Thursday, May 14, 2026
Google search engine
Homeರಾಜ್ಯಬೆಳಗಾವಿ ಡಿಸಿಸಿ ಬ್ಯಾಂಕ್‌ ಗೆ 2 ಲಕ್ಷ ರೂ. ದಂಡ ವಿಧಿಸಿದ ಆರ್‌ ಬಿಐ

ಬೆಳಗಾವಿ ಡಿಸಿಸಿ ಬ್ಯಾಂಕ್‌ ಗೆ 2 ಲಕ್ಷ ರೂ. ದಂಡ ವಿಧಿಸಿದ ಆರ್‌ ಬಿಐ

ಬೆಳಗಾವಿ: ಬ್ಯಾಂಕಿಂಗ್​​​​ ನಿಯಮ ಉಲ್ಲಂಘಿಸಿದ್ದಕ್ಕಾಗಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್​ ಗೆ (ಡಿಸಿಸಿ) ಭಾರತೀಯ ರಿಸರ್ವ್ ಬ್ಯಾಂಕ್​​ (RBI) 2 ಲಕ್ಷ ರೂ ದಂಡ ವಿಧಿಸಿದೆ.

ಫೆ.23ರಂದೇ ಆರ್​ಬಿಐ ದಂಡ ವಿಧಿಸಿ ಆದೇಶ ಹೊರಡಿಸಿರುವ ವಿಷಯ ತಡವಾಗಿ ಬೆಳಕಿಗೆ ಬಂದಿದೆ.

ಬ್ಯಾಂಕಿಂಗ್​ ನಿಯಂತ್ರಣ ಕಾಯ್ದೆ-1949ರ ಸೆಕ್ಷನ್​ 20ನ್ನು ಸೆಕ್ಷನ್​ 56 ರೊಂದಿಗೆ ಓದಿದ ನಿಯಮಗಳ ಉಲ್ಲಂಘನೆ ಹಾಗೂ ಗೋಲ್ಡ್​ ಲೋನ್​-ಬುಲೆಟ್ ರಿಪೇಮೆಂಟ್‌ ಯೋಜನೆ ಮತ್ತು ವಾಣಿಜ್ಯ ರಿಯಲ್ ಎಸ್ಟೇಟ್‌ಗೆ ಎಕ್ಸ್‌ಪೋಜರ್‌ ಸಂಬಂಧ ಆರ್‌ಬಿಐ ನೀಡಿದ್ಧ ಮಾರ್ಗಸೂಚಿಗಳನ್ನು ಪಾಲಿಸದೇ ಇರುವುದೇ ದಂಡ ಬೀಳಲು ಕಾರಣವಾಗಿದೆ.

ಸೆಕ್ಷನ್​ 47A (1) (ಸಿ) ಅನ್ನು ಸೆಕ್ಷನ್ 46 (4) (i) ಮತ್ತು 56ರೊಂದಿಗೆ ಓದಿದ ಅಧಿಕಾರದಡಿ ಬೆಳಗಾವಿ ಡಿಸಿಸಿ ಬ್ಯಾಂಕ್ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

2025 ಮಾರ್ಚ್​ 31ರ ಹಣಕಾಸು ಸ್ಥಿತಿಯನ್ನು ಆಧರಿಸಿ ನಬಾರ್ಡ್​ ನಡೆಸಿದ ನಿಯಮಿತ ಪರಿಶೀಲನೆಯಲ್ಲಿ ಹಲವು ಲೋಪಗಳು ಕಂಡುಬಂದಿದ್ದವು. ಆ ಹಿನ್ನೆಲೆಯಲ್ಲಿ ಬ್ಯಾಂಕಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು. ಬ್ಯಾಂಕಿನ ಲಿಖಿತ ಉತ್ತರ ಮತ್ತು ವೈಯಕ್ತಿಕ ವಿಚಾರಣೆ ನಂತರ ಆರೋಪಗಳು ಸ್ಪಷ್ಟವಾಗಿವೆ ಎಂದು ಆರ್​ಬಿಐ ಮೂಲಗಳು ಸ್ಪಷ್ಟಪಡಿಸಿವೆ.

ಬ್ಯಾಂಕ್​ ನಿರ್ದೇಶಕರ ಸಂಬಂಧಿಗಳಿಗೆ ಸಾಲ ಮಂಜೂರು ಮಾಡಿರುವುದು, ನಿಗದಿತ ಮಿತಿಯನ್ನು ಮೀರಿ ಬುಲೆಟ್ ರಿಪೇಮೆಂಟ್‌ ಯೋಜನೆಯಡಿ ಚಿನ್ನದ ಸಾಲ ನೀಡಿರುವುದು ಹಾಗೂ ವಸತಿಯೇತರ ವಾಣಿಜ್ಯ ರಿಯಲ್ ಎಸ್ಟೇಟ್ ಯೋಜನೆಗಳಿಗೆ ಸಾಲ ನೀಡಿರುವುದು ಸೇರಿದಂತೆ ಹಲವು ಅಂಶಗಳನ್ನು ಪರಿಗಣಿಸಿ ಈ ದಂಡ ವಿಧಿಸಲಾಗಿದೆ ಎನ್ನಲಾಗಿದೆ.

ಬೆಳಗಾವಿ ಡಿಸಿಸಿ ಬ್ಯಾಂಲಕ್​​ ಡಿಸೆಂಬರ್ 17, 1918ರಂದು ದಿ.ಬೆಳಗಾವಿ ಡಿಸ್ಟ್ರಿಕ್ಟ್ ಸೆಂಟ್ರಲ್ ಕೋ-ಆಪ್ ಬ್ಯಾಂಕ್ ನೋಂದಾಯಿಸಲ್ಪಟ್ಟು, ಫೆಬ್ರವರಿ 10, 1919ರಂದು ಬೆಳಗಾವಿ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಅಧಿಕೃತವಾಗಿ ಶುಭಾರಂಭ ಮಾಡಿತ್ತು. 13,043 ರೂ. ದುಡಿಯುವ ಬಂಡವಾಳದಿಂದ ಆರಂಭಗೊಂಡ ಈ ಬ್ಯಾಂಕ್ ಸದ್ಯ 500 ಕೋಟಿ ಅಧಿಕೃತ ಶೇರು ಬಂಡವಾಳ ಹೊಂದಿದ್ದು, ಆ ಪೈಕಿ 303 ಕೋಟಿ ಸಂಗ್ರಹಿಸಿದ ಶೇರು ಬಂಡವಾಳವಾಗಿದೆ.

ಗ್ರಾಹಕರಿಂದ ₹6,087 ಕೋಟಿ ಠೇವಣಿ ಸಂಗ್ರಹಿಸಿದೆ. ₹2,275 ಕೋಟಿ ಹೂಡಿಕೆ ಮಾಡಿದ್ದು, ₹8,592 ಕೋಟಿ ದುಡಿಯುವ ಬಂಡವಾಳ, 5,892 ಕೋಟಿ ರೂ‌‌. ಸಾಲ ವಿತರಿಸುವ ಮೂಲಕ ಜಿಲ್ಲೆಯ ರೈತರು, ಗ್ರಾಹಕರಿಗೆ ವರದಾನವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments