Thursday, 26 November 2026 — Kannadavahini
BREAKING NEWS
ಬೆಂಗಳೂರು ನಮ್ಮ ಮೆಟ್ರೋ ಗುಲಾಬಿ ಮಾರ್ಗದಲ್ಲಿ ಚಾಲಕ ರಹಿತ ರೈಲು ಸಂಚಾರ ಆರಂಭ ರಾಜ್ಯ ಮದುವೆಗೆ ಬಂದಿದ್ದ ಬೆಂಗಳೂರಿನ ನಾಲ್ವರು ಯುವಕರು ತುಂಗಾ ನದಿ ಪಾಲು ದೇಶ ದಿಢೀರ್ 3 ದಿನಗಳ ಸಂಸತ್ ಅಧಿವೇಶನ ಕರೆದ ಕೇಂದ್ರ ರಾಜ್ಯ ಮೈಸೂರಿನಲ್ಲಿ ನಾಳೆ ಬೃಹತ್ ಸಂವಿಧಾನ ಸಮಾವೇಶ: ಲಕ್ಷಕ್ಕೂ ಅಧಿಕ ಜನರು ಭಾಗಿ ವಿದೇಶ ಭಾರತದ ಮೇಲೆ ಅಮೆರಿಕದಿಂದ ಹೆಚ್ಚುವರಿ ಸುಂಕ ಹೇರಿಕೆ? ದೇಶ ಅಕ್ರಮ ಆಸ್ತಿ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ಕ್ಲೀನ್ ಚಿಟ್ ಅಪರಾಧ ಕೆಪಿಎಸ್ ಸಿ ಹಗರಣ: 15 ಅಭ್ಯರ್ಥಿಗಳ ಜೊತೆ ಡೀಲ್! ಕಾನೂನು ಬಸವ ಮಂಟಪ ಲೇಖಕ ರವಿ ಹಂಜ್‌ಗೆ ನಿರೀಕ್ಷಣಾ ಜಾಮೀನು ಬೆಂಗಳೂರು ನಮ್ಮ ಮೆಟ್ರೋ ಗುಲಾಬಿ ಮಾರ್ಗದಲ್ಲಿ ಚಾಲಕ ರಹಿತ ರೈಲು ಸಂಚಾರ ಆರಂಭ ರಾಜ್ಯ ಮದುವೆಗೆ ಬಂದಿದ್ದ ಬೆಂಗಳೂರಿನ ನಾಲ್ವರು ಯುವಕರು ತುಂಗಾ ನದಿ ಪಾಲು ದೇಶ ದಿಢೀರ್ 3 ದಿನಗಳ ಸಂಸತ್ ಅಧಿವೇಶನ ಕರೆದ ಕೇಂದ್ರ ರಾಜ್ಯ ಮೈಸೂರಿನಲ್ಲಿ ನಾಳೆ ಬೃಹತ್ ಸಂವಿಧಾನ ಸಮಾವೇಶ: ಲಕ್ಷಕ್ಕೂ ಅಧಿಕ ಜನರು ಭಾಗಿ ವಿದೇಶ ಭಾರತದ ಮೇಲೆ ಅಮೆರಿಕದಿಂದ ಹೆಚ್ಚುವರಿ ಸುಂಕ ಹೇರಿಕೆ? ದೇಶ ಅಕ್ರಮ ಆಸ್ತಿ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ಕ್ಲೀನ್ ಚಿಟ್ ಅಪರಾಧ ಕೆಪಿಎಸ್ ಸಿ ಹಗರಣ: 15 ಅಭ್ಯರ್ಥಿಗಳ ಜೊತೆ ಡೀಲ್! ಕಾನೂನು ಬಸವ ಮಂಟಪ ಲೇಖಕ ರವಿ ಹಂಜ್‌ಗೆ ನಿರೀಕ್ಷಣಾ ಜಾಮೀನು
ಬೆಂಗಳೂರು

ನಮ್ಮ ಮೆಟ್ರೋ ಗುಲಾಬಿ ಮಾರ್ಗದಲ್ಲಿ ಚಾಲಕ ರಹಿತ ರೈಲು ಸಂಚಾರ ಆರಂಭ

Vahini
ವರದಿ: Vahini ಮುಖ್ಯ ಸಂಪಾದಕರು (Chief Editor)
2 ನಿಮಿಷ ಓದು 9 ವೀಕ್ಷಣೆಗಳು
metro pink line

ಬೆಂಗಳೂರು: ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್ )ನಿರ್ಮಿಸಿರುವ ಮೊದಲ ಚಾಲಕರಹಿತ ಮೆಟ್ರೋ ರೈಲುಗಳು ನಗರದ ಪಿಂಕ್ ಲೈನ್‌ನಲ್ಲಿ ಪ್ರಯಾಣಿಕರ ಸೇವೆಗೆ ಅಧಿಕೃತವಾಗಿ ಪ್ರವೇಶಿಸಿವೆ. ಬಿಇಎಂಎಲ್ ನಿರ್ಮಿಸಿರುವ ಆರು ಬೋಗಿಗಳ ಐದು ರೈಲುಗಳ ಸಮೂಹವು ಪಿಂಕ್ ಲೈನ್‌ನ 7.5 ಕಿಲೋಮೀಟರ್ ಉದ್ದದ ಮೊದಲ ಹಂತದಲ್ಲಿ ಸಂಚಾರ ಆರಂಭಿಸಿದೆ.

ಈ ವಿಭಾಗದಲ್ಲಿ ಒಟ್ಟು ಆರು ನಿಲ್ದಾಣಗಳಿದ್ದು, ವಾರದ ದಿನಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿರುವ ಪೀಕ್ ಅವರ್‌ನಲ್ಲಿ ಪ್ರತಿ ಎಂಟು ನಿಮಿಷಕ್ಕೊಮ್ಮೆ ರೈಲು ಸಂಚರಿಸಲಿದೆ. ಇನ್ನು ನಾನ್‌ಪೀಕ್ ಅವರ್‌ನಲ್ಲಿ ಸರಿಸುಮಾರು 10 ನಿಮಿಷಗಳಿಗೊಮ್ಮೆ ಮೆಟ್ರೋ ಸೇವೆ ಲಭ್ಯವಾಗಲಿದೆ. ಈ ಮಾರ್ಗವನ್ನು ನವೆಂಬರ್ 14ರಂದು ಪ್ರಧಾನಿ ಉದ್ಘಾಟಿಸಿದ್ದರು.

ಪ್ರಸ್ತುತ ಈ ರೈಲುಗಳು ಅರೆ ಸ್ವಯಂಚಾಲಿತ ವ್ಯವಸ್ಥೆಯಾದ ಗೋಎ2  ಮಾದರಿಯಲ್ಲಿ ಕಾರ್ಯಾಚರಣೆ ನಡೆಸಲಿವೆ. ಆರಂಭಿಕ ಹಂತದಲ್ಲಿ ರೈಲಿನ ಕ್ಯಾಬಿನ್‌ನಲ್ಲಿ ಚಾಲಕರು ಇರಲಿದ್ದಾರೆ. ಅಗತ್ಯ ತಾಂತ್ರಿಕ ವ್ಯವಸ್ಥೆಗಳ ಸಂಯೋಜನೆ ಪೂರ್ಣಗೊಂಡು ಸಂಬಂಧಪಟ್ಟ ನಿಯಂತ್ರಕ ಸಂಸ್ಥೆಗಳ ಅನುಮೋದನೆ ದೊರೆತ ಬಳಿಕ ಸಂಪೂರ್ಣ ಚಾಲಕರಹಿತ ಗೋಎ4 ವ್ಯವಸ್ಥೆಯಲ್ಲಿ ರೈಲುಗಳು ಸಂಚರಿಸಲಿವೆ.

2027ರ ಮಧ್ಯಭಾಗದಲ್ಲಿ ಪಿಂಕ್ ಲೈನ್‌ನ ಎರಡನೇ ಹಂತವೂ ಪ್ರಯಾಣಿಕರ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆಯಿದೆ. ಆಗ ಈ ಮಾರ್ಗದಲ್ಲಿ ಒಟ್ಟು 23 ರೈಲುಗಳು ಸೇವೆ ಸಲ್ಲಿಸಲಿದ್ದು, ಬೆಂಗಳೂರಿನ ಉತ್ತರ ಮತ್ತು ದಕ್ಷಿಣ ಭಾಗಗಳ ನಡುವಿನ ಸಂಪರ್ಕ ಮತ್ತಷ್ಟು ಸುಗಮವಾಗಲಿದೆ.

2ಸಾವಿರ ಪ್ರಯಾಣಿಕರಿಗೆ ಅವಕಾಶ

ಪ್ರತಿಯೊಂದು ಆರು ಬೋಗಿಗಳ ರೈಲಿನಲ್ಲಿ ವಾಕ್-ಥ್ರೂ ಗ್ಯಾಂಗ್‌ವೇ ವ್ಯವಸ್ಥೆ ಕಲ್ಪಿಸಲಾಗಿದೆ. ಒಂದು ರೈಲಿನಲ್ಲಿ ಒಟ್ಟು 2,000 ಪ್ರಯಾಣಿಕರು ಪ್ರಯಾಣಿಸಬಹುದಾಗಿದ್ದು, 286 ಆಸನಗಳ ವ್ಯವಸ್ಥೆ ಇದೆ. ಗಂಟೆಗೆ ಗರಿಷ್ಠ 80 ಕಿಲೋಮೀಟರ್ ವೇಗದಲ್ಲಿ ಸಂಚರಿಸುವ ಸಾಮರ್ಥ್ಯವನ್ನು ಈ ರೈಲುಗಳು ಹೊಂದಿವೆ.

1,435 ಮಿಲಿಮೀಟರ್ ಸ್ಟ್ಯಾಂಡರ್ಡ್ ಗೇಜ್ ಹಳಿಗಳಿಗಾಗಿ ವಿನ್ಯಾಸಗೊಳಿಸಲಾಗಿರುವ ರೈಲುಗಳು 750 ವೋಲ್ಟ್ ಡಿಸಿ ಮೂರನೇ ರೈಲಿನ ಮೂಲಕ ವಿದ್ಯುತ್ ಪಡೆಯುತ್ತವೆ. ರೈಲಿನ ಬೋಗಿಗಳ ಹೊರಮೈಯನ್ನು ಆಸ್ಟೆನಿಟಿಕ್ ಸ್ಟೇನ್‌ಲೆಸ್ ಸ್ಟೀಲ್‌ನಿಂದ ನಿರ್ಮಿಸಲಾಗಿದೆ.

ಪ್ರತಿ ಬೋಗಿಯಲ್ಲಿ ಎರಡು ಛಾವಣಿ ಅಳವಡಿತ ಹವಾನಿಯಂತ್ರಣ ಘಟಕಗಳಿವೆ. ಪ್ರಯಾಣಿಕರ ಅನುಕೂಲಕ್ಕಾಗಿ ಯುಎಸ್‌ಬಿ ಚಾರ್ಜಿಂಗ್ ಸಾಕೆಟ್‌ಗಳು, ಸಿಸಿಟಿವಿ ಕ್ಯಾಮೆರಾಗಳು ಹಾಗೂ ಡಿಜಿಟಲ್ ಮಾಹಿತಿ ಪ್ರದರ್ಶನ ಫಲಕಗಳನ್ನು ಅಳವಡಿಸಲಾಗಿದೆ.

3,990 ಕೋಟಿ ಮೊತ್ತದ ಗುತ್ತಿಗೆ:

2023ರ ಆಗಸ್ಟ್‌ನಲ್ಲಿ ಬಿಇಎಂಎಲ್ ಸಂಸ್ಥೆಯು ಈ ಮಾದರಿಯ 53 ಮೆಟ್ರೋ ರೈಲುಗಳ ಪೂರೈಕೆಗೆ ಸಂಬಂಧಿಸಿದ ಗುತ್ತಿಗೆಯನ್ನು ಪಡೆದುಕೊಂಡಿತ್ತು. ಈ ಸ್ಪರ್ಧೆಯಲ್ಲಿ ಅಲ್ಸ್ಟೋಮ್, ಸಿಎಎಫ್ ಮತ್ತು ಟಿಟಗಢ ಸೇರಿದಂತೆ ಇತರ ಸಂಸ್ಥೆಗಳನ್ನು ಹಿಂದಿಕ್ಕಿ ಗುತ್ತಿಗೆ ತನ್ನದಾಗಿಸಿಕೊಂಡಿತ್ತು.

ನಂತರ 2025ರ ಮಾರ್ಚ್ ಮತ್ತು ಡಿಸೆಂಬರ್‌ನಲ್ಲಿ ಹೆಚ್ಚುವರಿಯಾಗಿ 13 ರೈಲುಗಳಿಗೆ ಬೇಡಿಕೆ ಸಲ್ಲಿಸಲಾಗಿತ್ತು. 15 ವರ್ಷಗಳ ನಿರ್ವಹಣಾ ಸೇವೆಯನ್ನೂ ಒಳಗೊಂಡಂತೆ ಒಟ್ಟು ಖರೀದಿ ಒಪ್ಪಂದದ ಮೊತ್ತ ₹3,990 ಕೋಟಿ ತಲುಪಿದೆ.

ಈ ರೈಲುಗಳ ಜೋಡಣೆ ಕಾರ್ಯವನ್ನು ಬೆಂಗಳೂರಿನಲ್ಲಿರುವ ಬಿಇಎಂಎಲ್ ಘಟಕದಲ್ಲೇ ಕೈಗೊಳ್ಳಲಾಗುತ್ತಿದೆ. ದೇಶೀಯವಾಗಿ ನಿರ್ಮಿಸಲಾದ ಆಧುನಿಕ ಮೆಟ್ರೋ ರೈಲುಗಳ ಸೇರ್ಪಡೆಯಿಂದ ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಮತ್ತಷ್ಟು ಬಲ ಸಿಗುವ ನಿರೀಕ್ಷೆಯಿದೆ.

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 8449 ಲೇಖನಗಳು

Vahini

Vahini ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment