ಶಿವಮೊಗ್ಗ: ಸೋಗಾನೆಯಲ್ಲಿರುವ ಶಿವಮೊಗ್ಗ ವಿಮಾನ ನಿಲ್ದಾಣದೊಳಗೆ ಕರಡಿ ನುಗ್ಗಿದೆ.
ಆಹಾರ ಅರಸುತ್ತ ಬಂದಿರುವ ಕರಡಿಯೊಂದು ಇಂದು ಬೆಳಗ್ಗೆ ವಿಮಾನ ನಿಲ್ದಾಣದ ಪಕ್ಕದ ವಿನಾಯಕ ನಗರದಲ್ಲಿ ಕಾಣಿಸಿಕೊಂಡಿತ್ತು. ಅಲ್ಲಿನ ಮನೆಗಳು, ತೋಟಗಳ ಪಕ್ಕದಲ್ಲಿ ಕರಡಿ ಓಡಾಡಿದೆ.
ಸ್ಥಳೀಯರು ಇದರ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾರೆ.ವಿನಾಯಕ ನಗರದಲ್ಲಿ ಕರಡಿ ಕಾಣಿಸಿಕೊಂಡ ವಿಚಾರ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸುತ್ತಿದ್ದರು.
ಇದೇ ವೇಳೆ ವಿಮಾನ ನಿಲ್ದಾಣದ ಕಾಂಪೌಂಡ್ ಒಳಗೆ ಹಾರಿದೆ. ವಿಮಾನ ನಿಲ್ದಾಣದ ಕಾಂಪೌಂಡ್ ಒಳಗೆ ಪೊದೆ ಬೆಳೆದಿದ್ದು ಕರಡಿ ಅವಿತಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಸದ್ಯ ವಿಮಾನ ನಿಲ್ದಾಣದ ಮತ್ತು ವಿನಾಯಕ ನಗರ ಭಾಗದಲ್ಲಿ ಕರಡಿಗಾಗಿ ಶೋಧ ಕಾರ್ಯ ನಡೆಸಿ ಅರಣ್ಯಾಧಿಕಾರಿಗಳು ಸದ್ಯ ಕರಡಿಯನ್ನ ಸೆರೆ ಹಿಡಿದಿದ್ದಾರೆ.



