Thursday, July 9, 2026
Google search engine
Homeರಾಜ್ಯಲೋಕಾಯುಕ್ತ ದಾಳಿ: 10 ಭ್ರಷ್ಟರ ಬಳಿ 50 ಕೋಟಿ ಅಕ್ರಮ ಆಸ್ತಿ ಪತ್ತೆ

ಲೋಕಾಯುಕ್ತ ದಾಳಿ: 10 ಭ್ರಷ್ಟರ ಬಳಿ 50 ಕೋಟಿ ಅಕ್ರಮ ಆಸ್ತಿ ಪತ್ತೆ

ಬೆಂಗಳೂರು: ಆದಾಯ ಮೀರಿ ನೂರಾರು ಪಟ್ಟು ಆಕ್ರಮ ಆಸ್ತಿಗಳಿಕೆ ಮಾಡಿರುವ ಐವರು ಇಂಜಿನಿಯರ್ ಗಳು ಸೇರಿ  10 ಮಂದಿ ಭ್ರಷ್ಟ ಅಧಿಕಾರಿಗಳನ್ನು  ಬಲೆಗೆ ಕೆಡವಿರುವ ಲೋಕಾಯುಕ್ತ ಅಧಿಕಾರಿಗಳು 49 ಕೋಟಿ 83 ಲಕ್ಷ 37 ಸಾವಿರ 324 ರೂಗಳ ಅಕ್ರಮ ಆಸ್ತಿಪಾಸ್ತಿಯನ್ನು ಪತ್ತೆಹಚ್ಚಿದ್ದಾರೆ.

ತೋಟಗಾರಿಕೆ,ನೀರಾವರಿ ಸೇರಿ ವಿವಿಧ ಇಲಾಖೆಗಳ 10 ಮಂದಿ ಭ್ರಷ್ಟ ಅಧಿಕಾರಿಗಳ ಮನೆ ಇತರೆಡೆ ಲೋಕಾಯುಕ್ತ ಅಧಿಕಾರಿಗಳು  ಬುಧವಾರ ಮುಂಜಾನೆಯಿಂದಲೇ ಏಕಕಾಲದಲ್ಲಿ ದಾಳಿ ನಡೆಸಿ ನಗದು, ಚಿನ್ನಾಭರಣಗಳು, ವಾಹನಗಳು,ಐಷಾರಾಮಿ ವಸ್ತುಗಳು ಸೇರಿ 49 ಕೋಟಿ 83 ಲಕ್ಷ 37 ಸಾವಿರ 324 ರೂಗಳ ಅಕ್ರಮ ಆಸ್ತಿಪಾಸ್ತಿಯನ್ನು ಪತ್ತೆಹಚ್ಚಿ ಪರಿಶೀಲನೆ ಕೈಗೊಂಡಿದ್ದಾರೆ.

ಬೆಂಗಳೂರು ನಗರ, ಬೆಂಗಳೂರು ದಕ್ಷಿಣ,ರಾಯಚೂರು ತುಮಕೂರು, ಕಲಬುರಗಿ,ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಗಳ 53 ಕಡೆಗಳಲ್ಲಿ ದಾಳಿ ನಡೆಸಿ 10 ಮಂದಿ ಭ್ರಷ್ಟರ ಅಕ್ರಮ‌ ಆಸ್ತಿಪಾಸ್ತಿ ದಾಖಲೆಗಳನ್ನು ಪರಿಶೀಲನೆ ಕೈಗೊಳ್ಳಲಾಗಿದೆ.

ರಾಯಚೂರಿನ ಕೃಷ್ಣ ಭಾಗ್ಯ ಜಲನಿಗಮದ ಕಾರ್ಯನಿರ್ವಾಹಕ ಇಂಜಿನಿಯರ್ ಬಸನಗೌಡ ಪಾಟೀಲ್ ಅವರ ಬಳಿ 6 ಕೋಟಿ 11 ಲಕ್ಷದ 55 ಸಾವಿರ 894 ರೂ ಮೌಲ್ಯದ ಅಕ್ರಮ ಆಸ್ತಿಪಾಸ್ತಿ ಪತ್ತೆಯಾಗಿದೆ.

ಚಿತ್ರದುರ್ಗದ ತೋಟಗಾರಿಕಾ ವಿಶ್ವವಿದ್ಯಾಲಯದ ಸಹಾಯಕ ಪ್ರೋಪೆಸರ್  ಶಂಕರ್ ಎಂ ಅವರ ಬಳಿ 1 ಕೋಟಿ 87 ಲಕ್ಷದ 83 ಸಾವಿರ 680 ರೂ ಮೌಲ್ಯದ ಅಕ್ರಮ ಆಸ್ತಿಪಾಸ್ತಿ ಪತ್ತೆಯಾಗಿದೆ.

ಚಿತ್ರದುರ್ಗದ ಜಲಾನಯನ ಅಭಿವೃದ್ಧಿ ಇಲಾಖೆಯ ವಲಯ ಅರಣ್ಯಾಧಿಕಾರಿ  ದುಗ್ಗಪ್ಪ ಬಿ.ಹೆಚ್ ಅವರ ಬಳಿ 1 ಕೋಟಿ 95 ಲಕ್ಷದ 20 ಸಾವಿರ 311 ರೂ ಮೌಲ್ಯದ ಅಕ್ರಮ ಆಸ್ತಿಪಾಸ್ತಿ ಪತ್ತೆಯಾಗಿದೆ.

ಬೆಂಗಳೂರಿನ ಲೋಕೋಪಯೋಗಿ ಇಲಾಖೆಯ ಸಹಾಯಕ  ಇಂಜಿನಿಯರ್ ನರೇಂದ್ರ ಕುಮಾರ್,ಕೆಆರ್
ಅವರ ಬಳಿ 5.75 ಕೋಟಿ ಮೌಲ್ಯದ ಅಕ್ರಮ ಆಸ್ತಿಪಾಸ್ತಿ ಪತ್ತೆಯಾದರೆ, ಕೆಆರ್ ಡಿಎಲ್ ನ ಅಧೀಕ್ಷಕ ಇಂಜಿನಿಯರ್ ಪ್ರವೀಣ್ ಬಿ.ಶ್ರೀ ಹರಿ ಬಳಿ 4 ಕೋಟಿ 33 ಲಕ್ಷದ 63 ಸಾವಿರ 598 ರೂ ಮೌಲ್ಯದ ಅಕ್ರಮ ಆಸ್ತಿಪಾಸ್ತಿ ಪತ್ತೆಯಾಗಿದೆ.

ಬೆಂಗಳೂರು ಕೇಂದ್ರ ಕಚೇರಿಯ ಕೃಷಿ ಮಾರಾಟ ಮಂಡಳಿಯ ಹೆಚ್ಚುವರಿ ನಿರ್ದೇಶಕಿ  ಪುಷ್ಪ ಡಿ.ಆರ್ ಅವರ ಬಳಿ 5 ಕೋಟಿ 93 ಲಕ್ಷದ 36 ಸಾವಿರ ಮೌಲ್ಯದ ಅಕ್ರಮ ಆಸ್ತಿಪಾಸ್ತಿ ಪತ್ತೆಯಾಗಿದೆ. ತುಮಕೂರಿನ ಸಣ್ಣ ನೀರಾವರಿ ಇಲಾಖೆ ಸಹಾಯಕ ಇಂಜಿನಿಯರ್ ಮಧುಸೂದನ್ ಅವರ ಬಳಿ 2 ಕೋಟಿ 10 ಲಕ್ಷದ 8 ಸಾವಿರ 522 ರೂ ಮೌಲ್ಯದ ಅಕ್ರಮ ಆಸ್ತಿಪಾಸ್ತಿ ಪತ್ತೆಯಾಗಿದೆ.

ಬೆಂಗಳೂರು ದಕ್ಷಿಣ ಕುಂಬಳಗೋಡು ಗ್ರಾಮ ಪಂಚಾಯತ್ ನ ಪಿಡಿಓ ತಿಮ್ಮಯ್ಯ ಅವರ ಬಳಿ 2 ಕೋಟಿ 53 ಲಕ್ಷದ 7ಸಾವಿರ ಮೌಲ್ಯದ ಅಕ್ರಮ ಆಸ್ತಿಪಾಸ್ತಿ ಪತ್ತೆಯಾಗಿದೆ.

ಶಿವಮೊಗ್ಗದ ಜಿಲ್ಲೆಯ ಅಂಕೋಲದ ಅರಣ್ಯ ಇಲಾಖೆ ಸಂಶೋಧನಾ ಕೇಂದ್ರದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಿರಣ್ ಅಂಗಡಿ ಅವರ ಬಳಿ 1 ಕೋಟಿ 94 ಲಕ್ಷದ 86 ಸಾವಿರ 84 ರೂ ಮೌಲ್ಯದ ಅಕ್ರಮ ಆಸ್ತಿಪಾಸ್ತಿ ಪತ್ತೆಯಾಗಿದೆ.
ಕಲಬುರಗಿಯ ಜೆಸ್ಕಾಂನ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅಮೃತರಾವ್ ಅವರ ಬಳಿ 2 ಕೋಟಿ 65 ಲಕ್ಷದ 32 ಸಾವಿರ 84 ರೂ ಮೌಲ್ಯದ ಅಕ್ರಮ ಆಸ್ತಿಪಾಸ್ತಿ ಪತ್ತೆಯಾಗಿದೆ.

ಬಲೆಗೆ ಬಿದ್ದ ಭ್ರಷ್ಟರು
ಬಸನಗೌಡ ಪಾಟೀಲ್: ಎಕ್ಸಿಕ್ಯುಟಿವ್ ಇಂಜಿನಿಯರ್, ಕೃಷ್ಣಾ ಭಾಗ್ಯ ಜಲನಿಗಮ ಲಿಮಿಟೆಡ್ ನಾರಾಯಣಪುರ ಬಲದಂಡೆ ಕಾಲುವೆ ವಿಭಾಗ ನಂ.4, ರಾಯಚೂರು
ಶಂಕರ್ ಎಂ. – ಸಹಾಯಕ‌ ಪ್ರಾಧ್ಯಾಪಕ, ಕೃಷಿ ಎಂಜಿನಿಯರಿಂಗ್ – ತೋಟಗಾರಿಕೆ ವಿಶ್ವವಿದ್ಯಾಲಯ, ಚಿತ್ರದುರ್ಗ
ದುಗ್ಗಪ್ಪ ಬಿ.ಹೆಚ್. – ವಲಯ ಅರಣ್ಯ ಅಧಿಕಾರಿ, ಜಲಾನಯನ ಅಭಿವೃದ್ಧಿ ಇಲಾಖೆ, ಚಿತ್ರದುರ್ಗ
ನರೇಂದ್ರ ಕುಮಾರ್ – ಎಕ್ಸಿಕ್ಯುಟಿವ್ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಬೆಂಗಳೂರು
ಪ್ರವೀಣ್ ಬಿ.ಶ್ರೀಹರಿ – ಸೂಪರಿಂಡೆಂಟ್ ಇಂಜಿನಿಯರ್, ಕರ್ನಾಟಕ ಗ್ರಾಮೀಣಾಭಿವೃದ್ಧಿ ಇಲಾಖೆ, ಬೆಂಗಳೂರು
ಪುಷ್ಪ ಡಿ.ಆರ್. – ಉಪ ನಿರ್ದೇಶಕಿ (ಆಡಳಿತ), ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಬೆಂಗಳೂರು
ಮಧುಸೂಧನ್ ಎನ್. – ಸಹಾಯಕ ಇಂಜಿನಿಯರ್, ಸಣ್ಣ ನೀರಾವರಿ ಇಲಾಖೆ, ತುಮಕೂರು
ತಿಮ್ಮೇಗೌಡ – ಪಿಡಿಒ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ – ಬೆಂಗಳೂರು ದಕ್ಷಿಣ
ಕಿರಣ್ ಅಂಗಡಿ – ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ
ಅರಣ್ಯ ಇಲಾಖೆ ಸಂಶೋಧನಾ ಕೇಂದ್ರ ಅಂಕೋಲ, ಶಿವಮೊಗ್ಗ
ಅಮೃತ್ ರಾವ್ – ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಜೆಸ್ಕಾಂ, ಕಲಬುರಗಿ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments