Friday, May 15, 2026
Google search engine
Homeಕ್ರೀಡೆಪದಾರ್ಪಣಾ ಪಂದ್ಯದಲ್ಲೇ ಮಿಂಚಿದ ಅಶ್ವಿನಿ: ಕೆಕೆಆರ್ 116 ರನ್ ಗೆ ಆಲೌಟ್!

ಪದಾರ್ಪಣಾ ಪಂದ್ಯದಲ್ಲೇ ಮಿಂಚಿದ ಅಶ್ವಿನಿ: ಕೆಕೆಆರ್ 116 ರನ್ ಗೆ ಆಲೌಟ್!

ಯುವ ಸ್ಪಿನ್ನರ್ ಅಶ್ವಿನಿ ಕುಮಾರ್ ಪದಾರ್ಪಣೆ ಪಂದ್ಯದಲ್ಲಿ ನಡೆಸಿದ ಮಾರಕ ದಾಳಿ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ ಟಿ-20 ಪಂದ್ಯದಲ್ಲಿ 116 ರನ್ ಗಳ ಅಲ್ಪ ಮೊತ್ತಕ್ಕೆ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಆಲೌಟ್ ಮಾಡಿದೆ.

ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್ ತಂಡ 16.2 ಓವರ್ ಗಳಲ್ಲಿ 116 ರನ್ ಗಳ ಕಳಪೆ ಮೊತ್ತಕ್ಕೆ ಆಲೌಟಾಗಿದೆ.

ಹೊಡಿಬಡಿ ಆಟಕ್ಕೆ ಮುಂದಾದ ಕೆಕೆಆರ್ ಮುಂಬೈನ ಶಿಸ್ತಿನ ದಾಳಿಗೆ ತತ್ತರಿಸಿ ದೊಡ್ಡ ಮೊತ್ತ ಕಲೆಹಾಕುವಲ್ಲಿ ವಿಫಲವಾಯಿತು. ಆರಂಭದಿಂದಲೇ ಸತತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ಕೆಕೆಆರ್ ಬ್ಯಾಟ್ಸ್ ಮನ್ ಗಳು ಮುಗ್ಗರಿಸಿದರು.

ಮೊದಲ ಪಂದ್ಯದ ಮೊದಲ ಎಸೆತದಲ್ಲೇ ಕ್ಯಾಚ್ ಹಾಗೂ ಮೊದಲ ಎಸೆತದಲ್ಲೇ ವಿಕೆಟ್ ಹಾಗೂ ಮೊದಲ ಪಂದ್ಯದಲ್ಲೇ 4 ವಿಕೆಟ್ ಪಡೆಯುವ ಮೂಲಕ ಅಶ್ವಿನಿ ಮಿಂಚಿದರು. ದೀಪಕ್ ಚಾಹರ್ 2 ಹಾಗೂ ಉಳಿದ ಬೌಲರ್ ಗಳು ತಲಾ 1 ವಿಕೆಟ್ ಗಳಿಸಿದರು.

ಕೆಕೆಆರ್ ಪರ ರಘುವಂಶಿ 16 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 26 ರನ್ ಬಾರಿಸಿ ವೈಯಕ್ತಿಕ ಗರಿಷ್ಠ ಸಾಧನೆ ಮಾಡಿದರೆ, ರಮಣದೀಪ್ ಸಿಂಗ್ 12 ಎಸೆತಗಳಲ್ಲಿ 1 ಬೌಂಡರಿ ಮತ್ತು 2 ಸಿಕ್ಸರ್ ಸೇರಿದ 22 ರನ್ ಗಳಿಸಿದರು. ರಿಂಕು ಸಿಂಗ್ (17) ಮತ್ತು ನಾಯಕ ಅಜಿಂಕ್ಯ ರಹಾನೆ (11) ಎರಡಂಕಿಯ ಮೊತ್ತ ದಾಟಿದ್ದಕ್ಕೆ ಸಮಾಧಾನ ಹೊಂದಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments