Sunday, May 31, 2026
Google search engine
Homeದೇಶತುಟಿ ಸುಡಲಿದೆ ಬೀಡಿ, ಸಿಗರೇಟು, ಪಾನ್ ಮಸಾಲ: ಫೆ. 1ರಿಂದ ನೂತನ ಆರೋಗ್ಯ ಸೆಸ್ ಜಾರಿ!

ತುಟಿ ಸುಡಲಿದೆ ಬೀಡಿ, ಸಿಗರೇಟು, ಪಾನ್ ಮಸಾಲ: ಫೆ. 1ರಿಂದ ನೂತನ ಆರೋಗ್ಯ ಸೆಸ್ ಜಾರಿ!

ಕೇಂದ್ರ ಸರ್ಕಾರ ನೂತನ ತೆರಿಗೆ ಸೆಸ್ ಜಾರಿ ಕುರಿತು ಅಧಿಸೂಚನೆ ಹೊರಡಿಸಿದ್ದು, ಫೆಬ್ರವರಿ 1ರಿಂದ ಬೀಡಿ, ಸಿಗರೇಟು, ಪಾನ್ ಮಸಾಲ ಮುಂತಾದ ತಂಬಾಕು ಉತ್ಪನ್ನಗಳು ದುಬಾರಿ ಆಗಲಿವೆ.

ತಂಬಾಕು ಉತ್ಪನ್ನವಾದ ಪಾನ್ ಮಾಸಾಲ ಮುಂತಾದ ಉತ್ಪನ್ನಗಳ ಮೇಲೆ ಜಿಎಸ್ ಟಿ ಅಲ್ಲದೇ ಹೆಚ್ಚುವರಿ ಆರೋಗ್ಯ ಸೆಸ್ ಹೇರಿಕೆ ಆಗಲಿದೆ. ಹೊಸ ದರಗಳು ಫೆಬ್ರವರಿ 1ರಿಂದ ಜಾರಿಗೆ ಬರಲಿವೆ.

ಪ್ರಸ್ತುತ ತಂಬಾಕು ಉತ್ಪನ್ನಗಳಾದ ಬೀಡಿ, ಸಿಗರೇಟು, ಪಾನ್ ಮಸಾಲ, ಗುಟ್ಕಾಗಳ ಮೇಲೆ ಶೇ.40ರಷ್ಟು ಜಿಎಸ್ ಟಿ ವಿಧಿಸಲಾಗಿದೆ. ಆದರೆ ತಂಬಾಕಿನ ಇತರೆ ಉತ್ಪನ್ನಗಳ ಮೇಲೆ ಶೇ.18ರಷ್ಟು ತೆರಿಗೆ ವಿಧಿಸಲಾಗುತ್ತಿದೆ.

ಆರೋಗ್ಯ ಮತ್ತು ಸುರಕ್ಷತಾ ಸಮಿತಿ ಶಿಫಾರಸ್ಸಿನ ಮೇರೆಗೆ ತಂಬಾಕು ಉತ್ಪನ್ನಗಳ ಮೇಲೆ ಆರೋಗ್ಯ ಸೆಸ್ ವಿಧಿಸಿ ಕೇಂದ್ರ ಹಣಕಾಸು ಸಚಿವಾಲಯ ಬುಧವಾರ ಅಧಿಸೂಚನೆ ಹೊರಡಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments