Wednesday, May 27, 2026
Google search engine
Homeರಾಜ್ಯಮೇಕೆದಾಟುಗೆ ಅವಕಾಶ ಕೊಡಬೇಡಿ: ಪ್ರಧಾನಿಗೆ ವಿಜಯ್ ಮೊರೆ

ಮೇಕೆದಾಟುಗೆ ಅವಕಾಶ ಕೊಡಬೇಡಿ: ಪ್ರಧಾನಿಗೆ ವಿಜಯ್ ಮೊರೆ

ನವದೆಹಲಿ: ತಮಿಳುನಾಡು ಮತ್ತು ಕರ್ನಾಟಕ ಗಡಿಯಲ್ಲಿ ಮೇಕೆದಾಟು ಆಣೆಕಟ್ಟು ನಿರ್ಮಾಣಕ್ಕೆ ಅವಕಾಶ ಕೊಡಬೇಡಿ ಎಂದು ತಮಿಳುನಾಡು ಸಿಎಂ ವಿಜಯ್ ಪ್ರಧಾನಿ ಮೋದಿಗೆ ಮನವಿ ಮಾಡಿದ್ದಾರೆ.

ಬುಧವಾರ ಪ್ರಧಾನಿ ಅವರನ್ನು ಭೇಟಿ ಮಾಡಿ ಸುಮಾರು 20 ನಿಮಿಷಗಳ ಕಾಲ ಸುದೀರ್ಘ ಚರ್ಚೆ ನಡೆಸಿದ ವೇಳೆ ವಿಜಯ್, ತಮಿಳುನಾಡು ವಿವಾದ ಹಾಗೂ ಸಮಸ್ಯೆಗಳ ಕುರಿತ ದೊಡ್ಡ ಪಟ್ಟಿಯನ್ನು ಮುಂದಿಟ್ಟಿದ್ದಾರೆ.

ಮೇಕೆದಾಟು ಯೋಜನೆಗೆ ಅವಕಾಶ ನೀಡಿದರೆ ಕಾವೇರಿ ನದಿ ಹಂಚಿಕೆ ಕುರಿತ ಕಾವೇರಿ ಜಲ ನ್ಯಾಯ ಮಂಡಳಿ ಮತ್ತು ಸುಪ್ರೀಂಕೋರ್ಟ್ ತೀರ್ಪಿನ ಉಲ್ಲಂಘನೆ ಆಗಲಿದೆ ಎಂದು ಅವರು ವಿವರಿಸಿದ್ದಾರೆ.

ಕೇಂದ್ರದ ಅನುಮತಿ ಇಲ್ಲದೇ ಮೇಕೆದಾಟು ಯೋಜನೆ ಜಾರಿ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಆಣೆಕಟ್ಟು ನಿರ್ಮಾಣಕ್ಕೆ ಅವಕಾಶ ನೀಡದಂತೆ ಜಲಶಕ್ತಿ ಸಚಿವಾಲಯಕ್ಕೆ ಸೂಚಿಸುವಂತೆ ಅವರು ಮನವಿ ಮಾಡಿದ್ದಾರೆ.

ಇದೇ ವೇಳೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ವಿವಾದಾತ್ಮಕ ತಮಿಳು ನಾಡ ಗೀತೆ ಹಾಡಲು ಅವಕಾಶ ನೀಡುವಂತೆ ವಿಜಯ್ ಮನವಿ ಮಾಡಿದರು.

ಇತ್ತೀಚೆಗೆ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದ ವೇಳೆ ತಮಿಳು ನಾಡಗೀತೆಯನ್ನು ಕೊನೆಯಲ್ಲಿ ಹಾಡಿಸಿದ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments