ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖಾ ಅವರಿಗೆ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಜೀವಮಾನದ ಸಾಧನೆ ಪ್ರಶಸ್ತಿ ಘೋಷಿಸಲಾಗಿದೆ.
ಜೀವಮಾನದ ಸಾಧನೆ ಪ್ರಶಸ್ತಿಗಾಗಿ ರಾಜ್ಯ ಸರ್ಕಾರ 3 ಹೆಸರನ್ನು ಶಿಫಾರಸು ಮಾಡಿತ್ತು. ಆಯ್ಕೆ ಸಮತಿ ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಹಂಸಲೇಖಾ ಅವರನ್ನು ಆಯ್ಕೆ ಮಾಡಿದೆ.
ಕನ್ನಡ ಚಿತ್ರರಂಗದಲ್ಲಿ ಸಾವಿರಕ್ಕೂ ಅಧಿಕ ಸಿನಿಮಾಗಳಿಗೆ 3500ಕ್ಕೂ ಅಧಿಕ ಹಾಡುಗಳ ರಚನೆ, ಗೀತಾ ಸಂಯೋಜನೆ ಮಾಡಿರುವ ಹಂಸಲೇಖಾ ಹಲವು ಜಾನಪದ ಹಾಗೂ ಮಕ್ಕಳ ಹಾಡುಗಳ ಆಲ್ಬಂ ಕೂಡ ರಚಿಸಿದ್ದಾರೆ.



