ಸರಕಾರ ಜಾರಿಗೆ ತಂದ ಗೃಹಲಕ್ಷ್ಮೀ ಯೋಜನೆ ಯಶಸ್ಸಾಗಿದೆ. ಹಲವು ಜನ ಫಲಾನುಭವಿಗಳು ಸರಕಾರವನ್ನು ಹರಸುತ್ತಿದ್ದಾರೆ. ನಾಳೆ (ಬುಧವಾರ) 100 ಜನ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳು ಸುವರ್ಣಸೌಧಕ್ಕೆ ಬರುತ್ತಿದ್ದಾರೆ. ಅವರೊಂದಿಗೆ ಸಮಯ ಕಳೆಯುತ್ತೇನೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೋಳಿಗೆ ಊಟವನ್ನು ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಮಾಡಿಸಲಾಗುವುದು. ಬೋರವೆಲ್, ಗಿರಣಿ ಸೇರಿದಂತೆ ಹಲವು ಉದ್ಯೋಗಿನಿ ಮಹಿಳೆಯರಿಗೆ ಅವಕಾಶ ನೀಡಲಾಗಿದೆ ಎಂದರು.
ರಾಜ್ಯದಲ್ಲಿ ಬೆಂಗಳೂರು ಬಿಟ್ಟರೆ ಬಾಲ ಭವನ ಬೇರೆ ಬೇರೆ ಜಿಲ್ಲೆಗಳಲ್ಲಿ ಇವೆ. ಆದರೆ ಬೆಳಗಾವಿಯಲ್ಲಿ ಬಾಲ ಭವನ ಇಲ್ಲ, ಅದಕ್ಕೆ 20 ಕೋಟಿ ವೆಚ್ಚದಲ್ಲಿಬಾಲಭವನ ನಿರ್ಮಾಣಕ್ಕೆ ಸರಕಾರ ಮುಂದಾಗಿದೆ. ಸುಮಾರು 3 ಕೋಟಿ, ಮಕ್ಕಳಿಗಾಗಿ ರೈಲು, ಪ್ಯಾಂಟಿಸಿ ಪಾರ್ಕ್, ಗಾರ್ಡನ್, ಸೈನ್ಸ್ ಪಾರ್ಕ್ ಥೇಟರ್ ಸೇರಿದಂತೆ ಹಲವು ವಿನೂತನ ಯೋಜನೆ ಇದಾಗಿದೆ ಎಂದು ಮಾಹಿತಿ ನೀಡಿದರು.
ಕಾನೂನಿಗೆ ಎಲ್ಲರೂ ಗೌರವ ಕೊಡಬೇಕು, ನಾನು ಸರ್ಕಾರದ ಜವಾಬ್ದಾರಿ ಸ್ಥಾನದಲ್ಲಿ ಇದ್ದೇನೆ. ನಾನು ಸಮಾಜ ಹೊರತು ಪಡಿಸಿ ಇಲ್ಲ, ಹಾಗಂತ ಸರ್ಕಾರದ ಜವಾಬ್ದಾರಿ ಮರೆಯಕಾಗಲ್ಲ. ಯಾವುದೇ ಸಮುದಾಯ, ರಾಜಕಾರಣ ಕುರಿತು ಜಾಸ್ತಿ ಮಾತನಾಡಲು ಬಯಸುವುದಿಲ್ಲ ಎಂದು ಅವರು ಹೇಳಿದರು.