Thursday, November 21, 2024
Google search engine
Homeತಾಜಾ ಸುದ್ದಿರಷ್ಯಾ ಮೇಲೆ ಕ್ಷಿಪಣಿ ದಾಳಿಗೆ ಅಮೆರಿಕ ಸಜ್ಜು; ಅಣುಬಾಂಬ್ ಸಿದ್ಧತೆ ಆರಂಭಿಸಿದ ರಷ್ಯಾ!

ರಷ್ಯಾ ಮೇಲೆ ಕ್ಷಿಪಣಿ ದಾಳಿಗೆ ಅಮೆರಿಕ ಸಜ್ಜು; ಅಣುಬಾಂಬ್ ಸಿದ್ಧತೆ ಆರಂಭಿಸಿದ ರಷ್ಯಾ!

ಉಕ್ರೇನ್ ಮೇಲಿನ ದಾಳಿಗೆ 1000 ದಿನಗಳು ಪೂರೈಸಿದ ಬೆನ್ನಲ್ಲೇ ಮೂರನೇ ಮಹಾಯುದ್ಧದ ಕಾರ್ಮೊಡ ಮತ್ತಷ್ಟು ದಟ್ಟವಾಗಿದ್ದು, ಜಗತ್ತಿನ ಎರಡು ಪ್ರಬಲ ರಾಷ್ಟ್ರಗಳ ನಡುವಿನ ಹಣಾಹಣಿಗೆ ವೇದಿಕೆ ಸಜ್ಜಾಗುತ್ತಿದೆ.

ಅಮೆರಿಕ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸುತ್ತಿರುವ ಜೋ ಬಿಡೈನ್ ಉಕ್ರೇನ್ ಗೆ ಬೆಂಬಲವಾಗಿ ರಷ್ಯಾ ಮೇಲೆ ದಾಳಿ ನಡೆಸಲು ಸೇನೆಗೆ ಅನುಮತಿ ನೀಡಿದ್ದಾರೆ. ಈ ಸುದ್ದಿ ಬೆನ್ನಲ್ಲೇ ರಷ್ಯಾ ಅಧ್ಯಕ್ಷ ಪುಟಿನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಮೇಲ್ದರ್ಜೆಗೇರಿಸಲು ಸೂಚಿಸುವ ಮೂಲಕ ಪ್ರತಿದಾಳಿಗೆ ಸಜ್ಜಾಗಿರುವ ಸುಳಿವು ನೀಡಿದ್ದಾರೆ.

ರಷ್ಯಾದ ಮಧ್ಯಭಾಗವನ್ನು ತಲುಪುವಂತಹ ದೂರಗಾಮಿ ಕ್ಷಿಪಣಿಗಳನ್ನು ಬಳಸಲು ಉಕ್ರೇನ್ ಗೆ ಅಮೆರಿಕ ಅನುಮತಿ ನೀಡಿದೆ. ಇದರಿಂದ ರಷ್ಯಾದ ಪ್ರಮುಖ ನಗರಗಳನ್ನು ಗುರಿಯಾಗಿಸಿ ದಾಳಿ ನಡೆಸುವ ಮೂಲಕ ದೊಡ್ಡ ಪ್ರಮಾಣದಲ್ಲಿ ಹಾನಿ ಮಾಡಲು ಸೂಚಿಸಿದೆ.

ಅಮೆರಿಕ ನಿರ್ಮಿತ ದೂರಗಾಮಿ ಕ್ಷಿಪಣಿಗಳನ್ನು ಬಳಸಲು ಬಿಡೈನ್ ಸರ್ಕಾರ ಇದೇ ಮೊದಲ ಬಾರಿಗೆ ಅನುಮತಿ ನೀಡಿದೆ. ಆದರೆ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜನವರಿಯಲ್ಲಿ ಅಧಿಕಾರ ಸ್ವೀಕರಿಸುವುದರಿಂದ ಅಲ್ಲಿಯವರೆಗೆ ಈ ಆದೇಶ ನಡೆಯಲಿದೆ.

ಇದರ ಬೆನ್ನಲ್ಲೇ ಪರಮಾಣು ಹೊಂದಿದ ರಾಷ್ಟ್ರಗಳು ಉಕ್ರೇನ್ ಗೆ ಬೆಂಬಲ ನೀಡಿದರೆ ನ್ಯೂಕ್ಲಿಯರ್ ರಹಿತ ದೇಶಗಳ ಮೇಲೆ ಪರಮಾಣು ದಾಳಿ ನಡೆಸಬಾರದು ಎಂದು ನಿಯಮವನ್ನು ಮುರಿಯಬೇಕಾಗುತ್ತದೆ. ಮತ್ತು ಇದಕ್ಕೆ ಪರಮಾಣು ಹೊಂದಿದ ರಾಷ್ಟ್ರಗಳು ಕೂಡ ಬೆಲೆ ತೆರಬೇಕಾಗುತ್ತದೆ ಎಂದು ಪುಟಿನ್ ಎಚ್ಚರಿಕೆ ನೀಡಿದ್ದಾರೆ.

ಉಕ್ರೇನ್ ಮೇಲೆ ಪರಮಾಣು ದಾಳಿ ನಡೆಸುವ ಆಲೋಚನೆ ನಮಗೆ ಇರಲಿಲ್ಲ. ಆದರೆ ಇದೀಗ ನಮ್ಮ ನಿರ್ಧಾರ ಪರಿಶೀಲಿಸುತ್ತಿದ್ದೇವೆ. ಪರಮಾಣು ದಾಳಿಯಿಂದ ಯುದ್ಧದ ಚಿತ್ರಣ ಬದಲಾಗಲಿದೆ ಎಂದು ಪುಟಿನ್ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments