Thursday, May 21, 2026
Google search engine
Homeದೇಶ59 ವರ್ಷದ ನಂತರ ತಮಿಳುನಾಡು ಸಂಪುಟದಲ್ಲಿ ಸ್ಥಾನ ಪಡೆದ ಕಾಂಗ್ರೆಸ್‌

59 ವರ್ಷದ ನಂತರ ತಮಿಳುನಾಡು ಸಂಪುಟದಲ್ಲಿ ಸ್ಥಾನ ಪಡೆದ ಕಾಂಗ್ರೆಸ್‌

ತಮಿಳುನಾಡು ಮುಖ್ಯಮಂತ್ರಿ ವಿಜಯ್‌ ಸಂಪುಟ ವಿಸ್ತರಣೆ ಮಾಡಲಿದ್ದು, ಕಾಂಗ್ರೆಸ್‌ ನ ಇಬ್ಬರು ಶಾಸಕರು ಸ್ಥಾನ ಪಡೆಯಲಿದ್ದಾರೆ. ಈ ಮೂಲಕ 59 ವರ್ಷಗಳ ನಂತರ ತಮಿಳುನಾಡು ಸಂಪುಟದಲ್ಲಿ ಕಾಂಗ್ರೆಸ್‌ ಸ್ಥಾನ ಗಿಟ್ಟಿಸಿದೆ.

ವಿಜಯನ್‌ ನೇತೃತ್ವದ ಸರ್ಕಾರದ ಸಂಪುಟ ವಿಸ್ತರಣೆ ಗುರುವಾರ ನಡೆಯಲಿದ್ದು, 23 ಶಾಸಕರು ಸಂಪುಟ ಸಚಿವರಾಗಿ ಸ್ಥಾನ ಪಡೆಯಲಿದ್ದಾರೆ. ಇದರಲ್ಲಿ ಇಬ್ಬರು ಕಾಂಗ್ರೆಸ್‌ ಶಾಸಕರು ಇದ್ದಾರೆ.

ಕಾಂಗ್ರೆಸ್‌ ನ ಇಬ್ಬರು ಶಾಸಕರು ತಮಿಳುನಾಡು ಸಚಿವ ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ. 59 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕಾಂಗ್ರೆಸ್‌ ಸಂಪುಟದಲ್ಲಿ ಸ್ಥಾನ ಪಡೆಯಲಿದೆ ಎಂದು ಕಾಂಗ್ರೆಸ್‌ ಮುಖಂಡ ಕೆಸಿ ವೇಣುಗೋಪಾಲ್‌ ತಿಳಿಸಿದ್ದಾರೆ.

ಕಾಂಗ್ರೆಸ್‌ ಶಾಸಕರಾದ ರಾಜೇಶ್‌ ಕುಮಾರ್‌ ಮತ್ತು ತಿರು ಪಿ ವಿಶ್ವನಾಥನ್‌ ಅವರನ್ನು ತಮಿಳುನಾಡು ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಅವರು ಎಕ್ಸ್‌ ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಡಿಎಂಕೆ ಜೊತೆ ಕಾಂಗ್ರೆಸ್‌ ದಶಕಗಳಿಂದ ಮೈತ್ರಿ ಮಾಡಿಕೊಂಡಿದೆ. ಆದರೆ ಡಿಎಂಕೆ ಸರ್ಕಾರದಲ್ಲಿ ಕಾಂಗ್ರೆಸ್‌ ಎಂದೂ ಭಾಗಿಯಾಗಿರಲಿಲ್ಲ. ಇದರಿಂದ ಕಾಂಗ್ರೆಸ್‌ ತಮಿಳುನಾಡಿನಲ್ಲಿ ಕೆಲವೇ ಸ್ಥಾನ ಪಡೆದರೂ ಸಚಿವ ಸ್ಥಾನ ಪಡೆಯಲು ಸಾಧ್ಯವಾಗಿರಲಿಲ್ಲ. ಇದರಿಂದ ಕಾಂಗ್ರೆಸ್‌ ಅಧಿಕಾರದಿಂದ 59 ವರ್ಷಗಳ ಕಾಲ ದೂರವಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments