ಬೆಂಗಳೂರು: ಏಷ್ಯಾದ ಅತಿದೊಡ್ಡ ಕೌಶಲ್ಯ ಮತ್ತು ಶಾಶ್ವತ ಕಲಿಕೆಯ ಪ್ರಮುಖ ಕಂಪನಿಗಳಲ್ಲೊಂದಾದ ಅಪ್‍ಗ್ರೇಡ್ 2024ನೇ ಹಣಕಾಸು ವರ್ಷದಲ್ಲಿ 1876 ಕೋಟಿ ರೂಪಾಯಿ ಆದಾಯ ಗಳಿಸಿದೆ. ಇಂಡ್-ಎಎಸ್ ಅಕೌಂಟಿಂಗ್ 1547 ಕೋಟಿ ರೂಪಾಯಿಗಳಲ್ಲಿ ಕೊನೆಗೊಂಡಿದ್ದು, ಭವಿಷ್ಯದ ವರ್ಷಕ್ಕೆ ಮುಂದಿನ ಗುರುತಿಸಲ್ಪಡದ, ಆದರೆ ಸಂಗ್ರಹವಾದ ಮುಂಗಡ ಆದಾಯ 507 ಕೋಟಿ ರೂಪಾಯಿಗಳಾಗಿವೆ.
ಇಂಡ್-ಎಎಸ್ ಇಬಿಐಟಿಡಿಎ ನಷ್ಟವು (ಒಂದು-ಬಾರಿಯ ವೆಚ್ಚಗಳನ್ನು ಹೊರತುಪಡಿಸಿ) ಹಿಂದಿನ ವರ್ಷ ಇದ್ದುದು 558 ಕೋಟಿ ರೂಪಾಯಿ ಇದ್ದುದು ರೂ. 202 ಕೋಟಿ ರೂಪಾಯಿ ಆಗಿದೆ. ಒಂದು ಬಾರಿಯ ವೆಚ್ಚೋತ್ತರ ಇಬಿಐಟಿಡಿಎ ನಷ್ಟ 285 ಕೋಟಿ ರೂಪಾಯಿಗಳಿಗೆ ಕುಸಿದಿದ್ದು, ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡ 50ರಷ್ಟು ಕಡಿಮೆ. ಇಂಡ್-ಎಎಸ್ ಋಣಾತ್ಮಕ ಪಿಎಟಿ 560 ಕೋಟಿ ರೂಪಾಯಿ ಆಗಿದೆ. ಹಿಂದಿನ ವರ್ಷ ಈ ನಷ್ಟ ಮೊತ್ತ 1142 ಕೋಟಿ ರೂಪಾಯಿ ಆಗಿತ್ತು ಎಂದು ಎಂದು ಅಪ್‍ಗ್ರೇಡ್ ಸಹ ಸಂಸ್ಥಾಕ ಮಯಾಂಕ್ ಕುಮಾರ್ ಹೇಳಿದ್ದಾರೆ.
560 ಕೋಟಿ ರೂಪಾಯಿ ಋಣಾತ್ಮಕ ಪಿಎಟಿಯಲ್ಲಿ 243 ಕೋಟಿ ರೂಪಾಯಿ ನಗದೇತರ ಅಂಶಗಳು ಸೇರಿವೆ. ಜನ, ಮಾರಾಟ ವ್ಯವಸ್ಥೆ ಮತ್ತು ವಿತರಣಾ ವೆಚ್ಚದ ಏರಿಕೆಯಲ್ಲಿ ಕನಿಷ್ಠ ಹೆಚ್ಚಳದಿಂದಾಗಿ ಆದಾಯ ಪ್ರಗತಿಯನ್ನು ಸಾಧಿಸಲಾಗಿದೆ. ಜತೆಜತೆಗೆ ಭವಿಷ್ಯದ ಪ್ರಗತಿಯ ಉದ್ದೇಶದಿಂದ ತಂತ್ರಜ್ಞಾನ ಹಾಗೂ ಉತ್ಪನ್ನ ಅಭಿವೃದ್ಧಿಯಲ್ಲಿ ಹೆಚ್ಚಿನ ಹೂಡಿಕೆಯನ್ನು ಮಾಡಲಾಗಿದೆ.
ಗ್ರಾಹಕ ವಿಭಾಗದೊಳಗೆ ಕಲಿಯುವವರ ದಾಖಲಾತಿಯಲ್ಲಿ ಸುಮಾರು ಶೇ 50ರಷ್ಟು ಹೆಚ್ಚಳದೊಂದಿಗೆ, ಕೌಶಲ್ಯ ಕ್ಷೇತ್ರದ ಪ್ರಮುಖ ಸಂಸ್ಥೆ ಸತತ ಎರಡನೇ ವರ್ಷಕ್ಕೆ 55,000 ವೃತ್ತಿಜೀವನದ ಪರಿವರ್ತನೆಗಳನ್ನು ಸಾಧಿಸಿದೆ, 23ನೇ ಹಣಕಾಸು ವರ್ಷದಲ್ಲಿ ಸ್ಥಾಪಿಸಲಾದ ಆವೇಗವನ್ನು ಮತ್ತಷ್ಟು ಹೆಚ್ಚಿಸಿದೆ. ಮಾರ್ಕೆಟಿಂಗ್, ಡೇಟಾ ಮತ್ತು ಟೆಕ್ ಡೊಮೇನ್‍ಗಳು ಮುಂಬೈ, ನವದೆಹಲಿ, ಬೆಂಗಳೂರು ಮತ್ತು ಚೆನ್ನೈನಲ್ಲಿ ಗರಿಷ್ಠ ಉದ್ಯೋಗಗಳೊಂದಿಗೆ ವರ್ಷದಲ್ಲಿ ಉನ್ನತ ನೇಮಕಾತಿ ಡೊಮೇನ್‍ಗಳಾಗಿ ಉಳಿದಿವೆ. ಆದಾಗ್ಯೂ ಕರ್ನಾಟಕ, ತೆಲಂಗಾಣ ಮತ್ತು ತಮಿಳುನಾಡು ಪ್ರದೇಶಗಳು ಸಹ ಪ್ರತಿಭೆಯನ್ನು ಆಕರ್ಷಿಸುವ ಮಾರುಕಟ್ಟೆಗಳಾಗಿ ಉಳಿದಿವೆ ಎಂದು ವಿವರಿಸಿದ್ದಾರೆ.
ಎಐ ವಲಯವು ಪ್ರಗತಿಯ ಹೆಚ್ಚಳದ ಪ್ರಮುಖ ಅಂಶವಾಗಿದ್ದು, ಎಐ ಮತ್ತು ಟೆಕ್ ಕೋರ್ಸ್‍ಗಳಿಂದ ಒಟ್ಟು ಆದಾಯದ ಶೇಕಡ 20 ರಷ್ಟು ಪಾಲು ಬಂದಿದೆ. ಇದರೊಂದಿಗೆ ಭಾರತ ಮತ್ತು ಆಗ್ನೇಯ ಏಷ್ಯಾಗಳಲ್ಲಿ ಲಭ್ಯವಿರುವ ಸಮಗ್ರ ಎಐ ಆಧರಿತ ಕೌಶಲ ಶ್ರೇಣಿಯಲ್ಲಿ ಅತಿದೊಡ್ಡ ಕಂಪನಿಯಾಗಿ ರೂಪುಗೊಂಡಿದೆ. ಅಮೆರಿಕ, ಬ್ರಿಟನ್ ಮತ್ತು ಯುರೋಪ್‍ನಿಂದ ಬರುವ ಜಿಸಿಸಿಗಳು, ಆಟೋಮೊಬೈಲ್, ಐಟಿಗಳು, ಬಿಎಫ್‍ಎಸ್‍ಐ, ಉತ್ಪಾದನೆ ಮತ್ತು ಸೇವೆಗಳಾದ್ಯಂತ ಪ್ರಮುಖ ಜಾಗತಿಕ ಪಾಲುದಾರರೊಂದಿಗೆ ಎಂಟರ್‍ಪ್ರೈಸ್ ಗ್ರಾಹಕರ ಸಂಖ್ಯೆ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 50 ರಷ್ಟು ಪ್ರಗತಿಯಾಗಿದೆ.