Saturday, November 23, 2024
Google search engine
Homeಅಪರಾಧಮದುವೆಯಾಗಿ 50 ಮಂದಿಗೆ ವಂಚಿಸಿದ ಕಿಲಾಡಿ ಮಹಿಳೆ: ಈಕೆ ಬಲೆಗೆ ಬಿದ್ದಿದ್ದ ಡಿವೈಎಸ್ ಪಿ, ಎಸ್ಪಿ!

ಮದುವೆಯಾಗಿ 50 ಮಂದಿಗೆ ವಂಚಿಸಿದ ಕಿಲಾಡಿ ಮಹಿಳೆ: ಈಕೆ ಬಲೆಗೆ ಬಿದ್ದಿದ್ದ ಡಿವೈಎಸ್ ಪಿ, ಎಸ್ಪಿ!

ಹಣದಾಸೆಗೆ ಜನ ಏನೇನು ಮಾಡ್ತಾರೆ ಅನ್ನೋದು ಕೇಳಿದರೆ ಆಶ್ಚರ್ಯ ಆಗುತ್ತದೆ. ಇಲ್ಲೊಬ್ಬಳು ಹಣ ಮಾಡೋದಕ್ಕೆ ಮದುವೆ ಆಗುವುದನ್ನೇ ಉದ್ಯೋಗ ಮಾಡಿಕೊಂಡು ಸುಮಾರು 50 ಜನರಿಗೆ ವಂಚಿಸಿದ್ದಾಳೆ.

ಮದುವೆ ಆಗಿ ಕೆಲವು ದಿನ ಜೊತೆಗಿದ್ದು ನಂತರ ಮನೆಯಲ್ಲಿದ್ದ ಬಂಗಾರ, ಹಣ ಎಲ್ಲಾ ದೋಚಿಕೊಂಡು ಪರಾರಿ ಆಗುವುದು. ಅದು ಖರ್ಚಾಗುತ್ತಿದ್ದಂತೆ ಮತ್ತೊಬ್ಬನನ್ನು ಮದುವೆ ಆಗುವುದು. ಹೀಗೆ ಈಕೆ 50 ಜನರನ್ನು ಯಾಮಾರಿಸಿದ್ದಾಳೆ.

ಅಷ್ಟಕ್ಕೂ ಈ ಘಟನೆ ನಡೆದಿರುವುದು ತಮಿಳುನಾಡಿನ ತಿರುಪುರದಲ್ಲಿ. 50 ಜನರನ್ನು ವಂಚಿಸಿದ ನಂತರ 30 ವರ್ಷದ ಸಂಧ್ಯಾ ಪೊಲೀಸರ ಅತಿಥಿಯಾಗಿದ್ದಾಳೆ.

35 ವರ್ಷದ ಅವಿವಾಹಿತ ಯುವಕನೊಬ್ಬ ಆನ್‌ಲೈನ್‌ ಪ್ಲಾಟ್‌ಫಾರ್ಮ್‌ ʼ‌ದಿ ತಮಿಳು ವೇʼ ನಲ್ಲಿ ಪರಿಚಯವಾದ ಸಂಧ್ಯಾಳನ್ನು ಕೆಲ ಸಮಯದ ಹಿಂದೆ ಮದುವೆಯಾಗಿದ್ದ. ಮದುವೆಯಾದ ಕೆಲ ದಿನಗಳ ಬಳಿಕ ಆಕೆಯ ವರ್ತನೆಯಲ್ಲಿ ಬದಲಾವಣೆ ಕಂಡು ಅನುಮಾನಗೊಂಡಿದ್ದ.

ಸಂಧ್ಯಾಳ ಆಧಾರ್‌ ಕಾರ್ಡ್‌ ಪರಿಶೀಲಿಸಿದಾಗ ಅದರಲ್ಲಿ ಮದುವೆ ಈ ಹಿಂದೆಯೇ ಮದುವೆ ಆಗಿದ್ದು, ಪತಿಯ ಹೆಸರು ಬೇರೆಯೇ ಇರುವುದು ಕಂಡು ಅಚ್ಚರಿಗೆ ಒಳಗಾದ. ನಂತರ ಸ್ಥಳೀಯ ತಾರಾಪುರಂ ಪೊಲೀಸ್ ಠಾಣೆಗೆ ದೂರು ನೀಡಿದಾಗ ಅಸಲಿ ಸತ್ಯ ಹೊರಬಿದ್ದಿದೆ.

ವಿಚಾರಣೆ ವೇಳೆ ಸಂಧ್ಯಾ ನನಗೆ 10 ವರ್ಷದ ಹಿಂದೆಯೇ ಮದುವೆ ಆಗಿದ್ದು, ಒಂದು ಮಗು ಕೂಡ ಇದೆ ಎಂದು ತಿಳಿಸಿದ್ದಾಳೆ.

ಮೊದಲ ಪತಿಯಿಂದ ದೂರವಾದ ನಂತರ ಹಣಕ್ಕಾಗಿ ಈ ಪ್ಲಾನ್ ಮಾಡಿದ್ದು, ಅವಿವಾಹಿತ ಯುವಕರನ್ನೇ ಟಾರ್ಗೆಟ್ ಮಾಡಿಕೊಂಡಿದ್ದ ಈಕೆ ಮದುವೆ ಆಗಿ ಕೆಲವು ದಿನಗಳ ನಂತರ ಅವರ ಮನೆಯಲ್ಲಿದ್ದ ಬೆಲೆ ಬಾಳುವ ವಸ್ತು ಹಾಗೂ ಹಣ ದೋಚಿ ಪರಾರಿಯಾಗುತ್ತಿದ್ದಳು.

ಈಕೆಯ ಬಲೆಗೆ ಡಿವೈಎಸ್ಪಿ, ಎಸ್ಪಿ, ಉದ್ಯಮಿಗಳು ಸೇರಿದಂತೆ 50 ಜನರಿಗೆ ಬಿದ್ದಿದ್ದಾರೆ ಅಂದರೆ ಸಂಧ್ಯಾ ಯಾವ ಮಟ್ಟಿಗೆ ವಂಚನೆ ಮಾಡಿದ್ದಾಳೆ ಎಂಬುದನ್ನು ಊಹಿಸಬಹುದು. ಇಷ್ಟೆಲ್ಲಾ ಮಾಡಿದರೂ ಆಕೆ ಈಗ ಕಂಬಿ ಎಣಿಸುವಂತಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments