Saturday, October 17, 2026
Google search engine
Homeದೇಶನಿತೀಶ್‌ ಕುಮಾರ್‌ ಗಾಗಿ 9 ಕೊಲೆ ಮಾಡಿದೆ: ಜೆಡಿಯು ಶಾಸಕ ಬಾಂಬ್‌

ನಿತೀಶ್‌ ಕುಮಾರ್‌ ಗಾಗಿ 9 ಕೊಲೆ ಮಾಡಿದೆ: ಜೆಡಿಯು ಶಾಸಕ ಬಾಂಬ್‌

ಬಿಹಾರ ಮಾಜಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರಿಗಾಗಿ ನಾನು 9 ಕೊಲೆಗಳನ್ನು ಮಾಡಿದ್ದೇನೆ ಎಂದು ಜೆಡಿಯು ಶಾಸಕ ಅನಂತ್‌ ಕುಮಾರ್‌ ಸಿಂಗ್‌ ಸಿಡಿಸಿದ ಬಾಂಬ್‌ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.

ಮುಂಬರುವ ವಿಧಾನಪರಿಷತ್ ಚುನಾವಣೆಯಲ್ಲಿ ತಮ್ಮ ಪ್ರತಿಸ್ಪರ್ಧಿ ನೀರಜ್‌ ಕುಮಾರ್‌ ಅವರನ್ನು ಜೆಡಿಯುನಿಂದ ಕಣಕ್ಕಿಳಿಸಿದ್ದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅನಂತ್‌ ಕುಮಾರ್‌ ಸಿಂಗ್‌, ನಾನು ಮತ್ತು ನಿತೀಶ್‌ ಕುಮಾರ್‌ ತುಂಬಾ ಹಳೆಯ ಕಾಲದ ಸ್ನೇಹಿತರು. ಅವರು ರಾಜಕೀಯದಲ್ಲಿ ಸಂಕಷ್ಟದಲ್ಲಿ ಇದ್ದಾಗಲೆಲ್ಲಾ ನಾನು ಅವರ ನೆರವಿಗೆ ಧಾವಿಸಿದ್ದೇನೆ ಎಂದರು.

ನಾನು ನಿತೀಶ್‌ ಕುಮಾರ್‌ ಅವರಿಗಾಗಿ 9 ಕೊಲೆ ಮಾಡಿಸಿದ್ದೇನೆ. 9 ಕೊಲೆಗಳ ಹಿಂದಿನ ಮಾಸ್ಟರ್‌ ಮೈಂಡ್‌ ನಾನೇ ಆಗಿದ್ದೆ. ಈ ಮೂಲಕ ಅವರ ರಾಜಕೀಯ ಸೇರಿದಂತೆ ಇತರೆ ವಿರೋಧಿಗಳನ್ನು ಮುಗಿಸಿದ್ದೇನೆ ಎಂದು ಅವರು ಹೇಳಿದ್ದಾರೆ.

ನಾನು ನಿತೀಶ್‌ ಕುಮಾರ್‌ ಅವರಿಗಾಗಿ ಏನೆಲ್ಲಾ ಮಾಡಿದೆ. ಆದರೆ ಅವರು ಈಗ ನನ್ನನ್ನೇ ದೂರ ಮಾಡಿ ನನ್ನ ವಿರೋಧಿಗಳ ಜೊತೆ ಕೈ ಜೋಡಿಸಿದ್ದಾರೆ. ನಿತೀಶ್‌ ಕುಮಾರ್‌ ತನ್ನ ರಾಜಕೀಯ ಲಾಭಕ್ಕಾಗಿ ಏನೂ ಬೇಕಾದರೂ ಮಾಡುತ್ತಾರೆ ಎಂದು ಗೊತ್ತಿತ್ತು. ಆದರೆ ಅವರ ಬೆನ್ನಿಗೆ ನಿಂತ ನನ್ನನ್ನೂ ಕಡೆಗಣಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಮೋತಿಹಾರಿ, ಮುಜಾಫರ್‌ ಬಾದ್‌, ವೈಶಾಲಿ ಮತ್ತು ಮೊಕಾಮಾ ವಲಯಗಳಲ್ಲಿ ಇದ್ದ ನಟೋರಿಯಸ್‌ ಗ್ಯಾಂಗ್‌ ಗಳು ಈಗ ನಿತೀಶ್‌ ಕುಮಾರ್‌ ಜೊತೆಗಿವೆ. ಆಗ ಈ ಗ್ಯಾಂಗ್‌ ಎಲ್ಲಾ ಎಲ್ಲಿದ್ದವು. ಎಲ್ಲವನ್ನು ಮೂಲೆಗುಂಪು ಮಾಡಿದ್ದೆ ಎಂದು ಅನಂತ್‌ ಕುಮಾರ್‌ ಸಿಂಗ್‌ ವಿವರಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments