Wednesday, July 8, 2026
Google search engine
Homeವಿದೇಶಇರಾನ್‌ 80 ನೆಲೆಗಳ ಮೇಲೆ ಅಮೆರಿಕ ದಾಳಿ: ತೈಲ ಮಾರಾಟ ಅನುಮತಿ ರದ್ದು

ಇರಾನ್‌ 80 ನೆಲೆಗಳ ಮೇಲೆ ಅಮೆರಿಕ ದಾಳಿ: ತೈಲ ಮಾರಾಟ ಅನುಮತಿ ರದ್ದು

ಹರ್ಮುಜ್‌ ಜಲಸಂಧಿಯ ಹಡುಗುಗಳ ಮೇಲೆ ದಾಳಿ ನಡೆಸಿದ್ದ ಅಮೆರಿಕ ಇದೀಗ ಇರಾನ್‌ ನ 80 ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಇರಾನ್‌ ಕೂಡ ಅರಬ್‌ ದೇಶಗಳ ಮೇಲೆ ಕ್ಷಿಪಣಿ ದಾಳಿ ನಡೆಸಿ ಪ್ರತ್ಯುತ್ತರ ನೀಡಿದೆ. ಈ ಮೂಲಕ ಮಧ್ಯಪ್ರಾಚ್ಯದಲ್ಲಿ ಮತ್ತೊಮ್ಮೆ ಬಿಕ್ಕಟ್ಟು ಉಲ್ಬಣಗೊಂಡಿದೆ.

ಇರಾನ್‌ ಸುಪ್ರೀಂ ಅಯೊತುಲ್ಲಾ ಖಮೇನಿ ಅಂತ್ಯಕ್ರಿಯೆ ಬೆನ್ನಲ್ಲೇ ಅಮೆರಿಕ ಭೀಕರ ದಾಳಿ ನಡೆಸಿದ್ದು, ಇರಾನ್‌ ನ ಕರಾವಳಿ ತೀರ ಹಾಗೂ ರಕ್ಷಣಾ ವ್ಯವಸ್ಥೆಗಳನ್ನು ಕೇಂದ್ರೀಕರಿಸಿ ದಾಳಿ ನಡೆಸಲಾಗಿದೆ ಎಂದು ಅಮೆರಿಕ ಹೇಳಿಕೊಂಡಿದೆ.

ಹರ್ಮುಜ್‌ ಜಲಸಂಧಿಯಲ್ಲಿ ಇರಾನ್‌ ನ 60ಕ್ಕೂ ಅಧಿಕ ಐಆರ್‌ ಜಿಸಿ ದೋಣಿಗಳು ಕಾವಲಿಗೆ ನಿಂತಿವೆ. ಈ ಹಿನ್ನೆಲೆಯಲ್ಲಿ ಹರ್ಮುಜ್‌ ಮೇಲೆ ಹಿಡಿತ ಸಾಧಿಸಲು ಅಮೆರಿಕ ಭೀಕರ ದಾಳಿ ನಡೆಸಿದೆ.

ಹರ್ಮುಜ್‌ ಜಲಸಂಧಿಯಲ್ಲಿ ಸಾಗುವ ಅಂತಾರಾಷ್ಟ್ರೀಯ ಹಡಗುಗಳ ಮೇಲೆ ಇರಾನ್‌ ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಈ ದಾಳಿ ನಡೆದಿದೆ. ಕಳೆದ 10 ದಿನಗಳ ಹಿಂದೆ ನಡೆಸಿದ ದಾಳಿಗೆ ಹೋಲಿಸಿದರೆ ೪ರಿಂದ ೫ ಪಟ್ಟು ಭೀಕರ ದಾಳಿ ಮಾಡಲಾಗಿದೆ ಎಂದು ಅಮೆರಿಕದ ಸೇನೆ ಪ್ರಕಟಣೆಯಲ್ಲಿ ಹೇಳಿಕೊಂಡಿದೆ.

ಅಮೆರಿಕ ದಾಳಿಯ ಬಗ್ಗೆ ಇರಾನ್‌ ಯಾವುದೇ ಹೇಳಿಕೆ ನೀಡದೇ ಇದ್ದರೂ ದುಬೈ ಮತ್ತು ಅಬುಧಾಬಿ ಸೇರಿದಂತೆ ಅರಬ್‌ ರಾಷ್ಟ್ರಗಳಲ್ಲಿರುವ ಅಮೆರಿಕದ ನೆಲೆಗಳನ್ನು ಗುರಿಯಾಗಿಸಿ ಇರಾನ್‌ ಪ್ರತಿದಾಳಿ ನಡೆಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments