Friday, June 19, 2026
Google search engine
Homeದೇಶಎಐ ಶೃಂಗಸಭೆಯಲ್ಲಿ ಚೀನಾ ರೊಬೊ ಡಾಗ್ ಪ್ರದರ್ಶನ: ಉತ್ತರ ಪ್ರದೇಶ ವಿವಿ ಹೊರಹಾಕಿದ ಕೇಂದ್ರ!

ಎಐ ಶೃಂಗಸಭೆಯಲ್ಲಿ ಚೀನಾ ರೊಬೊ ಡಾಗ್ ಪ್ರದರ್ಶನ: ಉತ್ತರ ಪ್ರದೇಶ ವಿವಿ ಹೊರಹಾಕಿದ ಕೇಂದ್ರ!

ನವದೆಹಲಿ: ಭಾರತ್ ಎಐ ಇಂಪಾಕ್ಟ್ ಶೃಂಗಸಭೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಲಭ್ಯವಿರುವ ಚೀನಾದ ರೋಬೋಟಿಕ್ ಡಾಗ್ ಅನ್ನು ತಮ್ಮ ಅವಿಷ್ಕಾರವೆಂದು ಬಿಂಬಿಸಿಕೊಂಡು ತಪ್ಪು ಮಾಹಿತಿ ನೀಡಿದ ಗಂಭೀರ ಆರೋಪದ ಮೇಲೆ, ಉತ್ತರ ಪ್ರದೇಶದ ಗಲ್ಗೋಟಿಯಾಸ್ ವಿಶ್ವವಿದ್ಯಾಲಯದ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದು, ಶೃಂಗಸಭೆಯಿಂದ ತಕ್ಷಣ ಹೊರ ಹೋಗುವಂತೆ ಸೂಚಿಸಿದೆ.

ಸರ್ಕಾರಿ ಮೂಲಗಳ ಪ್ರಕಾರ, ವಿಶ್ವವಿದ್ಯಾಲಯ ತಕ್ಷಣವೇ ಎಐ ಶೃಂಗಸಭೆಯ ಎಕ್ಸ್ಪೊದಿಂದ ಹೊರ ಹೋಗುವಂತೆ ಸೂಚಿಸಲಾಗಿದೆ. ಚೀನಾದ ತಂತ್ರಜ್ಞಾನವನ್ನು ಆಮದು ಮಾಡಿಕೊಂಡು ಅದನ್ನು ದೇಶೀಯ ಅವಿಷ್ಕಾರವೆಂದು ತಪ್ಪು ಮಾಹಿತಿ ಹರಡಿದ್ದು, ಮುಜುಗರ ಉಂಟುಮಾಡಿದೆ ಎಂದು ತಿಳಿಸಲಾಗಿದೆ. ಹೀಗಾಗಿ, ಎಕ್ಸ್ಪೋದಿಂದ ವಿಶ್ವವಿದ್ಯಾಲಯ ತಕ್ಷಣವೇ ಹೊರಡುವಂತೆ ಶೋಕಾಸ್ ನೋಟಿಸ್ ನೀಡಲಾಗಿದೆ.

ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ಗಲ್ಗೋಟಿಯಾಸ್ ವಿಶ್ವವಿದ್ಯಾಲಯ ಎಐ ಶೃಂಗಸಭೆಯಲ್ಲಿ ತಮ್ಮ ಅವಿಷ್ಕಾರ ಎಂದು ರೋಬೋಟಿಕ್ ಡಾಗ್ ಒರಿಯಾನ್ ಅನ್ನು ಪ್ರದರ್ಶಿಸಿದೆ. ವಿಶ್ವವಿದ್ಯಾಲಯವು ತನ್ನ 350 ಕೋಟಿ ರೂ ಎಐ ಪರಿಸರ ವ್ಯವಸ್ಥೆಯ ಭಾಗವೆಂದು ಇದನ್ನು ಪ್ರಸ್ತುತಪಡಿಸಿತ್ತು.

ರೋಬೋಟಿಕ್ ಡಾಕ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವುದರ ಜೊತೆಗೆ, ಅದು ಚೀನಾದ ಯುನಿಟ್ರೀ ರೋಬೋಟಿಕ್ಸ್ನ ರೋಬೋಟಿಕ್ ಡಾಗ್ನ ಅವಿಷ್ಕಾರ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಈ ಸಾಧನ ಆನ್ಲೈನ್ನಲ್ಲಿ ಲಭ್ಯವಿದ್ದು, ಇದರ ಬೆಲೆ ಅಂದಾಜು 2ರಿಂದ 3 ಲಕ್ಷ ರೂ ಎಂದು ಹೇಳಲಾಗುತ್ತಿದೆ. ಚೀನಾದ ರೋಬೋಟಿಕ್ ಅವಿಷ್ಕಾರವನ್ನು ದೇಶೀಯ ಉತ್ಪನ್ನವೆಂದು ತಪ್ಪಾಗಿ ಪ್ರದರ್ಶಿಸಿದ ನಡೆ ಭಾರೀ ಟೀಕೆಗಳಿಗೆ ಕಾರಣವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments