Sunday, November 24, 2024
Google search engine
Homeಅಪರಾಧಬೆಂಗಳೂರಲ್ಲಿ ಮಂಗಳಮುಖಿಯರ ಅಟ್ಟಹಾಸ: ಭಿಕ್ಷಾಟನೆಗಾಗಿ ಲಿಂಗ ಪರಿವರ್ತನೆ ಮಾಡಿ ಬ್ಲಾಕ್ ಮೇಲ್!

ಬೆಂಗಳೂರಲ್ಲಿ ಮಂಗಳಮುಖಿಯರ ಅಟ್ಟಹಾಸ: ಭಿಕ್ಷಾಟನೆಗಾಗಿ ಲಿಂಗ ಪರಿವರ್ತನೆ ಮಾಡಿ ಬ್ಲಾಕ್ ಮೇಲ್!

ಭಿಕ್ಷಾಟನೆ ಮಾಡಲು ಗಂಡನ್ನು ಹೆಣ್ಣಾಗಿ ಲಿಂಗಪರಿವರ್ತನೆ ಮಾಡಿ ಮಂಗಳಮುಖಿಯರು ಅಟ್ಟಹಾಸ ಮೆರೆದಿರುವ ಅಮಾನವೀಯ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.

ಬಲವಂತವಾಗಿ ಇಂಜೆಕ್ಷನ್ ನೀಡಿ ಗಂಡು ಹುಡುಗನ ಲಿಂಗ ಪರಿವರ್ತನೆ ಮಾಡಿದ ಮಂಗಳ ಮುಖಿಯರು, ಅಶ್ಲೀಲ ಪೋಟೊ ತೆಗೆದುಕೊಂಡು ಬ್ಲಾಕ್ ಮೇಲ್ ಮಾಡಿದ್ದೂ ಅಲ್ಲದೇ ಭಿಕ್ಷಾಟನೆ ಮಾಡುವಂತೆ ದೈಹಿಕ ಹಲ್ಲೆ, ಮಾನಸಿಕ ಹಿಂಸೆ ನೀಡುತ್ತಿರುವ ಬಗ್ಗೆ ದೂರು ದಾಖಲಾಗಿದೆ.

ಲಿಂಗ ಪರಿವರ್ತನೆ ಮಾಡಿಸಿದ ಐವರು ಮಂಗಳಮುಖಿಯರಾದ ಚಿತ್ರಾ, ಪ್ರೀತಿ, ಕಾಜಲ್, ಅಶ್ವಿನಿ, ಮುಗಿಲಿ ಎಂಬ ಐವರ ವಿರುದ್ಧ ದೂರು ದಾಖಲಾಗಿದೆ.

ಗಂಡಸಾಗಿ ಭಿಕ್ಷಾಟನೆ ಮಾಡಿದ್ರೆ ದಿನಕ್ಕೆ ಒಂದು ಸಾವಿರ ಸಂಪಾದನೆ ಮಾಡ್ತಾರೆ. ನೀನು ಹೆಣ್ಣಾಗಿ ಭಿಕ್ಷಾಟನೆ ಮಾಡಿದ್ರೆ ಇನ್ನೇಷ್ಟು ಮಾಡ್ತೀಯಾ ಗೊತ್ತಾ ಪುಸಲಾಯಿಸಿದ್ದಾರೆ. ಇದಕ್ಕೆ ಒಪ್ಪದೇ ಇದ್ದಾಗ ಬಲವಂತವಾಗಿ ಲಿಂಗಪರಿವರ್ತನೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ಕಸೀಪಾ ಎಂಬುವವರು ಪೊಲೀಸರಿಗೆ ದೂರು ನೀಡಿದ್ದಾರೆ.

ಫ್ರೇಜರ್ ಟೌನ್ ನಲ್ಲಿ ಈ ಘಟನೆ ನಡೆದಿದ್ದು ಪುಲಿಕೇಶಿನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments