ಲಂಡನ್: ಬ್ಯಾಂಕ್ ಗೆ ಕೋಟ್ಯಂತರ ರೂಪಾಯಿ ವಂಚಿಸಿ ಭಾರತದಿಂದ ಪರಾರಿಯಾಗಿರುವ ವಜ್ರದ ವ್ಯಾಪಾರಿ ನೀರವ್ ಮೋದಿಗೆ ಲಂಡನ್ ನ್ಯಾಯಾಲಯದಲ್ಲಿ ಭಾರೀ ಹಿನ್ನಡೆ ಉಂಟಾಗಿದೆ.
ಬ್ಯಾಂಕ್ ಆಫ್ ಇಂಡಿಯಾದಿಂದ ಪಡೆದ 10.7 ದಶಲಕ್ಷ ಡಾಲರ್ ಅಂದರೆ ಸುಮಾರು 100 ಕೋಟಿ ರೂ. ಮರು ಪಾವತಿಸುವಂತೆ ಲಂಡನ್ ನ್ಯಾಯಾಲಯ ನೀರವ್ ಮೋದಿಗೆ ಸೂಚಿಸಿದೆ. ಈ ಮೂಲಕ ಕಾನೂನು ಹೋರಾಟದಲ್ಲಿ ಬ್ಯಾಂಕ್ ಬರೋಡಾಗೆ ದೊಡ್ಡ ಜಯ ಲಭಿಸಿದಂತಾಗಿದೆ.
ನೀರವ್ ಮೋದಿ ತಮ್ಮ ಕಂಪನಿಗಳಲ್ಲಿ ಒಂದಾದ ಫೈರ್‌ಸ್ಟಾರ್ ಡೈಮಂಡ್‌ಗೆ ಸಾಲಕ್ಕಾಗಿ ಒದಗಿಸಿದ ವೈಯಕ್ತಿಕ ಗ್ಯಾರಂಟಿಗೆ ಸಂಬಂಧಿಸಿದೆ. ಲಂಡನ್ ನ್ಯಾಯಾಲಯದ ಈ ನಿರ್ಧಾರವನ್ನು ವಿದೇಶಿ ನ್ಯಾಯಾಲಯಗಳಲ್ಲಿ ಭಾರತೀಯ ಬ್ಯಾಂಕುಗಳ ವಸೂಲಾತಿ ಪ್ರಯತ್ನಗಳಿಗೆ ಪ್ರಮುಖ ಯಶಸ್ಸು ಎಂದು ಪರಿಗಣಿಸಲಾಗುತ್ತಿದೆ.
ಪ್ರಕರಣವು 2012ರಲ್ಲಿ ಬ್ಯಾಂಕ್ ಆಫ್ ಇಂಡಿಯಾ, ನೀರವ್ ಮೋದಿ ಒಡೆತನದ ದುಬೈ ಮೂಲದ ಫೈರ್‌ಸ್ಟಾರ್ ಡೈಮಂಡ್ ಎಫ್ ಜೆಇಗೆ ನೀಡಿದ ಸಾಲಕ್ಕೆ ಸಂಬಂಧಿಸಿದೆ. ನೀರವ್ ಮೋದಿ ಆಗಸ್ಟ್ 2013ರಲ್ಲಿ ಈ ಸಾಲಕ್ಕೆ ವೈಯಕ್ತಿಕ ಗ್ಯಾರಂಟಿ ನೀಡಿದ್ದರು. ಕಂಪನಿಯು ಡೀಫಾಲ್ಟ್ ಆದ ನಂತರ ಬ್ಯಾಂಕ್ ನ್ಯಾಯಾಲಯವನ್ನು ಸಂಪರ್ಕಿಸಿತು.
ನೀರವ್ ಮೋದಿ ಸಾಲಕ್ಕೆ ವೈಯಕ್ತಿಕ ಖಾತರಿ ನೀಡಿದ್ದು, ಬಾಕಿ ಸಾಲದ ಮೊತ್ತವನ್ನು ಮರುಪಾವತಿಸುವ ಜವಾಬ್ದಾರಿಯನ್ನು ಹೊಂದಿದ್ದಾರೆ ಎಂದು ಬ್ಯಾಂಕ್ ಹೇಳಿಕೊಂಡಿದೆ. ನೀರವ್ ಮೋದಿ ಈ ಹಕ್ಕನ್ನು ಯುಕೆ ನ್ಯಾಯಾಲಯಗಳಲ್ಲಿ ಪ್ರಶ್ನಿಸಿದರು. ಪ್ರಕರಣವನ್ನು ಪ್ರತಿನಿಧಿಸಲು ಅವರು ಲಂಡನ್‌ನಲ್ಲಿ ಖುದ್ದಾಗಿ ಹಾಜರಾಗಿದ್ದರು.



