ಹೊಸದಾಗಿ ಶಿಬಿರಕ್ಕೆ ಸೇರಿಕೊಂಡ ಆನೆಗೆ ಅದ್ಧೂರಿಯಾಗಿ ಹಾಗೂ ಶಾಸ್ತ್ರೋಕ್ತವಾಗಿ ನಾಮಕಾರಣ ಶಾಸ್ತ್ರ ಮಾಡುವ ಮೂಲ ಮಲೆನಾಡು ಶಿವಮೊಗ್ಗದಲ್ಲಿ ಆನೆ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಗಿದೆ.
ಮೂಡಿಗೆರೆಯ ಆಲ್ದೂರ್ ರೇಂಜ್ ನಲ್ಲಿ ಸೆರೆ ಸಿಕ್ಕ ಕಾಡಾನೆಯನ್ನ ಪಳಗಿಸಿ ಬಿಡಾರಕ್ಕೆ ಸೇರಿಸಿಕೊಳ್ಳಲಾಗಿದ್ದು, ಸೋಮವಾರ ಶಾಸ್ತ್ರೋಕ್ತವಾಗಿ `ಅಶ್ವತ್ಥಾಮ’ ಎಂದು ನಾಮಕರಣ ಮಾಡಲಾಗಿದೆ.
ಅರ್ಜುನ, ಸಾಗರ, ಕೃಷ್ಣ, ಬಹದ್ದೂರು, ಅಭಿಮನ್ಯು ಮುಂತಾದ ಆನೆಗಳು ಸಾಲಾಗಿ ನಿಂತು ನಾಮಕರಣ ಶಾಸ್ತ್ರದಲ್ಲಿ ಭಾಗಿಯಾದವು.
6 ಆನೆಗಳಿಗೆ ಬಣ್ಣ ಬಳಿದು ದಸರಾ ಆನೆಗಳಂತೆ ಕಂಗೊಳಿಸುವಂತೆ ಮಾಡಲಾಗಿತ್ತು. ಪುರೋಹಿತ ಮಧು ಭಟ್ಟರ ಮಂತ್ರಘೋಷದ ನಡುವೆ ಅರಣ್ಯ ವನ್ಯ ಜೀವಿ ಇಲಾಖೆಯ ಡಿಎಫ್ಒ ಪ್ರಸನ್ನ ಕೃಷ್ಣ ಪಟಗಾರ್ ಆನೆಯ ಕಿವಿಯಲ್ಲಿ 3 ಬಾರಿ ಹೇಳಿ ನಾಮಕರಣ ಮಾಡಲಾಯಿತು.
2023 ನವೆಂಬರ್ 16 ರಂದು ಕಾಡಾನೆಯನ್ನ ಸಕ್ಕರೆಬೈಲಿನ ಕ್ರಾಲ್ ಗೆ ಕರೆತರಲಾಗಿತ್ತು. ಅದನ್ನ ಪಳಗಿಸಿ ನಾಮಕರಣ ಮಾಡಲೆಂದು ಇಂದು ಕ್ಯಾಂಪ್ ನಲ್ಲಿ ಕರೆತಲಾಗಿತ್ತು. ಪರಿಸರದ ಅಂಗವಾಗಿ ಆನೆದಿನಾಚರಣೆಯನ್ನ ಪ್ರತಿವರ್ಷ ಆಗಸ್ಟ್ 12 ರಂದು ಆನೆದಿನಾಚರಣೆಯನ್ನ ಆಚರಿಸಲಾಗಿದೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಿಎಫ್ ಒ ಕೃಷ್ಣ ಪಟಗಾರ್, ಇವತ್ತಿಗೆ ಆನೆ ದಿನಾಚರಣೆ 13ನೇ ವರ್ಷಕ್ಕೆ ಕಾಲಿಟ್ಟಿದೆ. 3 ಮರಿ ಆನೆ ಸೇರಿ 23 ಆನೆಗಳು ಸಕ್ರೆಬೈಲಿನಲ್ಲಿದೆ ಎಂದು ತಿಳಿಸಿದರು.
ಆನೆ ದಿಬಾಚರಣೆಯ ದಿನ ಶಾಲಾ ಮಕ್ಕಳ ಜಾಥಾ ಸಕ್ರೆಬೈಲಿನ ಆನೆ ಬಿಡಾರದಿಂದ ಗಾಜನೂರಿನ ಶಾಲೆಯ ವರೆಗೆ ಜಾಥಾ ನಡೆದಿದೆ. ಡಿಎಫ್ಒ ಜಾಥಾಕ್ಕೆ ಹಸಿರು ನಿಶಾನೆ ನೀಡಿದ್ದಾರೆ.