ಚಿತ್ರದುರ್ಗ/ ಹೊಳಲ್ಕೆರೆ: ವೀರಶೈವ ಲಿಂಗಾಯತ ಸಮಾಜವನ್ನು ರಾಜಕೀಯ ಉದ್ದೇಶಕ್ಕಾಗಿ ಒಡೆಯವ ಉನ್ನಾರ ನಡೆಯಿತ್ತಿದ್ದು ಇದನ್ನ ನಾವು ಸಹಿಸಲ್ಲ ಎಂದು ರಾಜ್ಯ ಬಿಜಿಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು.
ಹೊಳಲ್ಕೆರೆ ಪಟ್ಟಣದ ವಾಲ್ಮೀಕಿ ಸಮುದಾಯ ಭವನದ ಮೈದಾನದಲ್ಲಿ ಬುಧವಾರ ನೊಳಂಬ ಲಿಂಗಾಯತ ಸಮಾಜ ಅಯೋಜಿಸಿರುವ 853ನೇ ಸಿದ್ದರಾಮೇಶ್ವರ ಜಯಂತಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಶ್ರೀ ಗುರು ಸಿದ್ದರಾಮೇಶ್ವರರ ಹನ್ನೇರಡನೆ ಶತಮಾನದಲ್ಲಿ ಶರಣ ಸಂಸ್ಕೃತಿಗೊಳಗಾಗಿ ಸಮಾಜದಲ್ಲಿನ ಎಲ್ಲಾ ವರ್ಗದ ಪ್ರಗತಿಗೆ ಪೂರಕವಾದ ಜಲ ಸಂರಕ್ಷಣೆಯಂತಹ ಕಾರ್ಯಗಳಿಗೆ ಒತ್ತು ಕೊಟ್ಟು ಕೆರೆ ಕಟ್ಟೆಗಳನ್ನು ಕಟ್ಟಿ ಕೃಷಿ ಕ್ಷೇತ್ರಕ್ಕೆ ಅದ್ಯತೆ ನೀಡಿದ್ದರಿಂದ ಇಂದಿನ ಸರಕಾರಗಳು ಅವರ ಮಾದರಿಯಲ್ಲಿಯೇ ನೀರಾವರಿ ಯೋಜನೆಗಳನ್ನು ಮಾಡುತ್ತಿದ್ದಾರೆ. ಅದೇ ರೀತಿ ವಚನ ಸಾಹಿತ್ಯದ ಮೂಲಕ ಜನರಲ್ಲಿ ಜಾತ್ಯಾತಿತ ಸಮ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದ್ದರು.
ನೊಳಂಬ ಲಿಂಗಾಯತ ಸಮಾಜವು ಸಿದ್ದರಾಮೇಶ್ವರರ ಹಾಕಿ ಕೊಟ್ಟ ಮಾರ್ಗದಲ್ಲಿ ನಡೆಯಿತ್ತಿದ್ದು ಸಂಘಟನೆಯಲ್ಲಿ ರಾಜ್ಯದಲ್ಲಿ ಸಾಮಾಜಿಕವಾಗಿ, ರಾಜಕೀಯವಾಗಿ, ಅರ್ಥಿಕವಾಗಿ ಇನ್ನಷ್ಟು ಬಲಿಷ್ಠವಾಗಬೇಕು ಎಂದು ಹೇಳಿದರು.
ಸಮಾರಂಭ ಸಾನಿಧ್ಯ ವಹಿಸಿದ್ದ ಸಿರಿಗೆರೆ ತರಳಬಾಳು ಮಠದ ಡಾ. ಶಿವಾಚಾರ್ಯಸ್ವಾಮೀಜಿ ಮಾತನಾಡಿ ಭಾರತೀಯರಲ್ಲಿರುವ ಕಾಲೆಳೆಯುವ ಪ್ರವೃತ್ತಿಯಿಂದ ಹೊರ ಬಂದು ಸಮ ಸಮಾಜದ ನಿರ್ಮಾಣದತ್ತ ಚಿಂತನೆ ಮಾಡಿ ಸನ್ಮಾ ಮಾರ್ಗದಲ್ಲಿ ನಡೆಯ ಬೇಕೆಂದು ಹೇಳಿದರು.
ಸಮಾರಂಭದಲ್ಲಿ ಸಿದ್ದಗಂಗ ಮಠದ ಕಿರಿಯ ಶ್ರೀಗಳಾದ ಶಿವಸಿದ್ದೇಶ್ವರ ಸ್ವಾಮೀಜಿ, ಕುಂಚಿಟಿಗ ಸಂಸ್ಥಾನದ ಶಾಂತವೀರಸ್ವಾಮೀಜಿ, ಭಗೀರಥ ಪೀಠದ ಪುರಷೋತ್ತಮಾನಂದ ಸ್ವಾಮೀಜಿ, ಕೆರೆಗೋಡಿ ರಾಮಗಾಪುರದ ಗುರುಪರದೇಶಿಕೇಂದ್ರ ಸ್ವಾಮೀಜಿ, ಪುಷ್ಪಗಿರಿ ಸಂಸ್ಥಾನದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ತಮ್ಮಡಿಹಳ್ಳಿ ಡಾ. ಅಭಿನವಮಲ್ಲಿಕಾರ್ಜನ ಸ್ವಾಮೀಜಿ, ಸಾನೀಧ್ಯ ವಹಿಸಿ ಮಾತನಾಡಿದರು.
ಮಾಜಿ ಸಚಿವ ಎಂ.ಪಿ. ರೇಣುಕಚಾರ್ಯ ನೊಳಂಬ ಲಿಂಗಾಯತ ಪುಸ್ತಕ ಬಿಡುಗಡೆ ಮಾತನಾಡಿ ಶಾಮನೂರು ಶಿವಶಮಕರಪ್ಪ ಲಿಂಗೈಕ್ಯರಾಗಿರುವುದರಿಂದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾ ಅಧ್ಯಕ್ಷ ಸ್ಥಾನಕ್ಕೆ ಸಮಾಜದ ಎಲ್ಲಾ ಧಾರ್ಮಿಕ ಗುರುಗಳು ಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪರನ್ನು ಅಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.
ಸಂಸದ ಗೋವಿಂದ ಕಾರಜೋಳ ನೊಳಂಬವಾಣಿ ಸಂಚಿಕೆ, ತುಮಕೂರು ಶಾಸಕ ಜ್ಯೋತಿ ಗಣೇಶ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದರು.
ನೊಳಂಬ ಸಮಾಜದ ಕೇಂದ್ರ ಸಮಿತಿ ಅಧ್ಯಕ್ಷ ಬಿ.ಕೆ. ಚಂದ್ರಶೇಖರ, ಕಾರ್ಯದರ್ಶಿ ಶಶಿದರ, ನಿವೃತ್ತ ಎಡಿಜಿಪಿ ಸಿದ್ದರಾಮಪ್ಪ, ನಿ,ಎಸಿಪಿ ಲೋಕೇಶ್ವರಪ್ಪ, ಶಾಸಕರಾದ ಎಂ.ಚಂದ್ರಪ್ಪ, ಎಚ್.ಕೆ.ಸುರೇಶ, ಮಾಜಿ ಶಾಸಕರಾದ ಕೆ.ಎಸ. ಲಿಂಗೇಶ, ಕೆ.ಸಿ.ರಮೇಶ, ಬಿಜಿಪಿ ವಕ್ತಾರ ಚಂದ್ರಶೇಖರ್, ಸ್ವಾಗತ ಸಮಿತಿ ಅಧ್ಯಕ್ಷ ಶಶಿದರ, ಬಿಜೆಪಿ ಮುಖಂಡರಾದ ವಸಂತ ಕುಮಾರ, ಲಿಂಗಮೂರ್ತಿ, ಇತರರು ಉಪಸ್ಥಿತರಿದ್ದರು.
ಶ್ರೀ ಸಿದ್ದರಾಮೇಶ್ವರ ಸ್ವಾಮಿಯ ಅಕರ್ಷಕ ಉತ್ಸವ
ಉತ್ಸವಕ್ಕೂ ಮುನ್ನ ಸಮಾರಂಭದ ವೇದಿಕೆಯ ಮುಂಭಾಗದಲ್ಲಿ ಕುಪ್ಪೂರು ವಿರಕ್ತ ಮಠದ ಡಾ.ಅಭಿನವ ಮಲ್ಲಿಕಾರ್ಜನ ದೇಶಿಕೇಂದ್ರ ಸ್ವಾಮೀಜಿ ಷಟ್ಟಸ್ಥಳ ಧ್ವಜರೋಹಣ ನರವೇರಿಸಿದರು.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದಲ್ಲಿ ಬುಧವಾರ ನಡೆದ ೮೫೩ನೇ ಶ್ರೀಸಿದ್ದರಾಮೇಶ್ವರರ ಜಯಂತೋತ್ಸವದ ಅಂಗವಾಗಿ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಶ್ರೀ ಸಿದ್ದರಾಮೇಶ್ವರಸ್ವಾಮಿ ದೇವರ ಉತ್ಸವ ವೈಭವದಿಂದ ನಡೆಯಿತು.
ಪಟ್ಟಣದ ಸಿದ್ದರಾಮೇಶ್ವರ ದೇವಾಲಯದಿಂದ ಹೊರಟ ಉತ್ಸವ ಯಕ್ಷಗಾನ, ಬೊಂಬೆ ಕುಣಿತ, ನಾಸಿಕ ಡೋಲ್ ಜಗ್ಗಲಿಗೆ ಮೇಳ ಕಂಸಾಳೆ ಗೊರವರ ಕುಣಿತ, ವೀರಗಾಸೆ, ಕೋಲಾಟ, ನಂದಿ ಧ್ವಜ ಕುಣಿತ ಮುಂತಾದ ಕಲಾ ತಂಡಗಳು ಉತ್ಸವದಲ್ಲಿ ಭಾಗವಹಿಸಿದ್ದವು.
1108 ಪೂರ್ಣ ಕುಂಭ ಹೊತ್ತ ಮಹಿಳೆಯರು ಸಾಲು ಉತ್ಸವ ಅಕರ್ಷಣೆಯಾಗಿತ್ತು ಉತ್ಸವದಲ್ಲಿ ಭಾಗವಹಿಸಿದ್ದ ಸಾವಿರಾರು ಭಕ್ತರು ಬಾಗವಹಿಸಿದ ಮೆರವಣಿಗೆ ವಿಜೃಂಭನೆಯಿಂದ ಜರಗಿತು.
ಮೆರವಣಿಗೆಯಲ್ಲಿ ಮೈಸೂರಿನ ಬಸವಮಂದಿರದ ಮಾತೆ ಬಸವಾಂಜಲಿ,ಮಾಜಿ ಶಾಸಕ ಉಮಾಪತಿ, ಪುರಸಭೆ ಉಪಾಧ್ಯ್ಷಕ್ಷೆ ನಾಗರತ್ನವೇದಮೂರ್ತಿ, ನೊಳಂಬ ಸಮಾಜದ ಮುಖಂಡರಾದ,ಧನAಜಯ,ರಂಗೇಶ, ಮರಿದಿಮ್ಮಪ್ಪ, ಲೋಕೇಶ್ವರಪ್ಪ, ಪಾಲಾಕ್ಷಪ್ಪ ಕಬ್ಬಳ, ಶೆಟ್ಟಿಹಳ್ಳಿ ನಾಗಭೂಷಣ, ಸೇರಿದಂತೆ ಸಾವಿರಾರು ಭಕ್ತರು ಭಾಗವಹಿಸಿದ್ದರು.



