೊಡಬಾರದು ಅನ್ನೋ ಉದ್ದೇಶದಿಂದ ಮಿರ್ಚಿ ದಾಸೋಹ ಸೇವೆಯನ್ನ ಆರಂಭಿಸಿದ್ದೇವೆ’ ಎಂದು ಅವರು ಹೇಳಿದರು.

ಕೊಪ್ಪಳದ ಗವಿ ಸಿದ್ದೇಶ್ವರನ ಜಾತ್ರೆಯ ದಾಸೋಹದ ತುಂಬೆಲ್ಲ ಮಿರ್ಚಿ ಘಮಲು ಜೋರಾಗಿದೆ. ಕಳೆದ ಕೆಲ ವರ್ಷಗಳ ಹಿಂದೆ ಅಜ್ಜನ ಜಾತ್ರೆ ಅಂದರೆ ರೊಟ್ಟಿ ಜಾತ್ರೆ ಅಂತಿದ್ರು. ಇದೀಗ ಅಜ್ಜನ ಜಾತ್ರೆಯನ್ನ ಮಿರ್ಚಿ ಜಾತ್ರೆ ಅಂತಲೂ ಕರೆಯುವಂತಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments