Monday, June 29, 2026
Google search engine
Homeಮನರಂಜನೆಪ್ರಭಾಸ್ ನಟನೆಯ ಸ್ಪಿರಿಟ್ ಚಿತ್ರದಿಂದ ಹೊರಬಿದ್ದ ದೀಪಿಕಾ ಪಡುಕೊಣೆ!

ಪ್ರಭಾಸ್ ನಟನೆಯ ಸ್ಪಿರಿಟ್ ಚಿತ್ರದಿಂದ ಹೊರಬಿದ್ದ ದೀಪಿಕಾ ಪಡುಕೊಣೆ!

ಪ್ರಭಾಸ್ ನಟನೆಯ ಸ್ಪಿರಿಟ್ ಚಿತ್ರದಿಂದ ಬಾಲಿವುಡ್ ಖ್ಯಾತ ನಟಿ ದೀಪಿಕಾ ಪಡುಕೋಣೆ ಅವರನ್ನು ಅನಿಮಲ್ ಖ್ಯಾತಿಯ ನಿರ್ದೇಶಕ ಸಂದೀಪ್ ರೆಡ್ಡಿ ವಾಂಗಾ ಹೊರಹಾಕಿದ್ದಾರೆ.

ಚಿತ್ರದ ತಯಾರಿ ಬಹುತೇಕ ಮುಗಿದಿದ್ದರೂ ಹಲವಾರು ಕಾರಣಗಳಿಂದ ಚಿತ್ರೀಕರಣ ತಡವಾಗುತ್ತಿದೆ. ದೀಪಿಕಾ ಪಡುಕೋಣೆ ಮಗುವಿಗೆ ಜನ್ಮ ನೀಡಿದ್ದು ಹಾಗೂ ಮಗುವಿನ ಹಾರೈಕೆ ಕಾರಣಕ್ಕೆ ಗೈರು ಹಾಜರಾಗಿದ್ದರೆ, ನಂತರ ಪ್ರಭಾಸ್ ಗಾಯಗೊಂಡಿದ್ದು ಹಾಗೂ ಬೇರೆ ಚಿತ್ರಗಳ ಕಮಿಟ್ ಮೆಂಟ್ ನಿಂದಾಗಿ ಚಿತ್ರ ಆರಂಭದಲ್ಲೇ ವಿಘ್ನಗಳನ್ನು ಎದುರಿಸುತ್ತಿದೆ.

ಇದೇ ವೇಳೆ ಚಿತ್ರೀಕರಣ ತಡವಾಗುತ್ತಿರುವ ಬಗ್ಗೆ ಅಸಮಾಧಾನಗೊಂಡ ನಿರ್ದೇಶಕ ಸಂದೀಪ್ ರೆಡ್ಡಿ ದೀಪಿಕಾ ಪಡುಕೋಣೆ ಅವರನ್ನು ಚಿತ್ರದಿಂದ ಹೊರ ಹಾಕಿದ್ದಾರೆ. ದೀಪಿಕಾ ವೃತ್ತಿಪರತೆ ಹೊಂದಿಲ್ಲ ಎಂದು ಅವರು ಆರೋಪಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಮತ್ತೊಂದು ಮೂಲಗಳ ಪ್ರಕಾರ ಚಿತ್ರದ ಸಂಭಾವನೆ ಕುರಿತು ಮನಸ್ತಾಪ ಉಂಟಾಗಿದೆ ಎಂದು ಹೇಳಲಾಗಿದೆ. ಇದರಿಂದ ಮಹತ್ವಾಕಾಂಕ್ಷೆ ಚಿತ್ರದಲ್ಲಿ ಪ್ರಭಾಸ್ ಜೊತೆ ನಟಿಸುತ್ತಾರೆ ಎಂದು ಹೇಳಲಾಗಿದ್ದ ದೀಪಿಕಾ ಪಡುಕೋಣೆ ಹೊರಬಿದ್ದಿದ್ದು, ಇದೀಗ ಆ ಸ್ಥಾನಕ್ಕೆ ಯಾರು ಬರುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments