Tuesday, June 2, 2026
Google search engine
Homeರಾಜ್ಯಯು.ಟಿ. ಖಾದರ್ ಗೆ ಬಹುತೇಕ ಸಚಿವ ಸ್ಥಾನ ಫಿಕ್ಸ್; ಇಂದು ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ?

ಯು.ಟಿ. ಖಾದರ್ ಗೆ ಬಹುತೇಕ ಸಚಿವ ಸ್ಥಾನ ಫಿಕ್ಸ್; ಇಂದು ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ?

ಮಂಗಳೂರು: ಹಾಲಿ ಸ್ಪೀಕರ್ ಆಗಿರುವ ಯು.ಟಿ. ಖಾದರ್ ಅವರಿಗೆ ಬಹುತೇಕ ಸಚಿವ ಸ್ಥಾನ ಫಿಕ್ಸ್ ಆಗಿದೆ ಎಂದು ಹೇಳಾಗುತ್ತಿದ್ದು, ಬುಧವಾರ ಬೆಳಿಗ್ಗೆ ಅವರು ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದು ಮಂತ್ರಿ ಆಗುವ ಎಲ್ಲ ಸಾಧ್ಯತೆ ಇವೆ ಎಂದು ಅವರು ಆಪ್ತ ಮೂಲಗಳು ತಿಳಿಸಿವೆ.

ಯು.ಟಿ. ಖಾದರ್ ಅವರು ಸಿದ್ದರಾಮಯ್ಯ ಅವರ ಸರಕಾರದ ಅವಧಿಯ ವೇಳೆಯೇ ಮಂತ್ರಿ ಆಗಬೇಕು ಎಂಬ ಪ್ರಯತ್ನ ನಡೆಸಿದ್ದರು. ಆದರೆ ಕೊನೆ ಗಳಿಗೆಯಲ್ಲಿ ಅವರಿಗೆ ಸ್ಪೀಕರ್ ಸ್ಥಾನ ಅಲಂಕರಿಸಬೇಕಾಯಿತು. ಆದರೆ ಈಗ ಕಾಲ ಪಕ್ವ ಆಗಿದ್ದು, ಈಗ ಡಿ.ಕೆ. ಶಿವಕುಮಾರ್ ಅವರು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಈ ಬಾರಿ ಅವರಿಗೆ ಮಂತ್ರಿ ಮಂಡಳದಲ್ಲಿ ಸಚಿವ ಸ್ಥಾನ ಬಹುತೇಕ ಖಚಿತ ಆದಂತೆ ಆಗಿದೆ.

ತಾನು ಯಾವುದೇ ಸ್ಥಾನದ ಆಕಾಂಕ್ಷಿಯಲ್ಲ, ಯಾವುದೇ ಸ್ಥಾನ ಕೊಟ್ಟರು ನಿಭಾಯಿಸುವೆ. ಸದ್ಯ ನಾನು ಸ್ಪೀಕರ್ ಆಗಿದ್ದೇನೆ. ಪಕ್ಷದ ಹೈಕಮಾಂಡ್ ಯಾವ ಜವಾಬ್ದಾರಿ ನೀಡುತ್ತೇನೆ ಎನ್ನುತ್ತಲೇ ಖಾದರ್ ಇದ್ದಾರೆ. ಆದರೆ ಅವರ ಹೆಸರು ಮುನ್ನಲೆಗೆ ಬಂದಿದ್ದು, ಕರಾವಳಿ ಭಾಗದ ಹಿರಿಯ ಶಾಸಕ ಕೂಡ ಆಗಿರುವುದರಿಂದ ಅವರಿಗೆ ಸಚಿವ ಸ್ಥಾನ ಪಕ್ಕಾ ಎಂದು ಹೇಳಲಾಗುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಊಹಾಪೋಹಗಳ ಆಧಾರದಲ್ಲಿ ಯಾರಿಗೂ ಅಧಿಕಾರ ಸಿಗಲ್ಲ. ವ್ಯಕ್ತಿಯ ಕೆಲಸ, ಕಾರ್ಯಕ್ಷಮತೆ ಹಾಗೂ ಪಕ್ಷದ ವಿಶ್ವಾಸದ ಆಧಾರದ ಮೇಲೆ ಜವಾಬ್ದಾರಿ ನೀಡಲಾಗುತ್ತದೆ. ಉಪ ಮುಖ್ಯಮಂತ್ರಿ ಹುದ್ದೆ ನೀಡುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಸರ್ಕಾರ ಸೂಚಿಸಿದರೆ ವಿಧಾನಸಭಾ ಅಧಿವೇಶನದ ವ್ಯವಸ್ಥೆ ಮಾಡುತ್ತೇನೆ. ಸಚಿವನಾಗಿ ಕೆಲಸ ಮಾಡುವಂತೆ ಹೇಳಿದರೆ ಅದನ್ನು ಮಾಡುತ್ತೇನೆ. ಉಪ ಮುಖ್ಯಮಂತ್ರಿಯ ಜವಾಬ್ದಾರಿ ನೀಡಿದರೂ ನಿಭಾಯಿಸುತ್ತೇನೆ. ಅಂತಿಮ ತೀರ್ಮಾನ ಹೈಕಮಾಂಡ್‌ನದ್ದೇ ಎಂದು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments