ಅಮೆರಿಕ- ಇಸ್ರೇಲ್ ವಿರುದ್ಧ ನಡೆಯುತ್ತಿರುವ ಯುದ್ಧಕ್ಕೆ ಕದನ ವಿರಾಮ ಘೋಷಿಸುವ ಪ್ರಸ್ತಾಪವನ್ನು ಇರಾನ್ ನಿರಾಕರಿಸಿದೆ. ಈ ಮೂಲಕ ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ನಡೆಯಬೇಕಿದ್ದ ಮಾತುಕತೆ ಮುರಿದುಬಿದ್ದಿದೆ.
ತಟಸ್ಥ ಸ್ಥಳವಾದ ಇಸ್ಲಮಾಬಾದ್ ನಲ್ಲಿ ಇರಾನ್ ಹಾಗೂ ಅಮೆರಿಕದ ಪ್ರತಿನಿಧಿಗಳು ಆಗಮಿಸಿ ಕದನ ವಿರಾಮ ಘೋಷಿಸುವ ಬಗ್ಗೆ ಮಾತುಕತೆ ನಡೆಸಲು ಪಾಕಿಸ್ತಾನ ಪ್ರಸ್ತಾಪ ಇಟ್ಟಿದ್ದು, ಈ ನಿಟ್ಟಿನಲ್ಲಿ ಎರಡೂ ದೇಶಗಳನ್ನು ಒಪ್ಪಿಸಲು ಪ್ರಯತ್ನಿಸಿತ್ತು.
ಆದರೆ ಇರಾನ್ ತನ್ನ ಅಧಿಕಾರಿಗಳನ್ನು ಕಳುಹಿಸದೇ ಇರಲು ನಿರ್ಧರಿಸಿದ್ದು, ರಾಜೀ ಸಂಧಾನದ ಮಾತುಕತೆಯನ್ನು ತಿರಸ್ಕರಿಸಿದ್ದಾಗಿ ಪಾಕಿಸ್ತಾನ ಘೋಷಿಸಿದೆ. ಈ ಮೂಲಕ ಎರಡೂ ದೇಶಗಳ ನಡುವಣ ರಾಜೀ ಸಂಧಾನದ ಪ್ರಯತ್ನ ಬಾಗಿಲು ಮುಚ್ಚಿದಂತಾಗಿದೆ.
ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ನಡೆಯಬೇಕಿದ್ದ ರಾಜೀ ಸಂಧಾನಕ್ಕೆ ಟರ್ಕಿ ಮತ್ತು ಈಜಿಪ್ಟ್ ದೇಶಗಳು ಕೈ ಜೋಡಿಸಿದ್ದವು. ಮಾತುಕತೆ ಮುರಿದು ಬಿದ್ದಿದ್ದರಿಂದ ಈ ದೇಶಗಳು ಹೊಸದಾಗಿ ಪರ್ಯಾಯ ಮಾರ್ಗ ಹುಡುಕುಲು ಮುಂದಾಗಿವೆ.
ಕದನ ವಿರಾಮ ಘೋಷಣೆ ಆಗಿದ್ದರೆ ಅದರಿಂದ ಹೆಚ್ಚು ಲಾಭವಾಗುತ್ತಿದ್ದು, ಕತಾರ್ ಮತ್ತು ಇಸ್ತಾಂಬುಲ್ ಗಳಿಗೆ ಅನುಕೂಲವಾಗುತ್ತಿದ್ದವು. ಏಕೆಂದರೆ ಎರಡೂ ದೇಶಗಳ ನಡುವಣ ಯುದ್ಧದಲ್ಲಿ ಅತೀ ಹೆಚ್ಚು ಹಾನಿಗೆ ಒಳಗಾಗಿದೆ.
ಇದೇ ವೇಳೆ ಹರ್ಮುಜ್ ಜಲಸಂಧಿ ಮುಕ್ತಗೊಳಿಸದೇ ಇದ್ದರೆ ಇರಾನ್ ಸರ್ವನಾಶ ಮಾಡುವುದಾಗಿ ಅಮೆರಿಕ ಅಧ್ಯಕ್ದ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.



