ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಮತ್ತು ಜಿತೇಶ್ ಕುಮಾರ್ ಕೊನೆಯ ಹಂತದಲ್ಲಿ ಆಡಿದ ಸಿಡಿಲಬ್ಬರದ ಆಟದಿಂದ ಭಾರತ ತಂಡ 5 ವಿಕೆಟ್ ಗಳಿಂದ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿ 5 ಪಂದ್ಯಗಳ ಟಿ-20 ಸರಣಿಯಲ್ಲಿ 1-1ರಿಂದ ಸಮಬಲ ಸಾಧಿಸಿದೆ.
ಹೋಬರ್ಟ್ ನಲ್ಲಿ ಭಾನುವಾರ ನಡೆದ ಮೂರನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ ಟಿಮ್ ಡೇವಿಡ್ ಮತ್ತು ಮಾರ್ಕೂಸ್ ಸ್ಟೋನಿಸಿಸ್ ಅವರ ಅರ್ಧಶತಗಳ ನೆರವಿನಿಂದ 6 ವಿಕೆಟ್ ಗೆ 186 ರನ್ ಪೇರಿಸಿತು. ಕಠಿಣ ಗುರಿ ಬೆಂಬತ್ತಿದ ಭಾರತ ತಂಡ 9 ಎಸೆತಗಳು ಬಾಕಿ ಇರುವಂತೆಯೇ 5 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಭಾರತ ತಂಡದ ಪರ ಎಲ್ಲಾ ಆಟಗಾರರು ಸಾಧಾರಣ ಕೊಡುಗೆ ನೀಡಿದರೂ ನಿಯಮಿತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಹೋಗಿದ್ದರಿಂದ ಒತ್ತಡಕ್ಕೆ ಸಿಲುಕಿತ್ತು. ಅಭಿಷೇಕ್ ಶರ್ಮ (25), ಶುಭಮನ್ ಗಿಲ್ (15), ಸೂರ್ಯಕುಮಾರ್ ಯಾದವ್ (24), ತಿಲಕ್ ವರ್ಮಾ (29), ಅಕ್ಸರ್ ಪಟೇಲ್ (17) ನೆಲಕಚ್ಚಿ ಆಡುವ ಹಂತದಲ್ಲಿ ವಿಕೆಟ್ ಕೈಚೆಲ್ಲಿದರು.
ವಾಷಿಂಗ್ಟನ್ ಸುಂದರ್ 23 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್ ಒಳಗೊಂಡ ಅಜೇಯ 49 ರನ್ ಬಾರಿಸಿದರೆ, ಜಿತೇಶ್ ಕುಮಾರ್ 13 ಎಸೆತಗಳಲ್ಲಿ 3 ಬೌಂಡರಿ ಸಹಾಯದಿಂದ 22 ರನ್ ಬಾರಿಸಿದ್ದೂ ಅಲ್ಲದೇ ಮುರಿಯದ ೬ನೇ ವಿಕೆಟ್ ಗೆ ೪೩ ರನ್ ಜೊತೆಯಾಟದಿಂದ ತಂಡಕ್ಕೆ ಗೆಲುವು ತಂದುಕೊಟ್ಟರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ ಮಧ್ಯಮ ಕ್ರಮಾಂಕದಲ್ಲಿ ಟಿಮ್ ಡೇವಿಡ್ ಮತ್ತು ಮಾರ್ಕೂಸ್ ಸ್ಟೋನಿಸಿಸ್ ಅರ್ಧಶತಕ ಸಿಡಿಸಿ ತಂಡವನ್ನು ಆಧರಿಸಿದರು. ಒಂದು ಹಂತದಲ್ಲಿ ತಂಡ 14 ರನ್ ಗೆ 2 ವಿಕೆಟ್ ಕಳೆದಕೊಂಡು ಆರಂಭಿಕ ಆಘಾತಕ್ಕೆ ಒಳಗಾಯಿತು.
ಈ ಹಂತದಲ್ಲಿ ಟಿಮ್ ಡೇವಿಡ್ 47 ಎಸೆತಗಳಲ್ಲಿ 8 ಬೌಂಡರಿ ಮತ್ತು 5 ಸಿಕ್ಸರ್ 74 ರನ್ ಗಳಿಸಿದರು. ನಂತರ ಮತ್ತೆ ವಿಕೆಟ್ ಕಳೆದಕೊಂಡು 118 ರನ್ ೫ ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತ್ತು.
ಸ್ಟೋನಿಸಿಸ್ 39 ಎಸೆತಗಳಲ್ಲಿ 8 ಬೌಂಡರಿ ಮತ್ತು ೨ ಸಿಕ್ಸರ್ ಸೇರಿದಂತೆ 64 ರನ್ ಗಳಿಸಿದರ್. ಮ‍್ಯಥ್ಯೂ ಶಾರ್ಟ್ 15 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 26 ರನ್ ಬಾರಿಸಿದರು. ಭಾರತದ ಪರ ಅರ್ಷದೀಪ್ ಸಿಂಗ್ 3 ಮತ್ತು ವರುಣ್ ಚಕ್ರವರ್ತಿ 2 ವಿಕೆಟ್ ಗಳಿಸಿದರು.



