Monday, June 15, 2026
Google search engine
Homeಕ್ರೀಡೆಆಸ್ಟ್ರೇಲಿಯನ್ ಓಪನ್: 5 ಸೆಟ್ ರೋಚಕ ಹಣಾಹಣಿಯಲ್ಲಿ ಗೆದ್ದ ನೊವಾಕ್ ಜೊಕೊವಿಕ್ ಫೈನಲ್ ಗೆ!

ಆಸ್ಟ್ರೇಲಿಯನ್ ಓಪನ್: 5 ಸೆಟ್ ರೋಚಕ ಹಣಾಹಣಿಯಲ್ಲಿ ಗೆದ್ದ ನೊವಾಕ್ ಜೊಕೊವಿಕ್ ಫೈನಲ್ ಗೆ!

ದಾಖಲೆ ಗ್ರ್ಯಾನ್ ಸ್ಲಾಮ್ ವಿಜೇತ ಸರ್ಬಿಯಾದ ನೊವಾಕ್ ಜೊಕೊವಿಕ್ ವಯಸ್ಸಿನ ಎಲ್ಲೆಗಳನ್ನು ಮೀರಿ ಹಾಲಿ ಚಾಂಪಿಯನ್ ಜೆನ್ನಿಕ್ ಸಿನ್ನರ್ ಅವರನ್ನು 5 ಸೆಟ್ ರೋಚಕ ಹಣಾಹಣಿಯಲ್ಲಿ ಸೋಲಿಸಿ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಫೈನಲ್ ಗೆ ಲಗ್ಗೆ ಹಾಕಿದ್ದಾರೆ.

11ನೇ ಬಾರಿ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಫೈನಲ್ ಲಗ್ಗೆ ಹಾಕುವ ಮೂಲಕ ನೊವಾಕ್ ಜೊಕೊವಿಕ್ ದಾಖಲೆಯ 25ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ.

ರಾಡ್ ಲೇವರ್ ಏರೆನಾದಲ್ಲಿ ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ಫೈನಲ್ ನಲ್ಲಿ ಮೆಲ್ಬೋರ್ನ್ ಮೈದಾನದಲ್ಲಿ ಸೋಲರಿಯದ ಸ್ಪರ್ಧಿಯಾಗಿದ್ದ 27 ವರ್ಷದ ಸಿನ್ನರ್ ಅವರನ್ನು 38 ವರ್ಷದ ನೊವಾಕ್ ಜೊಕೊವಿಕ್ 5 ಸೆಟ್ ಗಳ ಹೋರಾಟದಲ್ಲಿ ರೋಚಕ ಜಯ ಸಾಧಿಸಿದರು.

ಹಾಲಿ ಚಾಂಪಿಯನ್ ಹಾಗೂ ವಿಶ್ವದ 2ನೇ ಶ್ರೇಯಾಂಕಿತ ಆಟಗಾರನಾದ ಇಟಲಿಯ ಸಿನ್ನರ್ ಅವರನ್ನು 3-6, 6-3, 4-6, 6-4, 6-4 ಸೆಟ್ ಗಳಿಂದ ಸೋಲಿಸಿದ ನೊವಾಕ್ ಜೊಕೊವಿಕ್ ಪ್ರಶಸ್ತಿ ಸುತ್ತು ಪ್ರವೇಶಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments