ಫೇಸ್ ಬುಕ್, ವಾಟ್ಸಪ್ ಮತ್ತು ಇನ್ ಸ್ಟಾಗ್ರಾಂನಲ್ಲಿ ವೆರಿಫೈಡ್ ಚಂದದಾರರು (Verified Subscription) ಪಡೆಯಲು ಭಾರತೀಯರಿಗೆ ಶುಲ್ಕ ವಿಧಿಸಲು ಮೆಟಾ ನಿರ್ಧರಿಸಿದೆ.
ವೆರಿಫೈಡ್ ಬ್ಯಾಡ್ಜ್, ಎಂಗೇಜ್ಡ್ ಖಾತೆ ಬೆಂಬಲ, ಇಂಪ್ರೆಷನ್ ಭದ್ರತೆ ಸೇರಿದಂತೆ ವಿವಿಧ ಹೊಸ ಸೌಲಭ್ಯಗಳನ್ನ ಘೋಷಿಸಲಿರುವ ಮೆಟಾ ಕಂಪನಿ ಹಲವು ರೀತಿಯ ಶುಲ್ಕಗಳನ್ನು ವಿಧಿಸಲಿದೆ.
ಸಿಂಗಲ್ ಆಪ್ ಹೊಂದಿದವರಿಗೆ ಮಾಸಿಕ ಕನಿಷ್ಠ 639 ರೂ.ದಿಂದ ಗರಿಷ್ಠ 21,000 ರೂ.ವರೆಗೂ ವಿಧಿಸಲಿದ್ದು, ಎರಡು ಆಪ್ ಬಳಸಿದವರಿಗೆ ರಿಯಾಯಿತಿ ನೀಡಲಾಗುವುದು ಎಂದು ಕಂಪನಿ ಹೇಳಿದೆ.
ಸಾಮಾಜಿಕ ಜಾಲತಾಣದ ಮೆಟಾದ ಮೂರು ಆಪ್ ಗಳಲ್ಲಿ ಉದ್ದಿಮೆಗೆ ಬಳಸುವವರ ಲಾಭಕ್ಕಾಗಿ ಈ ಶುಲ್ಕ ವಿಧಿಸಲಿದ್ದು, ನಾಲ್ಕು ರೀತಿಯ ಯೋಜನೆಗಳನ್ನು ಪ್ರಕಟಿಸಲಿದೆ. ಆದರೆ ಸಾರ್ವಜನಿಕರ ಬಳಕೆಗೆ ಶುಲ್ಕ ವಿನಾಯಿತಿ ಮುಂದುವರಿಸಲು ಚಿಂತನೆ ನಡೆದಿದೆ ಎಂದು ಮೆಟಾ ಕಂಪನಿ ಸ್ಪಷ್ಟನೆ ನೀಡಿದೆ