ಬೆಂಗಳೂರಿನ ರಾಮೇಶ್ವರಂ ಕೆಫೆ ಮುಂಬೈನಲ್ಲಿ ನಡೆಯುತ್ತಿರುವ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ಕರ್ನಾಟಕದ ಖ್ಯಾತ ಬೆಣ್ಣೆ ದೋಸೆ ಮತ್ತು ತಟ್ಟೆ ಇಡ್ಲಿಯನ್ನು ಸಿದ್ಧಪಡಿಸಲಿದೆ.
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆ ಸಮಾರಂಭದ ವೇಳೆ ಆಯೋಜಿಸಲಾಗಿರುವ `ಹೈ-ಟೀ’ ಉಪಹಾರ ಕೂಟದಲ್ಲಿ ರಾಮೇಶ್ವರಂ ಕೆಫೆಯ ತಿಂಡಿಗಳು ಬಡಿಸಲಾಗುತ್ತದೆ.
ಉಪಹಾರ ಕೂಟದಲ್ಲಿ ರಾಮೇಶ್ವರಂ ಕೆಫೆ ಕರ್ನಾಟಕದಲ್ಲಿ ಮನೆಮಾತಾಗಿರುವ ಬೆಣ್ಣೆ ದೋಸೆ, ತಟ್ಟೆ ಇಡ್ಲಿ, ಬೋಂಡಾ ಸೂಪ್, ಹೆಸರುಕಾಳಿನ ದೋಸೆ, ನೀರುದೋಸೆ ಮತ್ತು ಫಿಲ್ಟರ್ ಕಾಫಿಯನ್ನು ಪೂರೈಸಲಿದೆ.
ಬೆಂಗಳೂರಿನ ಮೆಕ್ಸಿಕನ್ ರೆಸ್ಟೋರೆಂಟ್ ಚಿನಿಟಾ ಎಂಬ ಆಹಾರವನ್ನು ಅನಂತ್ ಅಂಬಾನಿ ಮದುವೆಗೆ ಪೂರೈಸಲಿದೆ. ಈಗಾಗಲೇ ಮದುವೆಗೂ ಮುನ್ನ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕೂಡ `ಚಿನಿಟಾ’ ಪೂರೈಸಲಾಗಿದ್ದು ಎಲ್ಲರ ಮೆಚ್ಚುಗೆ ಪಡೆದಿದೆ ಎಂದು ತಿಳಿದು ಬಂದಿದೆ.