Thursday, July 9, 2026
Google search engine
Homeರಾಜ್ಯSC/ST ಮೀಸಲು ಪರಿಷ್ಕರಣೆ ಬಗ್ಗೆ ಪ್ರಧಾನಿ ಬಳಿ ಚರ್ಚೆ: ಹೆಚ್.ಡಿ.ದೇವೇಗೌಡ

SC/ST ಮೀಸಲು ಪರಿಷ್ಕರಣೆ ಬಗ್ಗೆ ಪ್ರಧಾನಿ ಬಳಿ ಚರ್ಚೆ: ಹೆಚ್.ಡಿ.ದೇವೇಗೌಡ

ಬೆಂಗಳೂರು: ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲು ಪ್ರಮಾಣ ಹೆಚ್ಚಳದ ಆದೇಶಕ್ಕೆ ಸಂವಿಧಾನದ 9 ನೇ ಪರಿಚ್ಛೇದಡಿ ರಕ್ಷಣೆ ಒದಗಿಸದೇ ಅನ್ಯಾಯವಾಗುತ್ತಿರುವ ಬಗ್ಗೆ ವಾಲ್ಮೀಕಿ ನಾಯಕ ಸಮಾಜದ ಸಮಾನ ಮನಸ್ಕರ ವೇದಿಕೆಯು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಭೇಟಿಯಾಗಿ ಅಹವಾಲು ಸಲ್ಲಿಸಿದರು.

ಈ ಹಿಂದೆ ವಾಲ್ಮೀಕಿ ನಾಯಕ ಸಮುದಾಯವು ಎಸ್‌.ಟಿ.ಗೆ ಸೇರ್ಪಡೆಯಾಗಲು ದೇವೇಗೌಡರು ನೀಡಿದ ಕೊಡುಗೆಯನ್ನು ಸ್ಮರಿಸಿದ ಮುಖಂಡರು,ಪ್ರಸ್ತುತ ಮೀಸಲು ಪರಿಷ್ಕರಣೆ ಎಂಬುದು ಕೇವಲ ವಂಚನೆಯಾಗಿದೆ ಹಿರಿಯರಾದ ತಾವು ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿ ಶೋಷಿತರ ಪರವಾಗಿ ಧ್ವನಿ ಎತ್ತಬೇಕು ಎಂದು ಮನವಿ ಮಾಡಿದರು.ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಹೆಚ್.ಡಿ.ದೇವೇಗೌಡರು ಈ ಕುರಿತು ಪ್ರಧಾನಿಯವರ ಬಳಿ ಚರ್ಚಿಸುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ವರದಾನೇಶ್ವರ ಸ್ವಾಮೀಜಿ,ನರಸಿಂಹಯ್ಯ,ಜಿ.ಟಿ.ಚಂದ್ರಶೇಖರಪ್ಪ,ಕೆ.ಎಸ್.ಮೃತ್ಯುಂಜಯ, ತುಳಸಿರಾಮ,ಗೋಪಾಲಕೃಷ್ಣ, ಬೆಳ್ಳೂರು ಅಂಜನಪ್ಪ,ಸಣ್ಣನಾಯಕ,ರಾಜಪ್ಪ,ಜಯಶ್ರೀ ಗುಡ್ಡಾಕಾಯು, ಪ್ರಕಾಶ, ವೇಣುಗೋಪಾಲ ನಾಯಕ ಮತ್ತಿತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments