ರಾಜಧಾನಿ ದೆಹಲಿಯಲ್ಲಿ 2000 ಕೋಟಿ ರೂ. ಮೌಲ್ಯದ 200 ಕೆಜಿ ಕೊಕೆನ್ ವಶಪಡಿಸಿಕೊಳ್ಳಲಾಗಿದೆ. ಇದರಿಂದ ಒಂದು ವಾರದಲ್ಲಿ ಪತ್ತೆಯಾದ ಡ್ರಗ್ಸ್ ಮೌಲ್ಯ 7000 ಕೋಟಿ ರೂ.ಗೆ ಏರಿಕೆಯಾಗಿದೆ.
ದೆಹಲಿಯ ರಮೇಶ್ ನಗರದ ವಿಶೇಷ ಕಾರ್ಯಪಡೆ ನಡೆಸಿದ ಕಾರ್ಯಚರಣೆಯಲ್ಲಿ ಡ್ರಗ್ ಸರಬರಾಜುದಾರನನ್ನು ಜಿಪಿಎಸ್ ಮೂಲಕ ಟ್ರೇಸ್ ಮಾಡುವ ಮೂಲಕ ಡ್ರಗ್ಸ್ ಪತ್ತೆ ಹಚ್ಚಲಾಗಿದೆ.
ಇತ್ತೀಚೆಗೆ 5600 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದ ಮಾದಕ ದ್ರವ್ಯ ನಿಗ್ರಹ ಪಡೆಯ ವಿಶೇಷ ಕಾರ್ಯಪಡೆ ಸಿಂಡಿಕೇಟ್ ಸದಸ್ಯರ ಬೆನ್ನು ಹತ್ತಿತ್ತು. ಡ್ರಗ್ಸ್ ಸಪ್ಲೆಯರ್ ಲಂಡನ್ ಗೆ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾನೆ. ಆದರೆ ಡ್ರಗ್ಸ್ ವಶಪಡಿಸಿಕೊಳ್ಳುವಲ್ಲಿ ಕಾರ್ಯಪಡೆ ಯಶಸ್ವಿಯಾಗಿದ್ದಾರೆ.