Thursday, May 14, 2026
Google search engine
Homeಮನರಂಜನೆ1000 ಕೋಟಿ ಕ್ಲಬ್ ಸೇರಿದ ಧುರಂದರ್, 21 ದಿನದಲ್ಲಿ ಕಾಂತಾರ ದಾಖಲೆ ಉಢೀಸ್!

1000 ಕೋಟಿ ಕ್ಲಬ್ ಸೇರಿದ ಧುರಂದರ್, 21 ದಿನದಲ್ಲಿ ಕಾಂತಾರ ದಾಖಲೆ ಉಢೀಸ್!

ರಣಭೀರ್ ಸಿಂಗ್ ನಟಿಸಿ ಆದಿತ್ಯಾ ಧಾರ್ ನಿರ್ದೇಶಿಸಿದ ಧುರಂದರ್ ಚಿತ್ರ 1000 ಕೋಟಿ ರೂ. ಗಳಿಸುವ ಮೂಲಕ 2025ನೇ ಸಾಲಿನ ಅತೀ ದೊಡ್ಡ ಹಿಟ್ ಚಿತ್ರವಾಗಿ ಹೊರಹೊಮ್ಮಿದೆ.

ಧುರಂದರ್ ಚಿತ್ರ ಬಿಡುಗಡೆ ಆದ 21 ದಿನದಲ್ಲಿ 1000 ಕೋಟಿ ರೂ. ಗಳಿಸಿದೆ. ಅತ್ಯಲ್ಪ ಅವಧಿಯಲ್ಲಿ 1000 ಕೋಟಿ ಕ್ಲಬ್ ಸೇರಿದ ಕೆಲವೇ ಚಿತ್ರಗಳ ಸಾಲಿನಲ್ಲಿ ಧುರಂದರ್ ಸೇರ್ಪಡೆಯಾಗಿದ್ದು, ರಿಷಭ್ ಶೆಟ್ಟಿ ಅಭಿನಯದ ಕಾಂತಾರ ಚಾಪ್ಟರ್-1, ಅನಿಮಲ್ ಮುಂತಾದ ಹಲವು ಹಿಟ್ ಚಿತ್ರಗಳ ದಾಖಲೆ ಮುರಿದಿದೆ. ಕಾಂತಾರ ಚಾಪ್ಟರ್ -1 850 ಕೋಟಿ ರೂ.ಗಳಿಸಿದ್ದರೆ ರಣಭೀರ್ ಕಪೂರ್ ನಟಿಸಿದ ಅನಿಮಲ್ ಚಿತ್ರ 668.80 ಕೋಟಿ ರೂ. ಕಲೆ ಹಾಕಿತ್ತು.

ಧುರಂದರ್ ಚಿತ್ರ 21ನೇ ದಿನ 26 ಕೋಟಿ ರೂ. ಗಳಿಸಿ ಅಚ್ಚರಿ ಮೂಡಿಸಿದೆ. ಏಕೆಂದರೆ ಮೊದಲ ದಿನದ ಗಳಿಕೆಯೂ ಸುಮಾರು 28 ಕೋಟಿ ರೂ. ಆಗಿದ್ದು, ಅದರ ಆಸುಪಾಸಿನಲ್ಲೇ ಪ್ರತಿದಿನ ಗಳಿಕೆ ಮಾಡುತ್ತಿದ್ದು, ಗೆಲುವಿನ ನಾಗಾಲೋಟ ಮುಂದುವರಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments