Sunday, December 7, 2025
Google search engine
Homeಜಿಲ್ಲಾ ಸುದ್ದಿಕೊಪ್ಪಳದಲ್ಲಿ ಬಾಣಂತಿ ಸಾವು: ಪ್ರಾಣಕ್ಕೆ ಕುತ್ತು ತಂದ ಅಧಿಕ ರಕ್ತದೊತ್ತಡ!

ಕೊಪ್ಪಳದಲ್ಲಿ ಬಾಣಂತಿ ಸಾವು: ಪ್ರಾಣಕ್ಕೆ ಕುತ್ತು ತಂದ ಅಧಿಕ ರಕ್ತದೊತ್ತಡ!

ಕೊಪ್ಪಳ: ಬಾಣಂತಿಯರ ಸಾವಿನ ಪ್ರಕರಣಗಳು ಮುಂದುವರಿಯುತ್ತಿದ್ದು, ಇದೀಗ ಕೊಪ್ಪಳದಲ್ಲಿ ಮಂಗಳವಾರ ಬಾಣಂತಿಯೊಬ್ಬರು ಮೃತಪಟ್ಟಿದ್ದಾರೆ.

ಗುರುವಾರ ಇಲ್ಲಿನ 100 ಹಾಸಿಗೆಗಳ ತಾಯಿ-ಶಿಶು ಆಸ್ಪತ್ರೆಯಲ್ಲಿ ಬಳ್ಳಾರಿ ಜಿಲ್ಲೆಯ ಸಂಡೂರಿನ ಐಶ್ವರ್ಯ (20) ನಂಜು ಕಾರಣಕ್ಕೆ ಮೃತಪಟ್ಟಿದ್ದರು. ಡಿಸೆಂಬರ್ ೩೧ರಂದು ಮಂಗಳವಾರ ಮುಂಜಾನೆ 7 ಗಂಟೆ ಸುಮಾರಿಗೆ ಕುಷ್ಟಗಿ ತಾಲೂಕಿನ ಆಡೂರು ಗ್ರಾಮದ ರೇಣುಕಾ ಪ್ರಕಾಶ್ ಹಿರೇಮನಿ (22) ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಅಸು ನೀಗಿದ್ದಾರೆ.

ಬಾಣಂತಿಯರ ಆರೋಗ್ಯದಲ್ಲಿ ಉಂಟಾದ ಏರು-ಪೇರಿನಿಂದ ಸಾವು ಸಂಭವಿಸಿರುವುದು ದೃಢವೆಂದು ಕೊಪ್ಪಳದ ಕಿಮ್ಸ್ನ ತಾಯಿ-ಶಿಶು ಆಸ್ಪತ್ರೆಯ ಮುಖ್ಯಸ್ಥ ಡಾ.ಬಿ.ಎಚ್.ನಾರಾಯಣಿ ತಿಳಿಸಿದರು.

ಕುಕನೂರು ತಾಲ್ಲೂಕಿನ ಆಡೂರು ಗ್ರಾಮದ ರೇಣುಕಾ ಪ್ರಕಾಶ ಹಿರೇಮನಿ (22) ಕೊನೆಯುಸಿರೆಳೆದಿದ್ದು, ಸೋಮವಾರ ಕುಷ್ಟಗಿಯ ಡಾ.ಚಂದ್ರಕಲಾ ಅವರ ಬಳಿ ತಪಾಸಣೆಗೊಳಗಾದಾಗ ಅಧಿಕ ರಕ್ತದೊತ್ತಡ ಕಂಡು ಬಂದಿದ್ದರಿಂದ ಮತ್ತು ಗರ್ಭದಲ್ಲಿದ್ದ 36 ವಾರ 6 ದಿನದ ಮಗು ಸಾವನ್ನಪ್ಪಿರುವ ಶಂಕೆಯಿಂದ ಕೊಪ್ಪಳದ ತಾಯಿ-ಶಿಶು ಆಸ್ಪತ್ರೆಗೆ ಶಿಫಾರಸು ಮಾಡಿದ್ದಾರೆ.

ಮೃತಪಟ್ಟಿರುವ ಮಗುವನ್ನು ಗರ್ಭದಿಂದ ಹೊರತೆಗೆದು ಬಾಣಂತಿ ರೇಣುಕಾ ಜೀವ ಉಳಿಸಲು ವೈದ್ಯಸಿಬ್ಬಂದಿ ಹರಸಾಹಸಪಟ್ಟರೂ ದುರದೃಷ್ಟವಶಾತ್ ಬಾಣಂತಿ ರೇಣುಕಾ ಸಹ ಕೊನೆಯುಸಿರೆಳೆದಿದ್ದಾರೆ. ಸ್ವಗ್ರಾಮ ಆಡೂರು ಗ್ರಾಮದಲ್ಲಿ ರೇಣುಕಾ ಅಂತ್ಯಕ್ರಿಯೆ ನೆರವೇರಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments