Thursday, May 14, 2026
Google search engine
Homeಬೆಂಗಳೂರುಬೆಂಗಳೂರಿನಲ್ಲಿ ತಪ್ಪಿದ ಭಾರೀ ದುರಂತ: ಮೆಟ್ರೋ ಕಾಮಗಾರಿ ವೇಳೆ ಆಯತಪ್ಪಿ ಬಿದ್ದ ಕ್ರೇನ್!

ಬೆಂಗಳೂರಿನಲ್ಲಿ ತಪ್ಪಿದ ಭಾರೀ ದುರಂತ: ಮೆಟ್ರೋ ಕಾಮಗಾರಿ ವೇಳೆ ಆಯತಪ್ಪಿ ಬಿದ್ದ ಕ್ರೇನ್!

ನಮ್ಮ ಮೆಟ್ರೋದ ನೀಲಿ ಮಾರ್ಗದ ಕಾಮಗಾರಿ ವೇಳೆ ಕ್ರೇನ್ ಆಯತಪ್ಪಿ ಬಿದ್ದಿದ್ದು, ಕೂದಲೆಳೆ ಅಂತರದಲ್ಲಿ ಭಾರೀ ದುರಂತವೊಂದು ತಪ್ಪಿದ ಘಟನೆ ಬೆಂಗಳೂರಿನ ಅಗರ ಬಳಿ ಸಮೀಪ ಸಂಭವಿಸಿದೆ.

ನಿಯಂತ್ರಣ ತಪ್ಪಿ ಬೃಹತ್ ಕ್ರೇನ್ ವಾಹನ ಆಯತಪ್ಪಿ ಬಿದ್ದಿದ್ದು, ಅದೃಷ್ವಶಾತ್​​ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.ಕ್ರೇನ್​​ ಹಿಂದಕ್ಕೆ ತೂಕದ ವಸ್ತು ಹಾಕದೆ ಮುಂದೆಯಿಂದ ಗರ್ಡರ್‌ ಎತ್ತಲು ಮುಂದಾದಾಗ ನಿಯಂತ್ರಣ​​ ತಪ್ಪಿದೆ. ಈ ವೇಳೆ ಆಪರೇಟರ್​​ ಕ್ರೇನ್​​ ವಾಹನದಿಂದ ಜಿಗಿದು ಕಾರ್ಮಿಕರು ಪ್ರಾಣ ಉಳಿಸಿಕೊಂಡಿದ್ದಾರೆ.

ಕ್ರೇನ್‌ನ ಒಂದು ಭಾಗಕ್ಕೆ ತೂಕ ಹಾಕಿ ತಲೆ ಮೇಲಾಗಿರುವ ಕ್ರೇನ್ ಕೆಳಗಿಸಲಾಗಿದೆ. ಇನ್ನೂ ಎರಡು ಬೃಹತ್ ಕ್ರೇನ್ ಬಳಸಿಕೊಂಡು ಬಿದ್ದಿರುವ ಕ್ರೇನ್ ಎತ್ತುವ ಕಾರ್ಯ ಪೂರ್ಣಗೊಂಡಿದೆ.

ಮುಂಜಾನೆ 3:45ರ ಸುಮಾರಿಗೆ ಘಟನೆ ನಡೆದಿದೆ. ತಾಂತ್ರಿಕ ಸಮಸ್ಯೆಯಿಂದ ಈ ರೀತಿಯಾಗಿದೆ. ಯಾರಿಗೂ ಗಾಯವಾಗಿಲ್ಲ, ಸ್ಟೀಲ್ ಗರ್ಡರ್ ಮೇಲೆತ್ತುವಾಗ ಅವಘಡ ಸಂಭವಿಸಿದೆ. ಈ ವೇಳೆ ಕ್ರೇನ್‌ನ ಒಂದು ಭಾಗ ಮೇಲಕ್ಕೆ ಹೋಗಿದೆ. ಏಕಾಏಕಿ ಮೇಲಕ್ಕೆ ಹೋಗಿದೆ ಎಂದು ಬಿಎಂಆರ್‌ಸಿಎಲ್ ಡೆಪ್ಯೂಟಿ ಚೀಫ್ ಇಂಜಿನಿಯರ್ ಸದಾಶಿವ ಮಾಹಿತಿ ನೀಡಿದ್ದಾರೆ.

100 ಟನ್ ತೂಕದ ಸ್ಟೀಲ್ ಗಾರ್ಡರ್ ಎತ್ತುವಾಗ ಅವಘಡವಾಗಿದೆ. ಕ್ರೇನ್‌ನ ಜಾಕ್ ಕಟ್ ಆದ ಪರಿಣಾಮ ಹೀಗಾಗಿದೆ. 500 ಟನ್ ತೂಕವನ್ನ ಎತ್ತುವ ಸಾಮರ್ಥ್ಯವಿರುವ ಕ್ರೇನ್ ಇದು. ಕ್ರೇನ್‌ಗೆ ಹಾಕಿದ್ದ ನಾಲ್ಕು ಜಾಕ್ (ಸ್ಟಾಂಡ್)ನಲ್ಲಿ ಒಂದು ಕಟ್ ಆಗಿರುವ ಕಾರಣದದಿಂದ ಕ್ರೇನ್ ತಲೆಮೇಲಾಗಿದೆ. ಸ್ಥಳಕ್ಕೆ ಹೆಚ್ ಎಸ್ ಆರ್ ಸಂಚಾರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments