Friday, November 22, 2024
Google search engine
Homeಕ್ರೀಡೆಕೊಹ್ಲಿ ನಂತರ ಟಿ-20ಗೆ ನಿವೃತ್ತಿ ಘೋಷಿಸಿದ ರೋಹಿತ್ ಶರ್ಮ!

ಕೊಹ್ಲಿ ನಂತರ ಟಿ-20ಗೆ ನಿವೃತ್ತಿ ಘೋಷಿಸಿದ ರೋಹಿತ್ ಶರ್ಮ!

ಭಾರತ ತಂಡ ಟಿ-20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಬ್ಯಾಟಿಂಗ್ ದಿಗ್ಗಜರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ.

ಸ್ಫೋಟಕ ಬ್ಯಾಟ್ಸ್ ಮನ್ ಗಳಾಗಿ ದಶಕಗಳ ಕಾಲ ಭಾರತ ತಂಡದ ಬ್ಯಾಟಿಂಗ್ ಆಧಾರಸ್ತಂಭವಾಗಿದ್ದ ವಿರಾಟ್ ಕೊಹ್ಲಿ ಭಾರತ ತಂಡ ವಿಶ್ವಕಪ್ ಗೆದ್ದ ಕೆಲವೇ ಕ್ಷಣಗಳಲ್ಲಿ ನಿವೃತ್ತಿ ಘೋಷಿಸಿದರೆ, ನಾಯಕ ರೋಹಿತ್ ಶರ್ಮ ಪತ್ರಿಕಾಗೋಷ್ಠಿಯಲ್ಲಿ ಅಧಿಕೃತವಾಗಿ ನಿವೃತ್ತಿ ಘೋಷಿಸಿದರು.

ಟಿ-20 ಕ್ರಿಕೆಟ್ ಗೆ ವಿದಾಯ ಘೋಷಿಸಿದ ರೋಹಿತ್ ಶರ್ಮ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ನಲ್ಲಿ ಮುಂದುವರಿಯುವುದಾಗಿ ಸ್ಪಷ್ಟಪಡಿಸಿದರು.

ಭಾರತ ಟಿ-20 ವಿಶ್ವಕಪ್ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ ರೋಹಿತ್ ಶರ್ಮ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದೂ ಅಲ್ಲದೇ ಬ್ಯಾಟಿಂಗ್ ನಲ್ಲೂ ಉತ್ತಮ ಕಾಣಿಕೆ ನೀಡಿದರು. ಇಡೀ ಟೂರ್ನಿಯಲ್ಲಿ ವಿಫಲರಾಗಿದ್ದ ವಿರಾಟ್ ಕೊಹ್ಲಿ ಫೈನಲ್ ನಲ್ಲಿ ಮಹತ್ವದ ಅರ್ಧಶತಕ ಬಾರಿಸಿ ತಮ್ಮ ಅನುಭವ ಧಾರೆ ಎರೆದು ಅಮೋಘವಾಗಿ ತಮ್ಮ ಟಿ-20 ಕ್ರಿಕೆಟ್ ಗೆ ಅಂತ್ಯ ಹಾಡಿದರು.

ಇದು ನನ್ನ ಕೊನೆಯ ಅಂತಾರಾಷ್ಟ್ರೀಯ ಟಿ-20 ಪಂದ್ಯವಾಗಿತ್ತು. ವಿದಾಯ ಹೇಳಲು ಇದಕ್ಕಿಂತ ಉತ್ತಮ ಅವಕಾಶ ಮತ್ತೊಂದಿಲ್ಲ. ಹೇಗಾದರೂ ಮಾಡಿ ಪ್ರಶಸ್ತಿ ಗೆಲ್ಲಲೇಬೇಕು ಎಂದು ಬಯಸಿದ್ದೆ. ಜೀವನದಲ್ಲಿ ಇದೊಂದು ಅಗತ್ಯವಿತ್ತು. ಇದು ಸಾಧ್ಯವಾಗಿದ್ದಕ್ಕೆ ತೃಪ್ತಿ ಇದೆ ಎಂದು ರೋಹಿತ್ ಶರ್ಮ ಹೇಳಿದರು.

ರೋಹಿತ್ ಶರ್ಮ ಪ್ರಸ್ತುತ ಟಿ-20 ಕ್ರಿಕೆಟ್ ನಲ್ಲಿ 159 ಪಂದ್ಯಗಳಲ್ಲಿ 4231 ರನ್ ಕಲೆ ಹಾಕಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಅಲ್ಲದೇ ಅತೀ ಹೆಚ್ಚು ಶತಕ ಸಿಡಿಸಿದ ದಾಖಲೆಯನ್ನೂ ಹೊಂದಿದ್ದಾರೆ. 2007ರ ಚೊಚ್ಚಲ ಟಿ-20 ವಿಶ್ವಕಪ್ ಮೂಲಕ ಟಿ-20 ಕ್ರಿಕೆಟ್ ಗೆ ಪಾದರ್ಪಣೆ ಮಾಡಿದ್ದ ರೋಹಿತ್ ಶರ್ಮ ಇದೀಗ ನಾಯಕನಾಗಿ ವಿಶ್ವಕಪ್ ಪ್ರಶಸ್ತಿಯೊಂದಿಗೆ ತಮ್ಮ ಟಿ-20 ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ.

ಇದಕ್ಕೂ ಮುನ್ನ ಪಂದ್ಯ ಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಿರಾಟ್ ಕೊಹ್ಲಿ, ಟಿ-20 ವಿಶ್ವಕಪ್ ನಂತರ ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್ ವಿದಾಯ ಹೇಳಲು ಬಯಸಿದ್ದೆ. ಆದರೆ ಈಗ ಆ ರಹಸ್ಯವಾಗಿ ಇಟ್ಟುಕೊಳ್ಳುವುದಿಲ್ಲ. ಇದು ನನ್ನ ಕೊನೆಯ ಟಿ-20 ಕ್ರಿಕೆಟ್ ಆಗಿದೆ ಎಂದರು.

ಇದು ನನ್ನ ಕೊನೆಯ ಟಿ-20 ಕ್ರಿಕೆಟ್ ಆಗಿದ್ದರಿಂದ ಒತ್ತಡದಲ್ಲಿದ್ದೆ. ಆದರೆ ಇಡೀ ಟೂರ್ನಿಯಲ್ಲಿ ರನ್ ಗಳಿಸದೇ ಇದ್ದಿದ್ದರಿಂದ ಮಾನಸಿಕವಾಗಿ ಹೆಚ್ಚು ಒತ್ತಡವಿತ್ತು. ಆದರೆ ಫೈನಲ್ ಪಂದ್ಯದಲ್ಲಿ ತಂಡದ ಗೆಲುವಿನಲ್ಲಿ ರನ್ ಗಳಿಸಲು ಸಾಧ್ಯವಾಗಿದ್ದಕ್ಕೆ ಸಂತೋಷವಿದೆ. ಉತ್ತುಂಗದೊಂದಿಗೆ ಟಿ-20 ಕ್ರಿಕೆಟ್ ಗೆ ವಿದಾಯ ಹೇಳಲು ಬಯಸುತ್ತಿದ್ದೇನೆ ಎಂದು ಕೊಹ್ಲಿ ವಿವರಿಸಿದರು.

ನನಗೆ ಇದು 6ನೇ ವಿಶ್ವಕಪ್ ಆಗಿದೆ. ಈ ಪ್ರಶಸ್ತಿ ಗೆಲ್ಲುವ ಶ್ರೇಯಸ್ಸು ರೋಹಿತ್ ಶರ್ಮಗೆ ಸಲ್ಲಬೇಕು. ಏಕೆಂದರೆ ಅವರು ನನಗಿಂತ ಹೆಚ್ಚು ಅರ್ಹರು ಎಂದು ಕೊಹ್ಲಿ ಹೇಳಿದರು.

ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್ ನಲ್ಲಿ ಹಲವು ದಾಖಲೆಗಳನ್ನು ಬರೆದಿರುವ ವಿರಾಟ್ ಕೊಹ್ಲಿ 125 ಪಂದ್ಯಗಳಲ್ಲಿ 1 ಶತಕ, 38 ಅರ್ಧಶತಕ ಸೇರಿದಂತೆ 48.69 ಸೇರಿದಂತೆ 117 4188 ರನ್ ಗಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments