Sunday, June 28, 2026
Google search engine
Homeದೇಶಶಿವಸೇನೆಯ ಭದ್ರಕೋಟೆ ಛಿದ್ರ: ಏಷ್ಯಾದ ಶ್ರೀಮಂತ ಮುಂಬೈ ಪಾಲಿಕೆಗೆ ಕೇಸರಿ ಪಡೆ ಲಗ್ಗೆ!

ಶಿವಸೇನೆಯ ಭದ್ರಕೋಟೆ ಛಿದ್ರ: ಏಷ್ಯಾದ ಶ್ರೀಮಂತ ಮುಂಬೈ ಪಾಲಿಕೆಗೆ ಕೇಸರಿ ಪಡೆ ಲಗ್ಗೆ!

ಏಷ್ಯಾದ ಅತ್ಯಂತ ಶ್ರೀಮಂತ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆ ಪಡೆದಿರುವ ಮುಂಬೈ ನಲ್ಲಿ 4 ದಶಕಗಳ ನಂತರ ಬಿಜೆಪಿ ನೇತೃತ್ವದ ಮಹಾಯುತಿ ಲಗ್ಗೆ ಹಾಕಿದ್ದು, ಠಾಣೆ ಸೋದರರ ಶಿವಸೇನೆಯ ಭದ್ರಕೋಟೆ ಛಿದ್ರಗೊಂಡಿದೆ.

ಗುರುವಾರ ನಡೆದ ಮುಂಬೈ ಮಹಾನಗರ ಪಾಲಿಕೆಯ ಚುನಾವಣೆಯ ಫಲಿತಾಂಶ ಶುಕ್ರವಾರ ಹೊರಬಿದ್ದಿದೆ. ಮುಂಬೈ ಪಾಲಿಕೆಯ ವಾರ್ಷಿಕ ಬಜೆಟ್ 74,000 ಕೋಟಿ ರೂ. ಆಗಿದ್ದು, 227 ಕ್ಷೇತ್ರಗಳಿಗೆ 1700 ಅಭ್ಯರ್ಥಿಗಳು ಕಣಕ್ಕಿಳಿದಿದ್ದರು.

ಮುಂಬೈಯ ಒಟ್ಟು 227 ವಾರ್ಡ್‌ಗಳ ಪೈಕಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ 116 ಸ್ಥಾನಗಳಲ್ಲಿ ಗೆಲುವು ದಾಖಲಿಸಿದರೆ, ಶಿವಸೇನೆ ಮೈತ್ರಿಕೂಟ 74 ಹಾಗೂ ಕಾಂಗ್ರೆಸ್ 15 ಹಾಗೂ ಇತರರು 15 ಸ್ಥಾನಗಳಲ್ಲಿ ಜಯ ಸಾಧಿಸಿದೆ. ಇನ್ನೂ 29 ಕ್ಷೇತ್ರಗಳ ಫಲಿತಾಂಶ ಹೊರಬೀಳಬೇಕಾಗಿದೆ.

ಉದ್ಧವ್ ಮತ್ತು ರಾಜ್ ಠಾಕ್ರೆ ಸೋದರರು ಇದೇ ಮೊದಲ ಬಾರಿಗೆ ಮುನಿಸು ಮರೆತು 15 ವರ್ಷಗಳ ನಂತರ ಜೊತೆಯಾಗಿದ್ದರು. ಠಾಣೆ ಸೋದರರು ಒಂದಾಗಿದ್ದರೂ ಬಿಜೆಪಿ ಹಾಗೂ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಣದ ಮೈತ್ರಿ ಪಕ್ಷಗಳು ಗೆಲುವು ದಾಖಲಿಸಿವೆ.

ಮುಂಬೈ ಉದ್ದವ್‌ ಶಿವಸೇನೆಯ ಭದ್ರ ಕೋಟೆಯಾಗಿದ್ದು, ಕಳೆದ ಚುನಾವಣೆಯಲ್ಲಿ ಜಯಗಳಿಸಿತ್ತು. ಆದರೆ ಈ ಬಾರಿ ಉದ್ದವ್‌ ಕೋಟೆಯನ್ನು ಮಹಾಯುತಿ ಒಕ್ಕೂಟ ಛಿದ್ರಗೊಳಿಸಿಸಿ 4 ದಶಕಗಳ ನಂತರ ಅಧಿಕಾರ ಹಿಡಿದಿದೆ.

ಮಹಾರಾಷ್ಟ್ರದ 29 ಕ್ಷೇತ್ರಗಳಲ್ಲಿ ಬಹುತೇಕ ಬಿಜೆಪಿ ಮೈತ್ರಿಕೂಟ ಮುನ್ನಡೆ ಸಾಧಿಸಿದ್ದು, 1212 ವಾರ್ಡ್ ಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದರೆ, 305 ಕ್ಷೇತ್ರಗಳಲ್ಲಿ ಶಿವಸೇನೆ ಮೇಲುಗೈ ಪಡೆದಿದೆ. 240 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿರುವ ಕಾಂಗ್ರೆಸ್ ಮೂರನೇ ಸ್ಥಾನದಲ್ಲಿದೆ.

29 ಸ್ಥಳೀಯ ಸಂಸ್ಥೆಗಳ 2869 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಶೇ.52.94ರಷ್ಟು ಮತದಾನವಾಗಿತ್ತು. ಮುಂಬೈನಲ್ಲಿ 1700 ಸೇರಿದಂತೆ 15,931 ಮಂದಿ ಸ್ಪರ್ಧಿಗಳಿದ್ದರು. 63 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ತಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಹೇಳಲಾಗಿದೆ.

ನವಿ ಮುಂಬೈ ಪಾಲಿಕೆಯಲ್ಲಿ ಒಟ್ಟು 111 ವಾರ್ಡ್‌ಗಳಿವೆ. ಈ ಪೈಕಿ ಬಿಜೆಪಿ 15, ಶಿಂಧೆ ಶಿವಸೇನೆ 12 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ. ಸದ್ಯದ ಟ್ರೆಂಡ್‌ ಪ್ರಕಾರ ಕಾಂಗ್ರೆಸ್‌ ಮತ್ತು ಉದ್ದವ್‌ ಶಿವಸೇನೆ ಯಾವ ವಾರ್ಡ್‌ನಲ್ಲೂ ಮುನ್ನಡೆ ಸಾಧಿಸಿಲ್ಲ.

ಥಾಣೆಯಲ್ಲಿ ಒಟ್ಟು 131 ವಾರ್ಡ್‌ಗಳಿದ್ದು ಶಿಂದೆ ಶಿವಸೇನೆ 14, ಬಿಜೆಪಿ 12, ಶರಾದ್‌ ಪವಾರ್‌ ಅವರ ಎನ್‌ಸಿಪಿ 2 ವಾರ್ಡ್‌ಗಳಲ್ಲಿ ಮುನ್ನಡೆ ಸಾಧಿಸಿವೆ.

ಆರ್ ಎಸ್ ಎಸ್ ಹಿಡಿತವಿರುವ ನಾಗ್ಪುರದಲ್ಲಿ 151 ಸ್ಥಾನಗಳಲ್ಲಿ 131 ಸ್ಥಾನಗಳ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ 27 ಸ್ಥಾನಗಳಲ್ಲಿ ಗೆಲುವು ದಾಖಲಿಸಿದ್ದರೆ, ಉಳಿದ ಪಕ್ಷಗಳು ಎರಡಂಕಿಗೂ ಬಂದಿಲ್ಲ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments