ಎಣ್ಣೆ ಸಾಲ ಕೊಡಲ್ಲ ಎಂದ ಬಾರ್ ಕ್ಯಾಶಿಯರ್ ಗೆ ಇಬ್ಬರು ಕುಡುಕರು ಬಂದೂಕು ತೋರಿಸಿ ಹೈಡ್ರಾಮ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿ ವ್ಯಾಪ್ತಿಯ ಬಂಡಹಳ್ಳಿ ಗ್ರಾಮದ ಎಸ್ ಎಸ್ ವಿ ಮಧ್ಯದ ಅಂಗಡಿಯಲ್ಲಿ ಈ ಘಟನೆ ನಡೆದಿದ್ದು, ಬೈಲನರಸಾಪುರ ಗ್ರಾಮದ ಜಾಹೀದ್ ವುಲ್ಲಾ ಖಾನ್ ಹಾಗೂ ಮಹಮ್ಮದ್ ಅತಿಕ್ ಈ ಕೃತ್ಯ ಎಸಗಿದ್ದಾರೆ. ಇದರಿಂದ ಕೆಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಕ್ಯಾಷಿಯರ್ ನೀಡಿದ ದೂರಿನ ಆಧಾರದ ಮೇಲೆ ನಂದಗುಡಿ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿಗಾಗಿ ಬಲೆ ಬೀಸಿದ್ದಾರೆ.
ಆಸಲಿಗೆ ಆಗಿದ್ದೇನು?
ಹೊಸಕೋಟೆ ತಾಲೂಕು ನಂದಗುಡಿ ಹೋಬಳಿ ಬಂಡಹಳ್ಳಿ ಬಳಿಯಿರುವ ಎಸ್ ಎಸ್ ಬಾರ್ ನಲ್ಲಿ ಜ.೧೧ ರಂದು ಸಂಜೆ ಬೈಲುನರಸಾಪುರ ಗ್ರಾಮದ ಜಾಹೀದ್ವುಲ್ಲಾ ಖಾನ್ ಹಾಗೂ ಮಹಮದ್ ಅತೀಕ್ ಎಂಬಿಬ್ಬರು ಮದ್ಯ(ಎಣ್ಣೆ) ಸಾಲ ನೀಡುವಂತೆ ಕ್ಯಾಷಿಯರನನ್ನು ಕೇಳಿದ್ದಾರೆ.ಅದಕ್ಕೆ ಕ್ಯಾಷಿಯರ್ ಸಾಲ ನೀಡಲು ನಮ್ಮ ಮಾಲೀಕರು ಅನುಮತಿ ಬೇಕು. ಅವರು ಹೇಳದಿದ್ದು ನಾವು ಸಾಲ ಕೊಡಲ್ಲ ಅಂತ ಹೇಳಿದ್ದಾನೆ.
ಸರಿ ಅಂತ ಹೇಗೋ ತಮ್ಮಲ್ಲಿದ್ದ 220 ರೂ.ನೀಡಿ ಮದ್ಯ ಖರೀದಿಸಿ ಅಲ್ಲೇ ಸೇವಿಸಿದ್ದಾರೆ. ಎಣ್ಣೆ ನಶೆ ಏರುತ್ತಿದ್ದಂತೆ ನಮ್ಮಗೆ ಸಾಲ ಕೊಡಲ್ವ? ಇವನು ಅಂತ ರಗಳೆ ತೆಗೆದು ಅವರಿಬ್ಬರು,ನಾನು ಯಾರು ಅಂತ ತೋರಿಸ್ತೀನಿ ಇರು ಅಂತೇಳಿ ಅಲ್ಲಿಂದ ಹೊರಟ 20 ನಿಮಿಷ ನಂತರ ಸೀದಾ ಜಾಹೀದ್ವುಲ್ಲಾ ಖಾನ್ ಕೈಯಲ್ಲಿ ಬಂದೂಕು ಹಿಡಿದು ಬಾರ್ ಒಳಗೆ ಎಂಟ್ರಿ ಕೊಟ್ಟಿದ್ದಾನೆ.ಬಂದೂಕು ಕಂಡ ಅಲ್ಲಿದ್ದ ಕ್ಯಾಷಿಯರ್ ಇತರರು ಶಾಕ್ ಆಗಿದ್ದಾರೆ.
ನನಗೆ ಸಾಲ ಕೊಡಲ್ಲ ಅಂತೀಯ ಅಂತೇಳಿ ಸೀದಾ ಬಂದೂಕು ಕ್ಯಾಷಿಯರ್ ಕಡೆ ಗುರಿಯಿಟ್ಟಿದ್ದಾನೆ. ಕ್ಯಾಷಿಯರ್ ಎದ್ದೋ ಬಿದ್ನೋ ಅಂತ ಒಳಗಡೆ ಹೋಗಿ ಲಾಕ್ ಮಾಡಿಕೊಂಡಿದ್ದಾನೆ.ಕಡೆಗೆ ಅಲ್ಲಿದ್ದವರು ಅವನನ್ನು ಸಮಾದಾನ ಮಾಡಿ ಅಲ್ಲಿಂದ ಕಳುಹಿಸಿದ್ದಾರೆ.ಅವರು ಹೋದ್ಮೇಲೆ ಕ್ಯಾಷಿಯರ್ ನವೀನ್ ನಂದಗುಡಿ ಪೊಲೀಸರಿಗೆ ದೂರು ನೀಡಿದ್ದು,ಒಬ್ಬನನ್ನು ಪೊಲೀಸರು ಬಂದಿಸಿದ್ದಾರೆ.ಈ ಎಲ್ಲ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿವೆ.
ಯಾರು ನಿನ್ನ ಮಾಲೀಕ ಕರೀಯೋ ಎಂದು ಗನ್ ತೋರಿಸಿ ಬೆದರಿಕೆ ಹಾಕಿದ್ದಾನೆ. ಇನ್ಮುಂದೆ ನನ್ನಗೆ ರೋಲ್ ಕಾಲ್ ಹಣ ಕೊಡಬೇಕು ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ಆರೋಪಿಸಿ ಕ್ಯಾಷಿಯರ್ ನವೀನ್ ನಂದಗುಡಿ ಪೊಲೀಸರಿಗೆ ದೂರು ನೀಡಿದ್ದಾನೆ. ಈ ಬಗ್ಗೆ ನಂದಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



