ಗಾಯಗೊಂಡಿದ್ದ ಅಯ್ಯಪ್ಪ ಮಾಲಾಧಾರಿಯೊಬ್ಬ ಮೃತಪಟ್ಟಿದ್ದು, ಇದರಿಂದ ಹುಬ್ಬಳ್ಳಿಯ ಉಣಕಲ್ ಸಮೀಪದ ಸಾಯಿನಗರದ ಅಚ್ಚವ್ವನ ಕಾಲೋನಿಯಲ್ಲಿರುವ ಈಶ್ವರ ದೇವಸ್ಥಾನದಲ್ಲಿ ಸಂಭವಿಸಿದ ಗ್ಯಾಸ್ ಸಿಲಿಂಡರ್ ಸೋರಿಕೆಯಲ್ಲಿ ಮೃತಪಟ್ಟವರ ಸಂಖ್ಯೆ 7ಕ್ಕೇರಿದೆ.
ಗ್ಯಾಸ್ ಸಿಲಿಂಡರ್ ಸೋರಿಕೆಯಿಂದ 9 ಮಂದಿ ಮಾಲಾಧಾರಿಗಳು ಗಂಭೀರವಾಗಿ ಗಾಯಗೊಂಡಿದ್ದರು. ಗುರುವಾರ ಅಜ್ಜಾ ಸ್ವಾಮಿ ಅಲಿಯಾಸ್ ನಿಜಲಿಂಗಪ್ಪ ಬೇಪುರಿ (58) ಹಾಗೂ ಸಂಜಯ ಸವದತ್ತಿ (18) ಚಿಕಿತ್ಸೆ ಫಲಿಸದೆ ಗುರುವಾರ ಮೃತಪಟ್ಟಿದ್ದರು.
ಡಿಸೆಂಬರ್ 27ರಂದು ಶುಕ್ರವಾರ ಮತ್ತೆ ಇಬ್ಬರು ಮಾಲಾದಾರಿಗಳಾದ ರಾಜು ಹರ್ಲಾಪುರ ಹಾಗೂ ಲಿಂಗರಾಜ ಬೀರನೂರ (19) ಕೊನೆಯುಸಿರೆಳೆದಿದ್ದರು. ಭಾನುವಾರ ಶಂಕರ್ ಚವ್ಹಾಣ ಹಾಗೂ ಮಂಜುನಾಥ ವಾಗ್ಮೋಡೆ ಎಂಬ ಇಬ್ಬರು ಮಾಲಾಧಾರಿಗಳು ಚಿಕಿತ್ಸೆ ಅಸುನೀಗಿದ್ದರು.
ಸೋಮವಾರ ತೇಜಸ್ ಎಂಬಾತ ಕೂಡ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು, ಸಾವಿನ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಗಾಯಗೊಂಡಿದ್ದ 9 ಮಂದಿಯ ಪೈಕಿ ಉಳಿದಿಬ್ಬರು ಕೂಡ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಶೇ.70ರಷ್ಟು ಸುಟ್ಟ ಗಾಯ ಇರುವುದರಿಂದ ಉಳಿಸಿಕೊಳ್ಳಲು ಕಠಿಣ ಪ್ರಯತ್ನ ನಡೆಸಿದ್ದೇವೆ ಎಂದು ವೈದ್ಯರು ತಿಳಿಸಿದ್ದಾರೆ.
ಕುಟುಂಬದ ಸದಸ್ಯರು ಕಣ್ಣೀರಿನಲ್ಲಿ ದಿನ ದೂಡುತ್ತಿದ್ದಾರೆ. ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಇನ್ನುಳಿದ ಇಬ್ಬರು ಅಯ್ಯಪ್ಪ ಮಾಲಾಧಿಗಾರಿಗಳಿಗೆ ಚಿಕಿತ್ಸೆ ಮುಂದುವರಿದಿದಿದೆ. ಅವರ ಸ್ಥಿತಿ ಚಿಂತಾಜಕವಾಗಿದ್ದು, ಕುಟುಂಬದವರು ಪಾರ್ಥನೆ ಮಾಡುತ್ತಿದ್ದಾರೆ.