Monday, May 25, 2026
Google search engine
Homeಕ್ರೀಡೆWPL: ಆರ್ ಸಿಬಿಗೆ 155 ರನ್ ಸವಾಲೊಡ್ಡಿದ ಮುಂಬೈ ಇಂಡಿಯನ್ಸ್!

WPL: ಆರ್ ಸಿಬಿಗೆ 155 ರನ್ ಸವಾಲೊಡ್ಡಿದ ಮುಂಬೈ ಇಂಡಿಯನ್ಸ್!

ಕೆಳ ಕ್ರಮಾಂಕದಲ್ಲಿ ನಿಕೊಲಾ ಕ್ಯಾರಿ ಮತ್ತು ಸಂಜೀವನ್ ಸಾಜನಾ ಅವರ ಸಮಯೋಚಿತ ಆಟದಿಂದ ಮುಂಬೈ ಇಂಡಿಯನ್ಸ್ ತಂಡ ಮಹಿಳೆಯರ ಪ್ರೀಮಿಯರ್ ಲೀಗ್ ಟಿ-20 ಕ್ರಿಕೆಟ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 155 ರನ್ ಗುರಿ ಒಡ್ಡಿದೆ.

ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಉದ್ಘಾಟನಾ ಪಂದ್ಯದಲ್ಲಿ ಟಾಸ್ ಗೆದ್ದ ಆರ್ ಸಿಬಿ ತಂಡದ ನಾಯಕಿ ಸ್ಮೃತಿ ಮಂದಾನ ಮುಂಬೈ ಇಂಡಿಯನ್ಸ್ ತಂಡವನ್ನು ಮೊದಲು ಬ್ಯಾಟ್ ಮಾಡುವಂತೆ ಆಹ್ವಾನಿಸಿದರು.

ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ಆರ್ ಸಿಬಿ ದಾಳಿಗೆ ತತ್ತರಿಸಿ ಒಂದು ಹಂತದಲ್ಲಿ 67 ರನ್ ಗೆ 4 ವಿಕೆಟ್ ಕಳೆದುಕೊಂಡು ಕಂಗಾಲಾಗಿತ್ತು.

ಈ ಹಂತದಲ್ಲಿ ಜೊತೆಯಾದ ನಿಕೊಲಾ ಕ್ಯಾರಿ 29 ಎಸೆತಗಳಲ್ಲಿ 4 ಬೌಂಡರಿ ಒಳಗೊಂಡ 40 ರನ್ ಬಾರಿಸಿದರೆ, ಸಂಜೀವನ ಸಾಜನ 25 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 45 ರನ್ ಸಿಡಿಸಿದರು. ಇವರಿಬ್ಬರು 5ನೇ ವಿಕೆಟ್ ಗೆ 82 ರನ್ ಜೊತೆಯಾಟದಿಂದ  ತಂಡವನ್ನು ಉತ್ತಮ ಮೊತ್ತದತ್ತ ಮುನ್ನಡೆಸಿದರು.

ಆರಂಭಿಕ ಆಟಗಾರ್ತಿ ಗುನಲಾನ್ ಕಮಲಿನಿ 32 ರನ್ ಬಾರಿಸಿದರೆ, ನಾಯಕಿ ಹರ್ಮನ್ ಪ್ರೀತ್ ಕೌರ್ 20 ರನ್ ಗಳಿಸಿ ನಿರಾಸೆ ಮೂಡಿಸಿದರು.

ಆರ್ ಸಿಬಿ ಪರ ಪರಿಣಾಮಕಾರಿ ದಾಳಿ ನಡೆಸಿದ ನಾದಿನೆ ಡೆ ಕ್ಲಾರ್ಕ್ 26 ರನ್ ನೀಡಿ 4 ವಿಕೆಟ್ ಪಡೆದರು. ಲೌರನ್ ಬೆಲ್ ಮತ್ತು ಶ್ರೇಯಾಂಕಾ ಪಾಟೀಲ್ ತಲಾ 1 ವಿಕೆಟ್ ಗಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments