Monday, July 6, 2026
Google search engine
Homeವಿದೇಶಶ್ರೀಲಂಕಾ ಜೈಲಲ್ಲಿ ಹಿಂಸಾಚಾರಕ್ಕೆ 25 ಸಾವು, 100 ಮಂದಿಗೆ ಗಾಯ

ಶ್ರೀಲಂಕಾ ಜೈಲಲ್ಲಿ ಹಿಂಸಾಚಾರಕ್ಕೆ 25 ಸಾವು, 100 ಮಂದಿಗೆ ಗಾಯ

ಕೊಲಂಬೊ: ಶ್ರೀಲಂಕಾದ ಪಶ್ಚಿಮ ಕರಾವಳಿ ನಗರ ನೆಗೊಂಬೊದ ಜೈಲಿನಲ್ಲಿ ನಡೆದ ಹಿಂಸಾಚಾರದಲ್ಲಿ 25 ಮಂದಿ ಮೃತಪಟ್ಟಿದ್ದಾರೆ.

ಕಾರಾಗೃಹದೊಳಗೆ ಕೈದಿಗಳ ನಡುವೆ ಆರಂಭವಾದ ಹೊಡೆದಾಟ ಹಿಂಸಾಚಾರಕ್ಕೆ ತಿರುಗಿದ್ದು,100ಕ್ಕೂ ಅಧಿಕ ಕೈದಿಗಳು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಾಮರ್ಥ್ಯ ಮೀರಿ ಅಧಿಕ ಖೈದಿಗಳಿರುವ ಈ ಜೈಲಿನಲ್ಲಿ ಭಾನುವಾರ ಎರಡು ಪ್ರತಿಸ್ಪರ್ಧಿ ಗುಂಪುಗಳ ನಡುವೆ ಈ ಘರ್ಷಣೆ ಭುಗಿಲೆದ್ದಿದೆ. ಗಲಭೆ ನಡೆಸುತ್ತಿದ್ದ ಕೈದಿಗಳು ಜೈಲಿನ ಬಂದೂಕುಗಳನ್ನು ವಶಪಡಿಸಿಕೊಂಡಿದ್ದರಿಂದ ಸೋಮವಾರ ಮತ್ತೆ ಸಂಘರ್ಷ ಭುಗಿಲೆದ್ದಿತು.

ಜೈಲಿನಲ್ಲಿ ಮಾದಕ ದ್ರವ್ಯ ಕಳ್ಳ ಸಾಗಣೆಗೆ ಬೆಂಬಲಿಸುತ್ತಿದ್ದ ಗುಂಪು ಮತ್ತು ಇಂತಹ ಚಟುವಟಿಕೆಯನ್ನು ವಿರೋಧಿಸಿದ ಗುಂಪಿನ ನಡುವೆ ಈ ಹಿಂಸಾಚಾರ ಭುಗಿಲೆದ್ದಿದೆ ಎಂದು ಪ್ರಾಥಮಿಕ ಮಾಹಿತಿಯಲ್ಲಿ ತಿಳಿದು ಬಂದಿದೆ.

ಘಟನೆ ಬೆನ್ನಲ್ಲೇ ರಾಜ್ಯ ಪೊಲೀಸ್​ ವಿಶೇಷ ಟಾಸ್ಕ್​​ ಫೋರ್ಸ್​ (ಎಸ್​ಟಿಎಫ್​) ಬೆಂಬಲದೊಂದಿಗೆ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಗಲಭೆ ನಿಯಂತ್ರಣ ಘಟಕವನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಲಭೆ ನಿಯಂತ್ರಣಕ್ಕೆ ಕೆಲ ಕೈದಿಗಳ ಸ್ಥಳಾಂತರ: ಘರ್ಷಣೆ ಬೆನ್ನಲ್ಲೇ ಪರಿಸ್ಥಿತಿಯನ್ನು ಹತೋಟಿಗೆ ತರುವ ಮತ್ತು ಹಿಂಸಾಚಾರವನ್ನು ತಡೆಗಟ್ಟಲು ಮೂವರು ಕೈದಿಗಳನ್ನು ಪಲ್ಲನ್ಸೇನಾ ಜೈಲು ಶಿಬಿರಕ್ಕೆ ಸ್ಥಳಾಂತರಿಸಲಾಯಿತು. ಘಟನೆ ಬಗ್ಗೆ ವಿಶೇಷ ತನಿಖೆ ಆರಂಭಿಸಲಾಗಿದೆ ಎಂದು ಕಾರಾಗೃಹ ಇಲಾಖೆಯ ಮಾಧ್ಯಮ ವಕ್ತಾರ ಎ.ಸಿ. ಗಜನಾಯಕ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments