ನವದೆಹಲಿ: ರಾಜ್ಯಸಭೆಯ 38 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಎನ್ ಡಿಎ ಮೇಲುಗೈ ಸಾಧಿಸಿದೆ. ಕಾಂಗ್ರೆಸ್ ಮೈತ್ರಿಕೂಟಕ್ಕೆ ಹಿನ್ನಡೆ ಉಂಟಾಗಿದೆ.
ಬಿಹಾರದಲ್ಲಿ 5 ಸ್ಥಾನಗಳಿಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನದ ಲಾಭ ಪಡೆದು ಎಲ್ಲಾ 5 ಸ್ಥಾನಗಳನ್ನು ಗೆದ್ದ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಕ್ಲೀನ್ ಸ್ವೀಪ್ ಮಾಡಿದೆ.
ಒಡಿಶಾದಲ್ಲಿ 4 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 2 ಬಿಜೆಪಿ, 1 ಆರ್ ಎಲ್ ಡಿ ಹಾಗೂ 1 ಸ್ವತಂತ್ರ ಅಭ್ಯರ್ಥಿ ಗೆಲುವು ಕಂಡಿದ್ದಾರೆ.
ಹರಿಯಾಣದಲ್ಲಿ ಮತ ಎಣಿಕೆ ವೇಳೆ ಗೊಂದಲ ಉಂಟಾಗಿದ್ದರಿಂದ ಸುಮಾರು 2 ಗಂಟೆಗಳ ಕಾಲ ಮತ ಎಣಿಕೆ ಸ್ಥಗಿತಗೊಳಿಸಲಾಗಿದೆ.
ಮೂವರು ಶಾಸಕರು ಗೌಪ್ಯವಾಗಿ ಮತ ಚಲಾವಣೆಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಗದ್ಧಲದ ಗೂಡಾಗಿದ್ದು, ಅಧಿಕಾರಿಗಳು ಮತ ಎಣಿಕೆ ನಿಲ್ಲಿಸಿದರು.
ಎಐಸಿಸಿ ಮಲ್ಲಿಕಾರ್ಜುನ ಖರ್ಗೆ ಕೂಡಲೇ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದು ಮತ ಎಣಿಕೆಯಲ್ಲಿ ಗೊಂದಲ ತಪ್ಪಿಸಲು ಮನವಿ ಮಾಡಿದ್ದಾರೆ.



