Wednesday, September 30, 2026
Google search engine
Homeಮನರಂಜನೆನಾಳೆ ಬಿಗ್ ಬಾಸ್-12 ಆರಂಭ: ಕರ್ನಾಟಕದ ಪರಂಪರೆ ಸಾರುವ ಹೊಸ ಮನೆ!

ನಾಳೆ ಬಿಗ್ ಬಾಸ್-12 ಆರಂಭ: ಕರ್ನಾಟಕದ ಪರಂಪರೆ ಸಾರುವ ಹೊಸ ಮನೆ!

ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಆದ ಬಿಗ್ ಬಾಸ್ ಸೀಸನ್ 12 ಭಾನುವಾರ ಆರಂಭವಾಗಲಿದ್ದು, ಈ ಬಾರಿಯ ಬಿಗ್ ಬಾಸ್ ಮನೆ ವಿಶೇಷ ರೀತಿಯಲ್ಲಿ ಸಜ್ಜುಗೊಳಿಸಲಾಗಿದೆ.

ಕಲರ್ಸ್ ಕನ್ನಡ ಫೇಸ್ ಬುಕ್ ಪೇಜ್ ನಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ಹೊಸ ಮನೆಯ ಪರಿಚಯ ಮಾಡಿಕೊಡಲಾಗಿದ್ದು, ನಿರೂಪಕರಾಗಿ ಮುಂದುವರಿದಿರುವ ಕಿಚ್ಚ ಸುದೀಪ್ ಮನೆಯನ್ನು ಕಿರು ಪರಿಚಯ ಮಾಡಿಕೊಟ್ಟಿದ್ದಾರೆ.

bigg boss-12

ಮೈಸೂರು ಅರಮನೆಯಂತೆ ಸಿಂಗಾರಗೊಂಡಿರುವ ಬಿಗ್ ಬಾಸ್ ಮನೆಯಲ್ಲಿ ಕನ್ನಡ ನಾಡಿನ ಸಂಸ್ಕೃತಿ ಬಿಂಬಿಸುವ ರೀತಿ ನಿರ್ಮಿಸಲಾಗಿದೆ. ಹುಲಿ ವಿರುದ್ಧ ಹೋರಾಡುತ್ತಿರುವ ಹೊಯ್ಸಳ, ಬೇಲೂರು ಬಾಲೆ, ಕಣ್ಣರಳಿಸಿ ನೋಡುವ ಚಿತ್ರ ಹೀಗೆ ಭಿನ್ನವಾಗಿ ಮೂಡಿ ಬಂದಿದೆ.

bigg boss-12

ಮನೆಯ ವಿಶೇಷಗಳ ಬಗ್ಗೆ ಯಾವುದೇ ಪ್ರಸ್ತಾಪ ಮಾಡದೇ ಇದ್ದರೂ ಸುದೀಪ್ ಉದ್ಘಾಟನೆ ವೇಳೆ ಮನೆಯ ವಿಶೇಷಗಳನ್ನು ಬಹಿರಂಗಪಡಿಸಲಿದ್ದಾರೆ.

bigg boss-12

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments