Thursday, June 25, 2026
Google search engine
Homeರಾಜ್ಯಮಾಲೂರು ಶಾಸಕರಾಗಿ ಕಾಂಗ್ರೆಸ್ ನ ನಂಜೇಗೌಡ ಆಯ್ಕೆ ಸಿಂಧು: ಸುಪ್ರೀಂಕೋರ್ಟ್ ಮಹತ್ವದ ತೀರ್ಪು

ಮಾಲೂರು ಶಾಸಕರಾಗಿ ಕಾಂಗ್ರೆಸ್ ನ ನಂಜೇಗೌಡ ಆಯ್ಕೆ ಸಿಂಧು: ಸುಪ್ರೀಂಕೋರ್ಟ್ ಮಹತ್ವದ ತೀರ್ಪು

ಕೋಲಾರ ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಕಾಂಗ್ರೆಸ್ ನ ನಂಜೇಗೌಡ ಮುಂದುವರಿಯಲಿದ್ಧಾರೆ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಕರ್ನಾಟಕ ಹೈಕೋರ್ಟ್ ಮಾಲೂರು ಶಾಸಕರಾಗಿ ನಂಜೇಗೌಡ ಅವರ ಆಯ್ಕೆಯನ್ನು ಅಸಿಂಧು ಎಂದು ಘೋಷಣೆ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಗುರುವಾರ ನಂಜೇಗೌಡ ಅವರನ್ನು ಶಾಸಕರಾಗಿ ಮುಂದುವರಿಯಲು ಆದೇಶಿಸಿತು.

ಸುಪ್ರೀಂಕೋರ್ಟ್ ಸೂಚನೆ ಮೇರೆಗೆ 2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಚಲಾವಣೆಯಾದ ಮತಗಳ ಮರುಎಣಿಕೆ ಮಾಡಿದ್ದ ಅಧಿಕಾರಿಗಳು ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂಕೋರ್ಟ್ ಗೆ ನೀಡಿದ್ದರು.

ಮರು ಮತ ಎಣಿಕೆಯಲ್ಲಿ ನಂಜೇಗೌಡ 50,948 ಮತಗಳನ್ನು ಪಡೆದಿದ್ದರೆ, ಬಿಜೆಪಿ ಅಭ್ಯರ್ಥಿ ಕೆಎಸ್ ಮಂಜುನಾಥ್ ಗೌಡ 50,700 ಮತಗಳನ್ನು ಪಡೆದಿದ್ದರು. ಮತಗಳ ಆಧಾರದ ಮೇಲೆ ನಂಜೇಗೌಡ ಆಯ್ಕೆ ಸಿಂಧುವಾಗಿದ್ದು, ಅವರು ಶಾಸಕರಾಗಿ ಮುಂದುವರಿಯಬೇಕು ಎಂದು ಸುಪ್ರೀಂಕೋರ್ಟ್ ಆದೇಶಿಸಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments