Sunday, September 8, 2024
Google search engine
Homeವಾಣಿಜ್ಯ1200ಕ್ಕೂ ಅಧಿಕ ನಗರಗಳಲ್ಲಿ ಅಧಿಕ ವೇಗದ ವೈಫೈ: ಏರ್ ಟೆಲ್ ಸಿಇಒ ಗೋಪಾಲ್ ವಿಠ್ಠಲ್

1200ಕ್ಕೂ ಅಧಿಕ ನಗರಗಳಲ್ಲಿ ಅಧಿಕ ವೇಗದ ವೈಫೈ: ಏರ್ ಟೆಲ್ ಸಿಇಒ ಗೋಪಾಲ್ ವಿಠ್ಠಲ್

ಏರ್ ಟೆಲ್ 1200ಕ್ಕೂ ಅಧಿಕ ನಗರಗಳಲ್ಲಿ ಅಧಿಕ ವೇಗದ ವೈಫೈ ಹೊಂದಿದ್ದೇವೆ. ಅಂದರೆ ಅಧಿಕ ವೇಗದ ಇಂಟರ್ನೆಟ್ ಅನ್ನು ಪಡೆಯಲು ಸಾಧ್ಯವಾಗದಿದ್ದವರು ಈಗ ಸುಲಭವಾಗಿ ಪಡೆದುಕೊಳ್ಳಬಹುದು ಎಂದು ಏರ್‌ಟೆಲ್ ಸಿಇಒ ಗೋಪಾಲ್ ವಿಠ್ಠಲ್ ಹೇಳಿದ್ದಾರೆ.

ವೈಫೈ ನಮ್ಮ ದಿನನಿತ್ಯದ ಜೀವನದ ಬಹುಮುಖ್ಯ ಅಂಗವಾಗಿ ಬಿಟ್ಟಿದೆ, ನಾವು ನಮ್ಮ ಮನೆಗಳಲ್ಲಿ ಹೇಗೆ ಕೆಲಸ ಮಾಡುತ್ತೇವೆ, ಹೇಗೆ ಕಲಿಯುತ್ತೇವೆ, ಹೇಗೆ ಮನೋರಂಜನೆ ಪಡೆಯುತ್ತೇವೆ ಎಲ್ಲಕ್ಕೂ ಇದು ಮೂಲಾಧಾರವಾಗಿಬಿಟ್ಟಿದೆ. ಈಗ ಸ್ಮಾರ್ಟ್ ಸಾಧನಗಳಿಗಾಗಿ, ಓದುವುದಕ್ಕಾಗಿ ಮತ್ತು ಕೆಲಸ ಮಾಡುವುದಕ್ಕಾಗಿ ನಮಗೆ ಅಧಿಕ ವೇಗದ ಇಂಟರ್ನೆಟ್ ಅಗತ್ಯವಿದೆ ಎಂದರು.

ಈ ಮೊದಲು ಏರ್‌ಟೆಲ್ ವೈಫೈ ಸೀಮಿತ ಲಭ್ಯತೆ ಇದ್ದದ್ದರಿಂದ, ಏರ್‌ಟೆಲ್ ಈ ಸಮಸ್ಯೆಯನ್ನು ಬಗೆಹರಿಸುವ ಕಡೆಗೆ ಕಾರ್ಯನಿರ್ವಹಿಸಲು ಪ್ರಯತ್ನಿಸಿತು. ಪರಿಣಾಮವಾಗಿ, ಈ ನಮ್ಮ ಸಾಧನೆಯನ್ನು ಗುರುತಿಸಲು, ನಾವು ನಿಮಗೆ ಅಧಿಕ ಮೌಲ್ಯವನ್ನು ಒದಗಿಸಲು
ಬಯಸುತ್ತಿದ್ದೇವೆ.

ನಿಮ್ಮ ವೈಫೈ ಪ್ಲಾನ್ ನಲ್ಲಿ ಟಿವಿ ಕಾರ್ಯಕ್ರಮಗಳು, ಚಲನಚಿತ್ರಗಳು ಮತ್ತು ವೆಬ್ ಸರಣಿಗಳ ಅತಿದೊಡ್ಡ ಆಯ್ಕೆಯನ್ನು ನಿಮಗಾಗಿ ನೀಡುತ್ತಿದ್ದೇವೆ. ನಿರ್ದಿಷ್ಟವಾಗಿ ಹೇಳುವುದಾದರೆ, ಏರ್‌ಟೆಲ್ ವೈಫೈ ಮೂಲಕ ಬಿತ್ತರಿಸಲಾಗುವ ಕಂಟೆಂಟ್ ನಿಮಗೆ 22ಕ್ಕೂ ಅಧಿಕ ಓಟಿಟಿಗಳು ಮತ್ತು 350ಕ್ಕೂ ಅಧಿಕ ಟಿವಿ ಚಾನೆಲ್ ಗಳನ್ನು ನೋಡುವ ಅವಕಾಶ ನೀಡುತ್ತದೆ ಎಂದು ಅವರು ಹೇಳಿದರು.

ನೀವು ಪ್ರತಿ ಸಲ ಮೊಬೈಲ್, ಕಾರ್ಯಕ್ರಮ ಅಥವಾ ವೈಫೈ- ಹೊಸ ಏರ್‌ಟೆಲ್ ಸೇವೆಯನ್ನು ಸೇರಿಸಲು ಬಯಸಿದಾಗ ನಾವು ನಿಮಗೆ ಬೇಸಿಕ್ ಪ್ಲಾನ್ ಮೇಲೆ ಹೆಚ್ಚುವರಿ ಮೌಲ್ಯವನ್ನು ಸೇರಿಸುತ್ತಿದ್ದೇವೆ ಎಂದು ಅವರು ನುಡಿದರು.

ಒಂದುವೇಳೆ ನೀವು ಹೊಸ ಏರ್‌ಟೆಲ್ ವೈಫೈ ಸಂಪರ್ಕವನ್ನು ತೆಗೆದುಕೊಳ್ಳಲು ಬಯಸಿದರೆ, ಇಲ್ಲಿ ಕ್ಲಿಕ್ ಮಾಡಿ. ಪ್ರತಿ ಬಾರಿಯಂತೆ, ನಾನು ನಿಮ್ಮ ಅಭಿಪ್ರಾಯಗಳನ್ನು ತಿಳಿಯಲು ಮತ್ತು ನಿಮ್ಮ ಅಗತ್ಯತೆಗಳಿಗೆ ಸೂಕ್ತವಾಗಿರಲು ನಮ್ಮ ಸೇವೆಗಳನ್ನು ಮತ್ತಷ್ಟು ಉತ್ತಮಗೊಳಿಸಲು ನಿಮ್ಮ ಸಲಹೆಗಳನ್ನು ಸಹ ಅಳವಡಿಸಲು ಬಯಸುತ್ತೇನೆ ಎಂದು ಗೋಪಾಲ್ ವಿಠ್ಠಲ್ ವಿವರಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments