Thursday, June 18, 2026
Google search engine
Homeಕ್ರೀಡೆ101 ರನ್ ನಿಂದ ಗೆದ್ದು ಫೈನಲ್ ಗೆ ಲಗ್ಗೆ ಹಾಕಿದ ಭಾರತ `ಎ’

101 ರನ್ ನಿಂದ ಗೆದ್ದು ಫೈನಲ್ ಗೆ ಲಗ್ಗೆ ಹಾಕಿದ ಭಾರತ `ಎ’

ಮೂವರು ಬ್ಯಾಟ್ಸ್ ಮನ್ ಗಳು ಸಿಡಿಸಿದ ಅರ್ಧಶಶತಕ ಹಾಗೂ ನಿಶಾಂತ್ ಸಿಂದು ಆಲ್ ರೌಂಡ್ ಪ್ರದರ್ಶನದಿಂದ ಭಾರತ ಎ ತಂಡ 101 ರನ್ ಗಳ ಭಾರೀ ಅಂತರದಿಂದ ಆಫ್ಘಾನಿಸ್ತಾನ ಎ ತಂಡವನ್ನು ಮಣಿಸಿ ತ್ರಿಕೋನ ಏಕದಿನ ಸರಣಿಯ ಫೈನಲ್ ಗೆ ಲಗ್ಗೆ ಹಾಕಿದೆ.

ಡಂಬುಲಾದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ಎ ತಂಡ 9 ವಿಕೆಟ್ ಗೆ 319 ರನ್ ಪೇರಿಸಿತು. ಕಠಿಣ ಗುರಿ ಬೆಂಬತ್ತಿದ ಆಫ್ಘಾನಿಸ್ಥಾನ ತಂಡ 36.5 ಓವರ್ ಗಳಲ್ಲಿ 218 ರನ್ ಗಳಿಸಲಷ್ಟೇ ಶಕ್ತವಾಯಿತು.

ಭಾರತದ ಯುವ ಸ್ಪಿನ್ನರ್ ನಿಶಾಂತ್ ಸಿದು ದಾಳಿಗೆ ತತ್ತರಿಸಿದ ಆಫ್ಘಾನಿಸ್ತಾನ ಬ್ಯಾಟ್ಸ್ ಮನ್ ಗಳು ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಆಫ್ಘನ್ ಪರ ಬಾಹಿರ್ ಶಾ 52 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 57 ರನ್ ಸಿಡಿಸಿದರೆ, ಫೈಸಲ್ ಶಿನೊಜಾದಾ (46) ಹಾಗೂ ಆರಂಭಿಕ ನಾಯಕ ಇಮ್ರಾನ್ ಮಿರ್ (32) ತಕ್ಕಮಟ್ಟಿಗೆ ತಂಡದ ಪರ ಹೋರಾಟ ನಡೆಸಿದರು.

ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಭಾರತ ತಂಡದ ಪರ ವೈಭವ್ ಸೂರ್ಯವಂಶಿ ಸ್ಫೋಟಕ ಆರಂಭ ನೀಡಿದರೂ (38) ಬೇಗನೇ ನಿರ್ಗಮಿಸಿದರು. ಮತ್ತೊಬ್ಬ ಆರಂಭಿಕ ಪ್ರಿಯಾಂಶ್ ಆರ್ಯ 42 ಎಸೆತಗಳಲ್ಲಿ 9 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 58 ರನ್ ಗಳಿಸಿದರು.

ಮಧ್ಯಮ ಕ್ರಮಾಂಕದಲ್ಲಿ ನಾಯಕ ತಿಲಕ್ ವರ್ಮಾ 75 ಎಸೆತಗಳಲ್ಲಿ 5 ಬೌಂಡರಿ ಸಹಾಯದಿಂದ 59 ರನ್ ಮತ್ತು ಕುಮಾರ್ ಕುಶಾಗ್ರಾ 67 ಎಸೆತಗಳಲ್ಲಿ 5 ಬೌಂಡರಿಯೊಂದಿಗೆ 58 ರನ್ ಬಾರಿಸಿದರು. ನಿಶಾಂತ್ 26 ರನ್ ಬಾರಿಸಿ ಗಮನ ಸೆಳೆದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments