Monday, 23 November 2026 — Kannadavahini
BREAKING NEWS
ದೇಶ ಬಿಸ್ಲೇರಿಯಲ್ಲಿ ಕ್ಯಾನ್ಸರ್ ಅಂಶಗಳು ಪತ್ತೆ: ಅಸುರಕ್ಷಿತ ಘೋಷಣೆ ಬೆಂಗಳೂರು ಬಿಡಿಭಾಗ ಖರೀದಿಯಲ್ಲಿ 4 ಕೋಟಿ ಹಗರಣ: 21 ಬಿಎಂಟಿಸಿ ಅಧಿಕಾರಿಗಳ ವಿರುದ್ಧ ಎಫ್ ಐಆರ್ ರಾಜ್ಯ ವಿಬಿಜಿ ರಾಮ್ ಜಿ ಕೆಲಸ 175 ದಿನಕ್ಕೆ ಹೆಚ್ಚಿಸಲು ಕೇಂದ್ರಕ್ಕೆ ಪತ್ರ: ಈಶ್ವರ ಖಂಡ್ರೆ ರಾಜ್ಯ ಕಾಡುಗೊಲ್ಲರನ್ನು ಎಸ್‌ಟಿ ಪಟ್ಟಿಗೆ ಹೊಸ ಕುಲಶಾಸ್ತ್ರೀಯ ಅಧ್ಯಯನ: ಸರ್ಕಾರ ನಿರ್ಧಾರ ದೇಶ ಮಣಿಪುರದಲ್ಲಿ ನಕಲಿ ಮದ್ಯ ಸೇವಿಸಿ 15 ಸಾವು: ತನಿಖೆಗೆ ಆದೇಶ ತಾಜಾ ಸುದ್ದಿ 2070ರ ವೇಳೆಗೆ ಹಿಂದೂ ಜನಸಂಖ್ಯೆ ಕುಸಿತ; ಮುಸ್ಲಿಮರ ಸಂಖ್ಯೆ ಜಿಗಿತ! ಕಾನೂನು ಧರ್ಮಸ್ಥಳ ಪ್ರಕರಣ ರದ್ದು ಕೋರಿ ಗಿರೀಶ್ ಮಟ್ಟಣ್ಣನವರ್ ಅರ್ಜಿ ವಜಾ ರಾಜ್ಯ ತಾಪಂ, ಜಿಪಂ ಕ್ಷೇತ್ರ ಮೀಸಲು ನಾಳೆ ಅಂತಿಮ ಅಧಿಸೂಚನೆ: ಸಚಿವ ಈಶ್ವರ ಖಂಡ್ರೆ ದೇಶ ಬಿಸ್ಲೇರಿಯಲ್ಲಿ ಕ್ಯಾನ್ಸರ್ ಅಂಶಗಳು ಪತ್ತೆ: ಅಸುರಕ್ಷಿತ ಘೋಷಣೆ ಬೆಂಗಳೂರು ಬಿಡಿಭಾಗ ಖರೀದಿಯಲ್ಲಿ 4 ಕೋಟಿ ಹಗರಣ: 21 ಬಿಎಂಟಿಸಿ ಅಧಿಕಾರಿಗಳ ವಿರುದ್ಧ ಎಫ್ ಐಆರ್ ರಾಜ್ಯ ವಿಬಿಜಿ ರಾಮ್ ಜಿ ಕೆಲಸ 175 ದಿನಕ್ಕೆ ಹೆಚ್ಚಿಸಲು ಕೇಂದ್ರಕ್ಕೆ ಪತ್ರ: ಈಶ್ವರ ಖಂಡ್ರೆ ರಾಜ್ಯ ಕಾಡುಗೊಲ್ಲರನ್ನು ಎಸ್‌ಟಿ ಪಟ್ಟಿಗೆ ಹೊಸ ಕುಲಶಾಸ್ತ್ರೀಯ ಅಧ್ಯಯನ: ಸರ್ಕಾರ ನಿರ್ಧಾರ ದೇಶ ಮಣಿಪುರದಲ್ಲಿ ನಕಲಿ ಮದ್ಯ ಸೇವಿಸಿ 15 ಸಾವು: ತನಿಖೆಗೆ ಆದೇಶ ತಾಜಾ ಸುದ್ದಿ 2070ರ ವೇಳೆಗೆ ಹಿಂದೂ ಜನಸಂಖ್ಯೆ ಕುಸಿತ; ಮುಸ್ಲಿಮರ ಸಂಖ್ಯೆ ಜಿಗಿತ! ಕಾನೂನು ಧರ್ಮಸ್ಥಳ ಪ್ರಕರಣ ರದ್ದು ಕೋರಿ ಗಿರೀಶ್ ಮಟ್ಟಣ್ಣನವರ್ ಅರ್ಜಿ ವಜಾ ರಾಜ್ಯ ತಾಪಂ, ಜಿಪಂ ಕ್ಷೇತ್ರ ಮೀಸಲು ನಾಳೆ ಅಂತಿಮ ಅಧಿಸೂಚನೆ: ಸಚಿವ ಈಶ್ವರ ಖಂಡ್ರೆ
ಬೆಂಗಳೂರು

ಬಿಡಿಭಾಗ ಖರೀದಿಯಲ್ಲಿ 4 ಕೋಟಿ ಹಗರಣ: 21 ಬಿಎಂಟಿಸಿ ಅಧಿಕಾರಿಗಳ ವಿರುದ್ಧ ಎಫ್ ಐಆರ್

Vahini
ವರದಿ: Vahini ಮುಖ್ಯ ಸಂಪಾದಕರು (Chief Editor)
4 ನಿಮಿಷ ಓದು 60 ವೀಕ್ಷಣೆಗಳು
bmtc
bmtc

ಬೆಂಗಳೂರು: ಬೆಂಗಳೂರು ಮಹಾನಗರ  ಸಾರಿಗೆ ಸಂಸ್ಥೆ (ಬಿಎಂಟಿಸಿ)ಯಲ್ಲಿ ಮತ್ತೊಂದು ಬೃಹತ್ ಭ್ರಷ್ಟಾಚಾರ ಪ್ರಕರಣ ಬೆಳಕಿಗೆ ಬಂದಿದೆ. ಬಸ್‌ಗಳಿಗೆ ಬಿಡಿಭಾಗಗಳನ್ನು ಪೂರೈಸಿದ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೋಟ್ಯಂತರ ರೂಪಾಯಿ ಹಣ ದುರುಪಯೋಗ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಬಿಎಂಟಿಸಿಯ 21 ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

2021ರಿಂದ 2026ರವರೆಗೆ ಐದು ಬಿಡಿಭಾಗ ಪೂರೈಕೆ ಕಂಪನಿಗಳ ಹೆಸರಿನಲ್ಲಿ ಒಟ್ಟು 2,820 ಬಿಡಿಭಾಗಗಳನ್ನು ಪೂರೈಸಿರುವುದಾಗಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಲಾಗಿದೆ. ಈ ಮೂಲಕ ಬಿಎಂಟಿಸಿಗೆ ಸುಮಾರು 3.97 ಕೋಟಿ ರೂಪಾ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಬಿಎಂಟಿಸಿ ಭದ್ರತಾ ವಿಭಾಗದ ಅಧಿಕಾರಿ ಪರಿಮಳ ನಾಯ್ಕ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಬಿಎಂಟಿಸಿಯ ಭದ್ರತಾ ಹಾಗೂ ಜಾಗೃತ ದಳದ ಅಧಿಕಾರಿಗಳು ನಡೆಸಿದ ಆಂತರಿಕ ತನಿಖೆಯಲ್ಲೂ 21 ಅಧಿಕಾರಿಗಳು ಮತ್ತು ಸಿಬ್ಬಂದಿಯ ಅಕ್ರಮದ ಬಗ್ಗೆ ಮಾಹಿತಿ ಬಹಿರಂಗವಾಗಿದೆ. ಆದರೂ ಆರೋಪಿತ ಅಧಿಕಾರಿಗಳ ವಿರುದ್ಧ ಈವರೆಗೆ ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಕೆಲವರು ಈಗಲೂ ಬಿಎಂಟಿಸಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ.

ದಾಖಲೆಗಳಲ್ಲಿ ಪೂರೈಕೆ:

ಮತ್ತೊಂದೆಡೆ, ಅಗತ್ಯ ಬಿಡಿಭಾಗಗಳ ಕೊರತೆಯಿಂದ ಬಿಎಂಟಿಸಿಯ ಬಸ್‌ಗಳು ರಸ್ತೆಯ ಮಧ್ಯೆಯೇ ಕೆಟ್ಟು ನಿಲ್ಲುತ್ತಿರುವ ಘಟನೆಗಳು ಮುಂದುವರಿದಿವೆ. ಆದರೆ, ಬಿಡಿಭಾಗಗಳು ಪೂರೈಕೆಯಾಗದಿದ್ದರೂ ಪೂರೈಕೆಯಾಗಿವೆ ಎಂದು ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ರೂಪಾಯಿ ಬಿಲ್‌ಗಳನ್ನು ಬಿಡುಗಡೆ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಪ್ರಕರಣದಲ್ಲಿ ಕೇಂದ್ರ ಉಗ್ರಾಣ, ಸಿಡಬ್ಲ್ಯುಎಸ್-1 ಕಾರ್ಯಾಗಾರ, ಶಾಂತಿನಗರ ಸೇರಿದಂತೆ ವಿವಿಧ ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಯ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಇವರಲ್ಲಿ ಸಹಾಯಕ ಉಗ್ರಾಣ ರಕ್ಷಕರು, ಉಗ್ರಾಣ ಅಧಿಕಾರಿಗಳು, ತಾಂತ್ರಿಕ ಸಿಬ್ಬಂದಿ, ವಿಭಾಗೀಯ ಯಾಂತ್ರಿಕ ಅಭಿಯಂತರರು ಹಾಗೂ ಭದ್ರತಾ ನಿರೀಕ್ಷಕರು ಸೇರಿದ್ದಾರೆ.

ಕೆಲವರು ರಾಜೀನಾಮೆ:

ಆರೋಪಿತರಲ್ಲಿ ಕೆಲವರು ಹಿಂದಿನ ಪ್ರಕರಣದಲ್ಲಿ ಅಮಾನತುಗೊಂಡಿದ್ದರೆ, ಕೆಲವರು ನಿವೃತ್ತರಾಗಿದ್ದಾರೆ. ಇನ್ನೂ ಕೆಲವರು ರಾಜೀನಾಮೆ ಸಲ್ಲಿಸಿದ್ದು, ಒಬ್ಬರು ಗೈರುಹಾಜರಾಗಿದ್ದಾರೆ ಎನ್ನಲಾಗಿದೆ. ಜಾನಕಿರಾಮ್ ಸೇರಿದಂತೆ ಜಿಎಸ್ ಅಂಡ್ ಕಂಪನಿ ಹಾಗೂ ಗಜಾನನ ಇಂಜಿನಿಯರಿಂಗ್ ವರ್ಕ್ಸ್‌ಗೆ ಸಂಬಂಧಿಸಿದವರ ಹೆಸರೂ ದೂರಿನಲ್ಲಿ ಉಲ್ಲೇಖವಾಗಿದೆ.

ಬಿಎಂಟಿಸಿಯಲ್ಲಿ ಬಿಡಿಭಾಗಗಳ ಖರೀದಿ ಮತ್ತು ಪೂರೈಕೆಯ ಹೆಸರಿನಲ್ಲಿ ನಡೆದಿರುವ ಈ ಅಕ್ರಮ ಪ್ರಕರಣ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದ್ದು, 21 ಮಂದಿ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಆಧರಿಸಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಆರೋಪಿಗಳ ಪಟ್ಟಿ ಹಾಗೂ ಅವರ ಹುದ್ದೆ ಮತ್ತು ಪ್ರಸ್ತುತ ಸೇವಾ ಸ್ಥಿತಿಯ ವಿವರಗಳು

1. ನಾಗರಾಜ್ (ಎ-1): ಸಹಾಯಕ ಉಗ್ರಾಣ ರಕ್ಷಕ (ಎಎಸ್ ಕೆ), ಕೇಂದ್ರ ಉಗ್ರಾಣ, ಸಿಡಬ್ಲ್ಯೂಎಸ್-1, ಕೆಂದ್ರೀಯ ಕಾರ್ಯಾಗಾರ-1, ಶಾಂತಿನಗರ. ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಅಮಾನತಿನಲ್ಲಿದ್ದಾರೆ.

2. ಎನ್. ಅಶೋಕ್ (ಎ-2): ಜೂನಿಯರ್ ಅಸಿಸ್ಟೆಂಟ್, ಕೇಂದ್ರ ಉಗ್ರಾಣ, ಸಿಡಬ್ಲ್ಯೂಎಸ್-1, ಕೆಂದ್ರೀಯ ಕಾರ್ಯಾಗಾರ-1, ಶಾಂತಿನಗರ. ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಅಮಾನತಿನಲ್ಲಿದ್ದಾರೆ.

3. ಶಿಲ್ಪಾ (ಎ-3): ಸಹಾಯಕ ಉಗ್ರಾಣ ರಕ್ಷಕಿ, ಕೇಂದ್ರ ಉಗ್ರಾಣ, ಸಿಡಬ್ಲ್ಯೂಎಸ್-1, ಕೆಂದ್ರೀಯ ಕಾರ್ಯಾಗಾರ-1, ಶಾಂತಿನಗರ. ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಅಮಾನತಿನಲ್ಲಿದ್ದಾರೆ.

4. ವಿಶ್ವನಾಥ್ ಎಲ್.ಡಿ. (ಎ-4): ಸಹಾಯಕ ಉಗ್ರಾಣ ರಕ್ಷಕ, ಕೇಂದ್ರ ಉಗ್ರಾಣ, ಜಿಡಬ್ಲ್ಯೂಎಸ್-1, ಕೆಂದ್ರೀಯ ಕಾರ್ಯಾಗಾರ-1, ಶಾಂತಿನಗರ.

5. ಆರ್.ಎಂ. ಬಂಟನೂರ್ಕರ್ (ಎ-5): ಸಹಾಯಕ ಉಗ್ರಾಣ ಅಧಿಕಾರಿ, ಕೇಂದ್ರ ಕಚೇರಿ, ಶಾಂತಿನಗರ.

6. ಮನ್ಮಥನ್ (ಎ-6): ಸಹಾಯಕ ಕಾರ್ಯನಿರ್ವಾಹಕ ಅಧೀಕ್ಷಕರು, ಕೇಂದ್ರ ಉಗ್ರಾಣ, ಸಿಡಬ್ಲ್ಯೂಎಸ್-1,, ಕೆಂದ್ರೀಯ ಕಾರ್ಯಾಗಾರ-1, ಶಾಂತಿನಗರ. ಪ್ರಸ್ತುತ ನಿವೃತ್ತರಾಗಿದ್ದಾರೆ.

7. ಎಂ.ಎಲ್. ಛಾಯಾ (ಎ-7): ಸಹಾಯಕ ಉಗ್ರಾಣ ಅಧೀಕ್ಷಕಿ, ಕೇಂದ್ರ ಉಗ್ರಾಣ, ಸಿಡಬ್ಲ್ಯೂಎಸ್-1,, ಕೆಂದ್ರೀಯ ಕಾರ್ಯಾಗಾರ-1, ಶಾಂತಿನಗರ. ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಅಮಾನತಿನಲ್ಲಿದ್ದಾರೆ.

8. ರೂಪಾ (ಎ-8): ಸಹಾಯಕ ಉಗ್ರಾಣ ರಕ್ಷಕಿ, ಕೇಂದ್ರ ಉಗ್ರಾಣ, ಸಿಡಬ್ಲ್ಯೂಎಸ್-1, ಕೆಂದ್ರೀಯ ಕಾರ್ಯಾಗಾರ-1, ಶಾಂತಿನಗರ.

9. ಅನಿತಾ ಜಿ.ಆರ್.: ಸಹಾಯಕ ಉಗ್ರಾಣ ರಕ್ಷಕಿ, ಕೇಂದ್ರ ಉಗ್ರಾಣ, ಸಿಡಬ್ಲ್ಯೂಎಸ್-1, ಕೆಂದ್ರೀಯ ಕಾರ್ಯಾಗಾರ-1, ಶಾಂತಿನಗರ.

10. ಎಂ.ಎಸ್. ಪ್ರಕಾಶ್ (ಡ-10): ಟೆಕ್ನಿಷಿಯನ್, ಕೇಂದ್ರ ಉಗ್ರಾಣ, ಜಿಡಬ್ಲ್ಯೂಎಸ್-1, ಕೆಂದ್ರೀಯ ಕಾರ್ಯಾಗಾರ-1, ಶಾಂತಿನಗರ.

11. ರಮೇಶ್ (ಎ-11): ಉಗ್ರಾಣ ಅಧಿಕಾರಿ, ಕೇಂದ್ರ ಉಗ್ರಾಣ, ಸಿಡಬ್ಲ್ಯೂಎಸ್-1,, ಕೆಂದ್ರೀಯ ಕಾರ್ಯಾಗಾರ-1, ಶಾಂತಿನಗರ. ಪ್ರಸ್ತುತ ನಿವೃತ್ತರಾಗಿದ್ದಾರೆ.

12. ವಿಶ್ವನಾಥ್ ಎನ್. (ಎ-12): ಸಹಾಯಕ ಉಗ್ರಾಣ ರಕ್ಷಕ, ಘಟಕ-33. ಪ್ರಸ್ತುತ ಗೈರುಹಾಜರಾಗಿದ್ದಾರೆ.

13. ಪ್ರೇಮ ವೀರಕ್ತಮಠ (ಎ-13): ಸಹಾಯಕ ಉಗ್ರಾಣ ರಕ್ಷಕ, ಕೇಂದ್ರ ಉಗ್ರಾಣ, ಸಿಡಬ್ಲ್ಯೂಎಸ್-1, ಕೆಂದ್ರೀಯ ಕಾರ್ಯಾಗಾರ-1, ಶಾಂತಿನಗರ.

14. ಹೇಮಂತ್ ಬಿ.ಆರ್. (ಎ-14): ಸಹಾಯಕ ಉಗ್ರಾಣ ರಕ್ಷಕ. ಪ್ರಸ್ತುತ ಕೆಎಸ್‌ಆರ್‌ಟಿಸಿ, ಬೆಂಗಳೂರು ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

15. ಮೋಹನ್ ಕುಮಾರ್ (ಎ-15): ಸಹಾಯಕ ಉಗ್ರಾಣ ರಕ್ಷಕ. ಪ್ರಸ್ತುತ ರಾಜೀನಾಮೆ ಸಲ್ಲಿಸಿದ್ದಾರೆ.

16. ಲೋಕೇಶ್ ಸಿ.ವಿ.: ಸಹಾಯಕ ಉಗ್ರಾಣ ಅಧೀಕ್ಷಕಿ, ಕೇಂದ್ರ ಉಗ್ರಾಣ, ಸಿಡಬ್ಲ್ಯೂಎಸ್-1, ಕೆಂದ್ರೀಯ ಕಾರ್ಯಾಗಾರ-1, ಶಾಂತಿನಗರ.

17. ಕೃಷ್ಣವೇಣಿ (ಎ-17): ಸಹಾಯಕ ಉಗ್ರಾಣ ಅಧಿಕಾರಿ, ಕೇಂದ್ರ ಉಗ್ರಾಣ, ಸಿಡಬ್ಲ್ಯೂಎಸ್-1,, ಕೆಂದ್ರೀಯ ಕಾರ್ಯಾಗಾರ-1, ಶಾಂತಿನಗರ.

18. ವಸಂತ ಬಾಯಿ (ಎ-18): ಉಗ್ರಾಣ ಅಧಿಕಾರಿ, ಕೇಂದ್ರ ಉಗ್ರಾಣ, ಸಿಡಬ್ಲ್ಯೂಎಸ್-1, ಕೆಂದ್ರೀಯ ಕಾರ್ಯಾಗಾರ-1, ಶಾಂತಿನಗರ.

19. ವಿದ್ಯಾ ವಿ. ರಾಯ್ಕರ್ (ಎ-19): ವಿಭಾಗೀಯ ಯಾಂತ್ರಿಕ ಅಭಿಯಂತರರು, ಸಿಡಬ್ಲ್ಯೂಎಸ್-1, ಕೆಂದ್ರೀಯ ಕಾರ್ಯಾಗಾರ-1, ಶಾಂತಿನಗರ.

20. ಜಗದೀಶ್ ಎಂ. (ಎ-20): ವಿಭಾಗೀಯ ಭದ್ರತಾ ನಿರೀಕ್ಷಕರು, ಸಿಡಬ್ಲ್ಯೂಎಸ್-1, ಕೆಂದ್ರೀಯ ಕಾರ್ಯಾಗಾರ-1, ಶಾಂತಿನಗರ.

21. ಜಾನಕಿ ರಾಮ್ ಎಂ.ಎಸ್.: ಗಜಾನನ ಇಂಜಿನಿಯರಿಂಗ್ ವರ್ಕ್ಸ್ ಮತ್ತು ಎಂ.ಎಸ್.ಜಿ.ಎಸ್. ಅಂಡ್ ಕಂಪನಿ.

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 8434 ಲೇಖನಗಳು

Vahini

Vahini ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment