Wednesday, June 24, 2026
Google search engine
Homeಕ್ರೀಡೆ13 ವರ್ಷದಲ್ಲೇ ಮೊದಲ ಬಾರಿ ಗೆಲುವಿನ ಆರಂಭದ ದಾಖಲೆ ಬರೆದ ಮುಂಬೈ ಇಂಡಿಯನ್ಸ್!

13 ವರ್ಷದಲ್ಲೇ ಮೊದಲ ಬಾರಿ ಗೆಲುವಿನ ಆರಂಭದ ದಾಖಲೆ ಬರೆದ ಮುಂಬೈ ಇಂಡಿಯನ್ಸ್!

ಆರಂಭಿಕರಾದ ರೋಹಿತ್ ಶರ್ಮ ಮತ್ತು ರಿಯಾನ್ ರಿಕಲ್ಟನ್ ಸಿಡಿಲಬ್ಬರದ ಜೊತೆಯಾಟದಿಂದ ಮುಂಬೈ ಇಂಡಿಯನ್ಸ್ ಅತ್ಯಧಿಕ ಮೊತ್ತವನ್ನು ಬೆಂಬತ್ತಿ ಐಪಿಎಲ್ ನಲ್ಲಿ 13 ವರ್ಷಗಳ ನಂತರ ಮೊದಲ ಬಾರಿ ಗೆಲುವಿನ ಆರಂಭ ಪಡೆದ ದಾಖಲೆ ಬರೆದಿದೆ.

ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು 6 ವಿಕೆಟ್ ಗಳಿಂದ ಮುಂಬೈ ಇಂಡಿಯನ್ಸ್ ಮಣಿಸಿತು.

ಮೊದಲು ಬ್ಯಾಟ್ ಮಾಡಿದ ಕೆಕೆಆರ್ 4 ವಿಕೆಟ್ ಗೆ 220 ರನ್ ಪೇರಿಸಿತು. ಮುಂಬೈ ಇಂಡಿಯನ್ಸ್ 19.1 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.

ಕಠಿಣ ಗುರಿ ಬೆಂಬತ್ತಿದ ಮುಂಬೈ ಇಂಡಿಯನ್ಸ್ ಗೆ ರೋಹಿತ್ ಶರ್ಮ ಮತ್ತು ರಿಕಲ್ಟನ್ ಮೊದಲ ವಿಕೆಟ್ ಗೆ 148 ರನ್ ಜೊತೆಯಾಟದಿಂದ ಭರ್ಜರಿ ಬುನಾದಿ ಹಾಕಿಕೊಟ್ಡರು.

ರೋಹಿತ್ ಶರ್ಮ 38 ಎಸೆತಗಳಲ್ಲಿ 6 ಬೌಂಡರಿ ಮತ್ತು 6 ಸಿಕ್ಸರ್ ನೆರವಿನಿಂದ 78 ರನ್ ಸಿಡಿಸಿ ಔಟಾದರೆ, ರಿಕಲ್ಟನ್ 43 ಎಸೆತಗಳಲ್ಲಿ 4 ಬೌಂಡರಿ ಮತ್ತು 8 ಸಿಕ್ಸರ್ ಒಳಗೊಂಡ 81 ರನ್ ಬಾರಿಸಿದರು.

ನಂತರ ಸೂರ್ಯಕುಮಾರ್ ಯಾದವ್ 16, ಹಾರ್ದಿಕ್ ಪಾಂಡ್ಯ ಅಜೇಯ 18 ಮತ್ತು ತಿಲಕ್ ವರ್ಮಾ 20 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments