Thursday, September 19, 2024
Google search engine
Homeಕ್ರೀಡೆರಶೀದ್ ಖಾನ್ ಒಂದೇ ಓವರ್ ನಲ್ಲಿ ಸತತ 5 ಸಿಕ್ಸರ್ ಬಾರಿಸಿದ ಕೀರನ್ ಪೊಲಾರ್ಡ್!

ರಶೀದ್ ಖಾನ್ ಒಂದೇ ಓವರ್ ನಲ್ಲಿ ಸತತ 5 ಸಿಕ್ಸರ್ ಬಾರಿಸಿದ ಕೀರನ್ ಪೊಲಾರ್ಡ್!

ವೆಸ್ಟ್ ಇಂಡೀಸ್ ಆಲ್ ರೌಂಡರ್ ಕೀರನ್ ಪೊಲಾರ್ಡ್ ಹಂರ್ಡೆಡ್ ಮೆನ್ಸ್ ಕಾಂಪಿಟೇಷನ್ 2024 ಕ್ರಿಕೆಟ್ ಪಂದ್ಯದಲ್ಲಿ ಆಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ ಅವರ ಒಂದೇ ಓವರ್ ನಲ್ಲಿ ಸತತ 5 ಸಿಕ್ಸರ್ ಬಾರಿಸಿ ಗಮನ ಸೆಳೆದಿದ್ದಾರೆ.

ಟ್ರೆಂಟ್ ರಾಕೆಟ್ ವಿರುದ್ಧದ ಪಂದ್ಯದಲ್ಲಿ 100 ಎಸೆತಗಳಲ್ಲಿ 127 ರನ್ ಗುರಿ ಬೆಂಬತ್ತಿದ ಸೌಥರ್ನ್ ಬ್ರೇವ್ ತಂಡ 78 ರನ್ ಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಈ ಹಂತದಲ್ಲಿ ಕ್ರೀಸ್ ಗೆ ಬಂದ ಕೀರನ್ ಪೊಲಾರ್ಡ್ ಪಂದ್ಯದ ದಿಕ್ಕನ್ನೇ ಬದಲಿಸಿದರು. ಆರಂಭದಲ್ಲಿ 14 ಎಸೆತಗಳಲ್ಲಿ 6 ರನ್ ಗಳಿಸಿದ್ದ ಪೊಲಾರ್ಡ್ ರನ್ ಗಳಿಸಲು ಪರದಾಡುತ್ತಿದ್ದರು. ಸ್ಪಿನ್ನರ್ ಗಳು ಮೇಲುಗೈ ಸಾಧಿಸಿದ್ದ ಈ ಪಂದ್ಯದಲ್ಲಿ ನಂತರ 5 ಎಸೆತಗಳಲ್ಲಿ ಸತತ 5 ಸಿಕ್ಸರ್ ಬಾರಿಸಿ ಫಲಿತಾಂಶವನ್ನೇ ಬದಲಿಸಿದರು. ರಶೀದ್ ಖಾನ್ 20 ಎಸೆತಗಳಲ್ಲಿ 40 ರನ್ ನೀಡಿ ದುಬಾರಿಯಾದರು.

ಹಂಡ್ರೆಡ್ ಮೆನ್ಸ್ ಟೂರ್ನಿ ಜನಪ್ರಿಯತೆ ಪಡೆಯಲು ವಿಫಲವಾಗಿದ್ದು, ಐಪಿಎಲ್ ಮತ್ತು ಇಂಡಿಯನ್ ವೇಲ್ಸ್ ಕ್ರಿಕೆಟ್ ಮಂಡಳಿಗಳು ಹಣ ಹೂಡಿಕೆ ಮಾಡಿ ಸ್ಟಾರ್ ನಟರನ್ನು ಆಹ್ವಾನಿಸುತ್ತಿದೆ. ಇಂತಹ ಸಿಡಿಲಬ್ಬರದ ಆಟ ಜನಪ್ರಿಯತೆ ತಂದುಕೊಡಬಹುದು ಎಂದು ನಿರೀಕ್ಷಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments