ಕಾನೂನು ವಿದ್ಯಾರ್ಥಿಗಳ ಪಠ್ಯದಲ್ಲಿ ಮನುಸ್ಮೃತಿಯನ್ನು ಸೇರ್ಪಡೆಗೊಳಿಸುವ ಪ್ರಸ್ತಾಪವನ್ನು ದೆಹಲಿಯ ವಿಶ್ವ ವಿದ್ಯಾಲಯ ಮುಂದಿಟ್ಟಿದ್ದು, ಅಧ‍್ಯಾಪಕದ ಅಕಾಡೆಮಿಕ್ ಕೌನ್ಸಿಲ್ ಅಧ್ಯಾಪಕರು ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಮೊದಲ ಮತ್ತು ಮೂರನೇ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಮನುಸ್ಮೃತಿ (ಮನು ಕಾನೂನು) ಪಾಠ ಬೋಧಿಸುವ ಪ್ರಸ್ತಾಪವನ್ನು ಮುಂದಿಡಲಾಗಿದ್ದು, ದೆಹಲಿ ವಿಶ್ವವಿದ್ಯಾಲಯದ ಅನುಮತಿಗಾಗಿ ಕಾನೂನು ವಿಭಾಗ ಮನವಿ ಮಾಡಿದೆ.
ಎಲ್ ಎಲ್ ಬಿ ಪಠ್ಯದ 1 ಮತ್ತು 6ನೇ ಸಿಲೇಬಸ್ ನಲ್ಲಿ ಬೋಧನೆಗೆ ಶಿಫಾರಸು ಮಾಡಲಾಗಿದೆ. ಮನುಸ್ಮೃತಿಯ ಮನುಭಾಷ್ಯವನ್ನು ಬೋಧಿಸಲು ಅವಕಾಶ ನೀಡಬೇಕು ಎಂದು ಮನುಷ್ಮೃತಿಯ ವಿಶ್ಲೇಷಕ ಜಿಎನ್ ಶಾ ಪ್ರಸ್ತಾಪನೆ ಸಲ್ಲಿಸಿದ್ದಾರೆ.
ವಿಭಾಗದ ಮುಖ್ಯಸ್ಥ ಅಂಜು ವಾಲಿ ಟಿಕೊ ನೇತೃತ್ವದಲ್ಲಿ ಜೂನ್ 25ರಂದು ನಡೆದ ಅಧ್ಯಾಪಕರ ಸಭೆಯಲ್ಲಿ ಮನುಸ್ಮೃತಿಯನ್ನು ಪಠ್ಯದಲ್ಲಿ ಸೇರ್ಪಡೆಗೊಳಿಸಲು ಅವಿರೋಧ ತೀರ್ಮಾನ ಕೈಗೊಳ್ಳಲಾಗಿದೆ. ಆದರೆ ಎಡಪಂಥೀಯ ಬೆಂಬಲಿತ ಅಧ್ಯಾಪಕರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಸೋಷಿಯಲ್ ಡೆಮಾಕ್ರೆಟಿಕ್ ಟೀಚರ್ ಫ್ರಂಟ್ (ಎಸ್ ಡಿಟಿಎಫ್) ಕೌನ್ಸಿಲರ್ ಗೆ ಪತ್ರ ಬರೆದಿದ್ದು, ಮನುಸ್ಮೃತಿಯು ಮಹಿಳೆಯ ಮೂಲಭೂತ ಹಕ್ಕುಗಳನ್ನು ಕಸಿಯುತ್ತದೆ. ಇದು ಸಂವಿಧಾನ ವಿರೋಧಿಯಾಗಿದೆ. ಅಲ್ಲದೇ ಪ್ರಗತಿಪರ ಶಿಕ್ಷಣ ವ್ಯವಸ್ಥೆಗೆ ಇದು ವಿರುದ್ಧವಾಗಿದ್ದು, ವಿದ್ಯಾರ್ಥಿಗಳನ್ನು ಹಳೆಯ ಕಾಲಕ್ಕೆ ಕರೆದೊಯ್ಯುವ ಕೃತ್ಯ ಎಂದು ಆರೋಪಿಸಿದ್ದಾರೆ.
ಮನುಸ್ಮೃತಿಯ ಹಲವಾರು ವಿಭಾಗಗಳಲ್ಲಿ ಮಹಿಳೆಯರಿಗೆ ಸಮಾನತೆ ಮತ್ತು ಶೈಕ್ಷಣಿಕ ಹಕ್ಕು ವಿರೋಧಿಸುತ್ತದೆ. ಮನುಷ್ಮೃತಿಯ ಯಾವುದೇ ಭಾಗವನ್ನು ಪಠ್ಯವಾಗಿ ಸೇರಿಸಿದರೂ ಅದು ಸಂವಿಧಾನದ ವಿರೋಧಿ ಆಗಿದೆ ಎಂದು ಎಸ್ ಡಿಟಿಎಫ್ ಪತ್ರದಲ್ಲಿ ವಿವರಿಸಿದೆ.