ಬೆಂಗಳೂರು: ಭ್ರಷ್ಟರ ವಿರುದ್ಧ ಸಮರ ಸಾರಿರುವ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಮುಂಜಾನೆ ಹಲವು ಜಿಲ್ಲೆಗಳಲ್ಲಿ ದಾಳಿ ನಡೆಸಿ 8 ಮಂದಿ ಭ್ರಷ್ಟ ಅಧಿಕಾರಿಗಳನ್ನು ಬಲೆಗೆ ಕೆಡವಿದ್ದಾರೆ.
ಕಲಬುರಗಿ, ದಾವಣೆಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಸೇರಿ ವಿವಿಧ ಜಿಲ್ಲೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಆದಾಯ ಮೀರಿ ನೂರಾರು ಪಟ್ಟು ಅಕ್ರಮ ಆಸ್ತಿಗಳಿಸಿದ 8 ಅಧಿಕಾರಿಗಳನ್ನು ಬೇಟೆಯಾಡಿ 31ಕೋಟಿ 11ಲಕ್ಷ71 ಸಾವಿರದ 331 ರೂ ಮೌಲ್ಯದ ಅಕ್ರಮ ಆಸ್ತಿಪಾಸ್ತಿಯನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ರಾಜಣ್ಣ ಎಸ್. ಎಲ್, ಹೆಚ್ಚುವರಿ ನಿರ್ದೇಶಕರು, ನಗರ ಯೋಜನೆ, ಕರ್ನಾಟಕ ಗೃಹ ಮಂಡಳಿ, ಕಾವೇರಿ ಭವನ
3 ನಿವೇಶನಗಳು, 2 ವಾಸದ ಮನೆಗಳು, 3 ಎಕರೆ ಕೃಷಿ ಜಮೀನು 40 ಸಾವಿರ ನಗದು, ರೂ 70 ಲಕ್ಷ ಮೌಲ್ಯದ ಚಿನ್ನಾಭರಣಗಳು ಸೇರಿ 7,10,48,000 ರೂ ಮೌಲ್ಯದ ಅಕ್ರಮ ಆಸ್ತಿಪಾಸ್ತಿ ಪತ್ತೆ.
ಉದಯ ಕುಮಾರ್. ಎಂ. ಬಿ. ಸಹಾಯಕ ಕಾರ್ಯಪಾಲಕ ಅಭಿಯಂತರರು, ಬೆಸ್ಕಾಂ ಸಿ-07 ಉಪ ವಿಭಾಗ, ಯಲಹಂಕ
10 ನಿವೇಶನಗಳು, 1 ವಾಸದ ಮನೆ. 1 ಎಕರೆ ಕೃಷಿ ಜಮೀನು, 1,83.650 ನಗದು. 30,29,810 ರೂ ಚಿನ್ನಾಭರಣಗಳು,33 ಲಕ್ಷ ಮೌಲ್ಯದ ವಾಹನಗಳು, 21 ಲಕ್ಷ ಬ್ಯಾಂಕ್ ಠೇವಣಿ ಸೇರಿ 3.90,78,460 ರೂ ಅಕ್ರಮ ಆಸ್ತಿಪಾಸ್ತಿ ಪತ್ತೆ.
ಹರ್ಷವರ್ಧನ ಪಿ. ಎನ್. ಉಪ ಅರಣ್ಯ ಸಂರಕ್ಷಣಾಧಿಕಾರಿ, ದಾವಣಗೆರೆ
4 ನಿವೇಶನಗಳು, 2 ವಾಸದ ಮನೆಗಳು, 30 ಲಕ್ಷ ಮೌಲ್ಯದ ಚಿನ್ನಾಭರಣಗಳು, 25 ಲಕ್ಷ ಮೌಲ್ಯದ ವಾಹನಗಳು 2,70 ಕೋಟಿ ಮೌಲ್ಯದ ಅಕ್ರಮ ಆಸ್ತಿಪಾಸ್ತಿ ಪತ್ತೆ.
ಸಿದ್ದೇಶ್ವರ ಎನ್. ಹೆಬ್ಬಾಳ, ಮುಖ್ಯ ತಾಂತ್ರಿಕ ಅಭಿಯಂತರರು, ಎನ್.ಡಬ್ಲ್ಯೂ.ಕೆ.ಆರ್.ಟಿ.ಸಿ. ಹುಬ್ಬಳ್ಳಿ.
1 ನಿವೇಶನ, 2 ವಾಸದ ಮನೆಗಳು 37 ಲಕ್ಷ ನಗದು ಸೇರಿ ಒಟ್ಟು 2.11.01,620 ರೂ ಪತ್ತೆ
ಸಣ್ಣ ಕೆಂಚಪ್ಪ, ಅಧೀಕ್ಷಕ ಅಭಿಯಂತರರು, ಕೆ.ಆರ್.ಡಿ.ಎಲ್, ಬೆಳಗಾವಿ
3 ವಾಸದ ಮನೆಗಳು, 31 ಎಕರೆ ಕೃಷಿ ಜಮೀನು 1.67.800/- ನಗದು. 54,29,760 ಮೌಲ್ಯದ ಚಿನ್ನಾಭರಣಗಳು , 20,60 ಲಕ್ಷ ಮೌಲ್ಯದ ವಾಹನಗಳು ಸೇರಿ. 2,54,37,700 ರೂ ಮೌಲ್ಯದ ಆಸ್ತಿಪಾಸ್ತಿ ಪತ್ತೆ.
ಕೃಷ್ಣ ನಾಯಿಕ್, ಎಲ್. ಎ, ಕಾರ್ಯದರ್ಶಿಗಳು, ಬಯಲುಸೀಮೆ ಅಭಿವೃದ್ಧಿ ಮಂಡಳಿ, ಚಿತ್ರದುರ್ಗ
7 ನಿವೇಶನಗಳು, 3 ವಾಸದ ಮನೆಗಳು. 2 ಎಕರೆ ಕೃಷಿ ಜಮೀನು, 6.96,290 ರೂ ನಗದು. 43,23,230 ಮೌಲ್ಯದ ಚಿನ್ನಾಭರಣಗಳು , 33.75 ಲಕ್ಷ ಮೌಲ್ಯದ ವಾಹನಗಳು 2.57.74,356 ರೂ ಮೌಲ್ಯದ ಆಸ್ತಿಪಾಸ್ತಿ ಪತ್ತೆ.
ಮಾಣಿಕ್ ಎಸ್. ಕನಕಟ್ಟೆ, ಅಧೀಕ್ಷಕ ಅಭಿಯಂತರರು, ಲೋಕೋಪಯೋಗಿ ಇಲಾಖೆ, ಕಲಬುರಗಿ ವಿಭಾಗ, ಕಲಬುರಗಿ
5 ನಿವೇಶನಗಳು, 3 ವಾಸದ ಮನೆಗಳು. 1 ವಾಣಿಜ್ಯ ಸಂಕೀರ್ಣ, 70 ಲಕ್ಷ ಬೆಲೆಬಾಳುವ ಎಕರೆ ಕೃಷಿ ಜಮೀನು 1.26,810 ನಗದು, 37.92.250 ರೂ ಮೌಲ್ಯದ ಚಿನ್ನಾಭರಣಗಳು 49,15 ಲಕ್ಷ ಮೌಲ್ಯದ ವಾಹನಗಳು ಸೇರಿ 4.94.68.110 ರೂ ಮೌಲ್ಯದ ಅಕ್ರಮ ಆಸ್ತಿಪಾಸ್ತಿ ಪತ್ತೆ.
ಕೆ. ಎಸ್. ಮೋಹನ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಚಿಕ್ಕಮಗಳೂರು ಉಪ ವಿಭಾಗ, ಜಿಂಕೆವನ, ಕಡೂರು ರಸ್ತೆ, ಚಿಕ್ಕಮಗಳೂರು ಜಿಲ್ಲೆ.
3 ನಿವೇಶನಗಳು,2 ವಾಸದ ಮನೆಗಳು. 7 ಎಕರೆ ಕೃಷಿ ಜಮೀನು 1.19.395ರೂ ನಗದು. 5.16.855 ರೂ ಮೌಲ್ಯದ ಚಿನ್ನಾಭರಣಗಳು 5 ಲಕ್ಷ ಮೌಲ್ಯದ ವಾಹನಗಳು ಸೇರಿ 3.62.27.253 ರೂ ಅಕ್ರಮ ಆಸ್ತಿಪಾಸ್ತಿ ಪತ್ತೆ



