Friday, November 22, 2024
Google search engine
Homeಅಪರಾಧಜಿಮ್ ಮಾಲೀಕನ ಮುಖಕ್ಕೆ 21 ಬಾರಿ ಇರಿದು ಭೀಕರ ಹತ್ಯೆ

ಜಿಮ್ ಮಾಲೀಕನ ಮುಖಕ್ಕೆ 21 ಬಾರಿ ಇರಿದು ಭೀಕರ ಹತ್ಯೆ

ಜಿಮ್ ಮಾಲೀಕನ ಮುಖದ ಮೇಲೆ 21 ಬಾರಿ ಇರಿದು ದುಷ್ಕರ್ಮಿಗಳ ಗುಂಪು ಭೀಕರವಾಗಿ ಹತ್ಯೆ ಮಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ.

ಭಜನಪುರ ಪ್ರದೇಶದ ನಿವಾಸಿ ಸುಮಿತ್ ಚೌಧರಿ ಅಲಿಯಾಸ್ ಪ್ರೇಮ್ ಕೊಲೆಯಾದ ಜಿಮ್ ಮಾಲೀಕ. ಈತ ಜಿಮ್ ಅಲ್ಲದೇ ಟೂರ್ ಅಂಡ್ ಟ್ರಾವೆಲ್ಸ್ ಸಂಸ್ಥೆಯನ್ನೂ ನಡೆಸುತ್ತಿದ್ದರು.

ಸುಮಿತ್ ಚೌಧರಿ ಮನೆಯ ಮುಂದೆ ಕುಳಿತಿದ್ದಾಗ ಮೂರರಿಂದ ನಾಲ್ಕು ಜನರಿದ್ದ ಗುಂಪಿನ ಜೊತೆ ಜಗಳ ಆಗಿದೆ. ಗುಂಪು ಸುಮಿತ್ ಮುಖ, ಎದೆ, ಕುತ್ತಿಗೆ, ಹೊಟ್ಟೆ ಮುಂತಾದ ಕಡೆ 21 ಬಾರಿ ಇರಿದು ಹತ್ಯೆ ಮಾಡಿದೆ. ಮುಖದ ಮೇಲೆ 21 ಇರಿತದಿಂದ ಆದ ಗುರುತುಗಳಿವೆ ಎಂದು ಡೆಪ್ಯುಟಿ ಪೊಲೀಸ್ ಕಮಿಷನರ್ ಜಾಯ್ ಟಿರ್ಕೆ ತಿಳಿಸಿದ್ದಾರೆ.

ಪೊಲೀಸರು ದುಷ್ಕರ್ಮಿಗಳನ್ನು ಪತ್ತೆಹಚ್ಚಲು ಬಲೆ ಬೀಸಿದ್ದು, ಸಿಸಿಟಿವಿ ದೃಶ್ಯಗಳನ್ನು ಕಲೆ ಹಾಕಿ ತನಿಖೆ ಆರಂಭಿಸಿದ್ದಾರೆ. ಚೌಧರಿಗೆ ಪತ್ನಿ ಹಾಗೂ ಒಂದು ಮಗು ಇದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments